ಗಣೇಶ ವಿಸರ್ಜನೆ ವೇಳೆ ಪ್ರಸಾದ ತಿಂದವರು ಅಸ್ವಸ್ಥ; ಆಸ್ಪತ್ರೆಗೆ ದಾಖಲು

Hospital
Published on

ತುಮಕೂರು: ತಿಪಟೂರು ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಗಣೇಶ ವಿಸರ್ಜನೆ ವೇಳೆ ಆತಂಕಕಾರಿ ಘಟನೆ ನಡೆದಿದೆ. ಪ್ರಸಾದ ತಿಂದ ಸುಮಾರು 20 ಮಂದಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಗಣೇಶ ವಿಸರ್ಜನೆ ವೇಳೆ ಪೂಜೆ ನಂತರ ಮೊಳಕೆ ಕಟ್ಟಿದ ಹೆಸರು ಕಾಳು, ಪುಳಿಯೊಗರೆ ನೀಡಲಾಗಿತ್ತು. ಅದನ್ನು ತಿಂದ ಸುಮಾರು 20 ಮಂದಿಯಲ್ಲಿ ತಲೆಸುತ್ತು, ವಾಂತಿ ಕಾಣಿಸಿಕೊಂಡು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದರು.

ಇದೀಗ ಹಲವರು ಚಿಕಿತ್ಸೆ ಪಡೆದು, ಡಿಸ್​ಚಾರ್ಜ್​ ಆಗಿದ್ದಾರೆ. ಯಾವುದೇ ಪ್ರಾಣಾಪಾಯವಾಗಿಲ್ಲ ಎನ್ನಲಾಗಿದೆ. ಕೆ.ಬಿ.ಕ್ರಾಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net