More

    ಎಚ್‌ಐವಿ ಸೋಂಕು ಕಂಡು ಹಿಡಿದ, ನೊಬೆಲ್ ಪ್ರಶಸ್ತಿ ಪುರಸ್ಕೃತ ವಿಜ್ಞಾನಿ ಮೊಂಟಾಗ್ನಿಯರ್ ಇನ್ನಿಲ್ಲ

    ಪ್ಯಾರಿಸ್: ಎಚ್‌ಐವಿ ಸೋಂಕು ಕಂಡು ಹಿಡಿದವ, ನೊಬೆಲ್ ಪ್ರಶಸ್ತಿ ಪುರಸ್ಕೃತ, ಫ್ರೆಂಚ್ ದೇಶದ ವಿಜ್ಞಾನಿ ಲುಕ್ ಮೊಂಟಾಗ್ನಿಯರ್(89) ನಿಧನರಾದರು.

    ರಾಜಧಾನಿಯ ಪಶ್ಚಿಮ ಉಪನಗರ ನ್ಯೂಲ್ಲಿ-ಸುರ್-ಸೈನ್‌ನ ಅಮೆರಿಕ್​ ಹಾಸ್ಪಿಟಲ್ ಆಫ್ ಪ್ಯಾರಿಸ್‌ನಲ್ಲಿ ಗುರುವಾರ ಮಾಂಟಾಗ್ನಿಯರ್ ಕೊನೆಯುಸಿರೆಳೆದರು. ಇವರ ಸಾವಿಗೆ ಕಾರಣ ಏನೆಂದು ತಿಳಿದುಬಂದಿಲ್ಲ.

    1932ರಲ್ಲಿ ಮಧ್ಯ ಫ್ರಾನ್ಸ್‌ನ ಚಾಬ್ರಿಸ್ ಗ್ರಾಮದಲ್ಲಿ ಜನಿಸಿದ ಮಾಂಟಾಗ್ನಿಯರ್, ವೈರಾಲಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 1960ರಲ್ಲಿ ನ್ಯಾಷನಲ್ ಸೆಂಟರ್ ಫಾರ್ ಸೈಂಟಿಫಿಕ್ ರಿಸರ್ಚ್(CNRS)ಗೆ ಸೇರಿದರು. 1972ರಲ್ಲಿ ಪಾಶ್ಚರ್ ಇನ್​ಸ್ಟಿಟ್ಯೂಟ್‌ನ ವೈರಾಲಜಿ ವಿಭಾಗದ ಮುಖ್ಯಸ್ಥರಾಗಿ ನೇಮಕಗೊಂಡ ಮಾಂಟಾಗ್ನಿಯರ್, 1983ರಲ್ಲಿ ಏಡ್ಸ್‌(ಎಚ್​ಐವಿ) ಸೋಂಕಿನ ಬಗ್ಗೆ ಸಂಶೋಧನೆ ಮಾಡಿದರು. ಏಡ್ಸ್​ಗೆ ಕಾರಣವಾಗುವ ಮಾನವ ಇಮ್ಯುನೊ ಡಿಫಿಷಿಯೆನ್ಸಿ ವೈರಸ್(ಎಚ್‌ಐವಿ) ಅನ್ನು ಕಂಡು ಹಿಡಿದ ತಂಡದಲ್ಲಿ ಪ್ರಮುಖರಾಗಿದ್ದರು. ಎಚ್​ಐವಿ ಸೋಂಕು ಕಂಡುಹಿಡಿದ ಹಿನ್ನೆಲೆ 2008ರಲ್ಲಿ ಮಾಂಟಾಗ್ನಿಯರ್ ಅವರಿಗೆ ನೊಬೆಲ್ ಪ್ರಶಸ್ತಿಯೂ ಒಲಿದಿತ್ತು. ಸಹೋದ್ಯೋಗಿ ಫ್ರಾಂಕೋಯಿಸ್ ಬ್ಯಾರೆ-ಸಿನೋಸ್ಸಿ ಅವರೊಂದಿಗೆ ನೊಬೆಲ್ ಪ್ರಶಸ್ತಿಯನ್ನು ಮಾಂಟಾಗ್ನಿಯರ್ ಹಂಚಿಕೊಂಡಿದ್ದರು.

    ಬೆಂಗಳೂರಲ್ಲಿ ಒಣ ಕೊಂಬೆ ಬಿದ್ದು ಕೋಮಾದಲ್ಲಿದ್ದ ಬಾಲಕಿ ಸಾವು: 702 ದಿನ ಸತತ ಚಿಕಿತ್ಸೆಯ ನಂತರವೂ ಬದುಕಲಿಲ್ಲ…

    ತನ್ನ ಮಗ ಜನರಲ್​ ಮ್ಯಾನೇಜರ್​ ಆಗಬೇಕೆಂದು ಆಸೆಪಟ್ಟ ತಂದೆಗೆ ಮಹಾಮೋಸ! 70 ಲಕ್ಷ ರೂ. ಕಳಕೊಂಡು ಕಂಗಾಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts