More

    20 ಸಾವಿರ ಕ್ಯೂಸೆಕ್​ ನೀರು ಹೊರಕ್ಕೆ

    ಉಳ್ಳಾಗಡ್ಡಿ ಖಾನಾಪುರ: ಸಮೀಪದ ಹಿಡಕಲ್​ ಡ್ಯಾಂ (ರಾಜಾ ಲಖಮಗೌಡ ಜಲಾಶಯ)ನಿಂದ 10 ಕ್ರಸ್ಟ್​ ಗೇಟ್​ಗ್ಳ ಮೂಲಕ ಟಪ್ರಭಾ ನದಿಗೆ 20 ಸಾವಿರ ಕ್ಯೂಸೆಕ್​ ನೀರು ಹರಿಬಿಡಲಾಗಿದೆ ಎಂದು ಹುಕ್ಕೇರಿ ತಹಸೀಲ್ದಾರ್​ ಡಾ.ಡಿ.ಎಚ್​.ಹೂಗಾರ ಮಾಹಿತಿ ನೀಡಿದ್ದಾರೆ, ಕಳೆದ ಮೂರ್ನಾಲ್ಕು ದಿನಗಳಿಂದ ಕರ್ನಾಟಕ ಮತ್ತು ಮಹಾರಾಷ್ಟ್ರದ ಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಅಬ್ಬರದ ಮಳೆಯಿಂದಾಗಿ ರಾಜಾ ಲಖಮಗೌಡ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿದೆ.

    ಆ ಹಿನ್ನೆಲೆಯಲ್ಲಿ ಟಪ್ರಭಾ ನದಿಗೆ ಸುಮಾರು 20 ಸಾವಿರ ಕ್ಯೂಸೆಕ್​ ನೀರು ಹರಿಬಿಡಲಾಗಿದೆ. ನದಿ ದಡದ ಗ್ರಾಮಗಳ ಜನರು ಮುಂಜಾಗ್ರತೆ ವಹಿಸುವಂತೆ ಹಾಗೂ ಜಾನುವಾರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಂತೆ ಕೋರಿದ್ದಾರೆ. ಮಾರ್ಕಂಡೇಯ ಜಲಾಶಯ: ಹುಕ್ಕೇರಿ ತಾಲೂಕಿನ ಮಾರ್ಕಂಡೇಯ ಜಲಾಶಯಕ್ಕೆ 1,400 ಕ್ಯೂಸೆಕ್​ ನೀರು ಹರಿದು ಬರುತ್ತಿದೆ. ಜಲಾಶಯದಿಂದ ಭಾನುವಾರ 1,000 ಕ್ಯೊಸೆಕ್​ ನೀರು ಹೊರಬಿಡಲಾಗುತ್ತದೆ ಎಂದು ಜಲಾಶಯದ ಮೂಲಗಳು ತಿಳಿಸಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts