More

    ರಸಾಯನ ಶಾಸ್ತ್ರದ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿ ಇಬ್ಬರು ಮಹಿಳಾ ವಿಜ್ಞಾನಿಗಳಿಗೆ

    ಸ್ಟಾಕ್​​ಹೋಂ: ಫ್ರೆಂಚ್​ ವಿಜ್ಞಾನಿ ಎಮ್ಯಾನುಯೆಲ್ ಚಾರ್ಪೆಂಟಿಯರ್​ ಮತ್ತು ಅಮೆರಿಕದ ಜೆನ್ನಿಫರ್​ ಎ.ಡೌಡ್ನಾ ಅವರು ಪ್ರಸಕ್ತ ಸಾಲಿನ ರಸಾಯನ ಶಾಸ್ತ್ರದ ಪ್ರತಿಷ್ಠಿತ ನೊಬೆಲ್​ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಇವರಿಬ್ಬರೂ ಜೀನ್​ ಎಡಿಟಿಂಗ್​ (ಜೀನೋಮ್​ ಎಡಿಟಿಂಗ್​)ನ ಒಂದು ವಿಧಾನವನ್ನು ಅಭಿವೃದ್ಧಿ ಪಡಿಸಿದ ಸಾಧನೆಗಾಗಿ ನೊಬೆಲ್​ ಪ್ರಶಸ್ತಿ ನೀಡಲಾಗಿದೆ.

    ಜೀನೋಮ್​ ಎಡಿಟಿಂಗ್​ಗೆ ತೀಕ್ಷ್ಣವಾದ ಸಾಧನಗಳನ್ನು ಎಮ್ಯಾನುಯೆಲ್ ಚಾರ್ಪೆಂಟಿಯರ್​ ಮತ್ತು ಜೆನ್ನಿಫರ್​ ಎ.ಡೌಡ್ನಾ ಕಂಡು ಹಿಡಿದಿದ್ದಾರೆ. ಇವರಿಗೆ ನೀಡಲಾಗುವ ಪ್ರಶಸ್ತಿ 10 ಮಿಲಿಯನ್​ ಸ್ವೀಡಿಶ್​ ಕ್ರೌನ್ (1.1ಮಿಲಿಯನ್ ಡಾಲರ್​) ಒಳಗೊಂಡಿದೆ. ​

    ಈ ಮಹಿಳಾ ವಿಜ್ಞಾನಿಗಳು ಅಭಿವೃದ್ಧಿ ಜೀನೋಮ್​ ಎಡಿಟಿಂಗ್​ ಹೊಸ ಜೀವ ವಿಜ್ಞಾನದ ಮೇಲೆ ಕ್ರಾಂತಿಕಾರಿ ಪರಿಣಾಮ ಬೀರಿದೆ. ಕ್ಯಾನ್ಸರ್​ಗೆ ಸಂಬಂಧಿಸಿದ ಹೊಸ ಚಿಕಿತ್ಸೆಗಳಿಗೆ ಕೊಡುಗೆ ನೀಡಿದೆ. ಆನುವಂಶಿಕ ಕಾಯಿಲೆಗಳನ್ನು ಗುಣಪಡಿಸುವತ್ತ ಹೊಸ ಭರವಸೆ ಮೂಡಿಸಿದೆ ಎಂದು ಸ್ವೀಡಿಶ್ ಅಕಾಡೆಮಿ ಆಫ್​ ಸೈನ್ಸಸ್​ ತಿಳಿಸಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts