More

    ರಾತ್ರಿ ಸ್ಟುಡಿಯೋ ಹೊರಗೆ ನಿಂತಿದ್ದ ಅಣ್ಣನ ಬೈಕ್​ ನೋಡಿ ತಮ್ಮ ವಾಪಸ್​ ಹೋಗಬಾರದಿತ್ತು…!

    ಚೆನ್ನೈ: ಖಾಸಗಿ ಕಾಲೇಜೊಂದರಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಈ ಯುವಕ ಅಂದು ಮನೆಯಿಂದ ಹೋದವನು ಎಷ್ಟೊತ್ತಾದರೂ ವಾಪಸ್​ ಬರಲಿಲ್ಲ. ಅಪ್ಪ-ಅಮ್ಮ ಗಾಬರಿಯಿಂದ ಕಾದಿದ್ದೇ ಬಂತು. ಕೊನೆಗೂ ಈತ ಜೀವ ಸಹಿತ ಬರಲಿಲ್ಲ..!

    ಆತ್ಮಹತ್ಯೆ ಮಾಡಿಕೊಂಡ ಯುವಕನ ಹೆಸರು ನಿತೀಶ್​ ಕುಮಾರ್​. ತಮಿಳುನಾಡಿನ ಚೆನ್ನೈನ ಕಿಲ್ಪೌಕ್​ ನಿವಾಸಿ. ಟ್ಯಾಟೂ ಸ್ಟುಡಿಯೋದಲ್ಲಿ ಪಾರ್ಟ್​ಟೈಂ ಕೆಲಸ ಮಾಡಿಕೊಂಡು ಕಾಲೇಜಿನಲ್ಲಿ ಓದುತ್ತಿದ್ದ. ಒಂದಷ್ಟು ಹಣವನ್ನೂ ಕೂಡಿಟ್ಟಿದ್ದ. ಆದರೆ ಆನ್​ಲೈನ್​ ಜೂಜಾಟದ ಚಟ ಅಂಟಿಸಿಕೊಂಡು, ಇದ್ದ ಹಣವನ್ನೆಲ್ಲ ಕಳೆದುಕೊಂಡು ಆತ್ಮಹತ್ಯೆ ದಾರಿ ಹಿಡಿದ.

    ಭಾನುವಾರ ಕೆಲಸಕ್ಕೆ ಹೋದವನು ರಾತ್ರಿಯಾದರೂ ಮನೆಗೆ ಬಾರದಾಗ ಅಪ್ಪ-ಅಮ್ಮ ಗಾಬರಿಯಾದರು. ನಿತೀಶ್​ ತಮ್ಮನನ್ನು ಸ್ಟುಡಿಯೋಕ್ಕೆ ಕಳಿಸಿದರು. ಅಲ್ಲಿ ಹೋದ ಸೋದರನಿಗೆ ಸ್ಟುಡಿಯೋ ಹೊರಗೆ ಅಣ್ಣನ ಬೈಕ್​ ಕಂಡಿತು. ಒಳಗೆ ಲೈಟ್ ಇಲ್ಲದ ಕಾರಣ, ಅಣ್ಣ ಅಲ್ಲಿಯೇ ಮಲಗಿರಬೇಕು, ನಾಳೆ ಬರುತ್ತಾನೆ ಎಂದುಕೊಂಡು ಮನೆಗೆ ವಾಪಸ್​ ಹೋದ. ಇದನ್ನೂ ಓದಿ: ಇನ್ಮುಂದೆ ಮದುವೆಯಲ್ಲೂ…ಮಸಣದಲ್ಲೂ 20 ಮಂದಿಗೆ ಮಾತ್ರ ಅವಕಾಶ; ಈ ರಾಜ್ಯದ ಖಡಕ್​ ಸೂಚನೆ

    ಆದರೆ ಬೆಳಗ್ಗೆಯಾದರೂ ಬಾರದಾಗ ಮತ್ತೊಮ್ಮೆ ಪಾಲಕರೇ ಬಂದರು. ಅಷ್ಟರಲ್ಲಿ ಸ್ಟುಡಿಯೋ ಮಾಲೀಕರೂ ಅಲ್ಲಿಗೆ ಬಂದಿದ್ದರು. ಬಾಗಿಲು ತೆಗೆದಾಗ ನಿತೀಶ್​ ಹೆಣ ಕಾಣಿಸಿತು.

    ಇನ್ನು ಡೆತ್​ ನೋಟ್​ ಕೂಡ ಸಿಕ್ಕಿದ್ದು, ನಾನು ಕ್ಯಾಸ್ಟೋ ಕ್ಲಬ್​ನಲ್ಲಿ ಹಣವನ್ನೆಲ್ಲ ಕಳೆದುಕೊಂಡೆ. ಹಾಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿಟ್ಟಿದ್ದ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.(ಏಜೆನ್ಸೀಸ್​)

    65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ ಬೆಲೆ; ಬಂಗಾರದಲ್ಲಿ ಹೂಡಿಕೆಗೆ ಸಕಾಲ….!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts