More

    ರಾಬರ್ಟ್​ ಹೊಸ ದಾಖಲೆ: ಒಂದೇ ದಿನದಲ್ಲಿ 20 ಕೋಟಿ ರೂ ಗಳಿಕೆ!

    ಬೆಂಗಳೂರು: ದರ್ಶನ್ ಅಭಿನಯದ ‘ರಾಬರ್ಟ್’ ಚಿತ್ರವು ಗುರುವಾರವಷ್ಟೇ ಅದ್ದೂರಿಯಾಗಿ ಬಿಡುಗಡೆಯಾಗಿದೆ. ಈ ಚಿತ್ರದ ಮೊದಲ ದಿನದ ಕಲೆಕ್ಷನ್ ಎಷ್ಟಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇತ್ತು. ಇದೀಗ ಚಿತ್ರತಂಡದವರೇ ಈ ಪ್ರಶ್ನೆಗೆ ಉತ್ತರಿಸಿದ್ದು, ‘ರಾಬರ್ಟ್’ ಚಿತ್ರವು ಕರ್ನಾಟಕದಲ್ಲಿ ಮೊದಲ ದಿನ 17.24 ಕೋಟಿ, ಆಂಧ್ರ ಮತ್ತು ತೆಲಂಗಾಣದಿಂದ 3.12 ಕೋಟಿ ಸಂಗ್ರಹಿಸಿದೆ ಎಂದು ಮಾಹಿತಿ ನೀಡಿದ್ದಾರೆ.

    ಅಲ್ಲಿಗೆ, ಚಿತ್ರವು ಒಂದೇ ದಿನ 20 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವ ಮೂಲಕ ಹೊಸ ದಾಖಲೆ ಬರೆದಿದೆ. ಕೆಲವು ವಾರಗಳ ಹಿಂದೆ ಬಿಡುಗಡೆಯಾದ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರವು ಮೊದಲ ದಿನ 10.05 ಕೋಟಿ ಸಂಗ್ರಹಿಸಿದೆ ಮತ್ತು ಆರು ದಿನಗಳಲ್ಲಿ ಚಿತ್ರ 45 ಪ್ಲಸ್ ಕೋಟಿ ಕಲೆಕ್ಟ್ ಮಾಡಿದೆ ಎಂದು ಚಿತ್ರತಂಡದವರೇ ಸಂತೋಷಕೂಟದಲ್ಲಿ ಅಧಿಕೃತವಾಗಿ ಹೇಳಿಕೊಂಡಿದ್ದರು. ಈಗ ‘ರಾಬರ್ಟ್’ ಚಿತ್ರವು ಆ ದಾಖಲೆಯನ್ನು ಹಿಂದಿಕ್ಕಿದೆ. ಮೊದಲ ದಿನವೇ 20 ಕೋಟಿಯಾದರೆ, ಒಂದು ವಾರದಲ್ಲಿ ಚಿತ್ರ ಎಷ್ಟು ಸಂಗ್ರಹಿಸಬಹುದು ಎಂಬ ಲೆಕ್ಕಾಚಾರ ಇದೀಗ ಶುರುವಾಗಿದೆ.

    ಪೈರಸಿಗೆ ಕಡಿವಾಣ: ಚಿತ್ರದ ಪೈರಸಿ ಮಾಡಿದರೆ ಅಂಥವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ‘ರಾಬರ್ಟ್’ ನಿರ್ಮಾಪಕ ಉಮಾಪತಿ ಮೊದಲೇ ಎಚ್ಚರಿಸಿದ್ದರು. ಅದರ ನಡುವೆಯೂ ಪೈರಸಿ ನಡೆಯುತ್ತಿದ್ದು, ಎರಡು ದಿನಗಳಲ್ಲಿ ಆನ್​ಲೈನ್​ನಲ್ಲಿ ಮೂರು ಸಾವಿರ ಲಿಂಕ್​ಗಳನ್ನು ಡಿಲೀಟ್ ಮಾಡಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಪೈರಸಿ ಪತ್ತೆ ಮಾಡುವ ಜವಾಬ್ದಾರಿಯನ್ನು ಐಪ್ಲೆಕ್ಸ್ ಎಂಬ ಸಂಸ್ಥೆಗೆ ವಹಿಸಲಾಗಿದ್ದು, ಅದಕ್ಕಾಗಿಯೇ 25 ಲಕ್ಷ ವೆಚ್ಚ ಮಾಡಲಾಗಿದೆಯಂತೆ. ಈ ಸಂಸ್ಥೆಯ 87 ಜನ ನಿರಂತರವಾಗಿ ಇಂಟರ್​ನೆಟ್​ನಲ್ಲಿ ಎಲ್ಲೆಲ್ಲಿ ‘ರಾಬರ್ಟ್’ ಚಿತ್ರದ ಪೈರಸಿ ಲಿಂಕ್​ಗಳಿವೆಯೋ, ಅವನ್ನೆಲ್ಲ ಡಿಲೀಟ್ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಬಿಡುಗಡೆಯಾದ ದಿನವೇ ಲೀಕ್​ ಆದ ರಾಬರ್ಟ್​! 3,200ಕ್ಕೂ ಹೆಚ್ಚು ಲಿಂಕ್​ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts