More

    ಟೈಗರ್​​-3 ಸಿನಿಮಾದ “ಲೇಕೆ ಪ್ರಭು ಕಾ ನಾಮ್​” ಸಾಂಗ್​​​ ​​​ ಔಟ್​- ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ..!

    Tiger-3 song out: ‘ಟೈಗರ್ 3’ ಚಿತ್ರದ ಮೊದಲ ಹಾಡು ಬಿಡುಗಡೆಯಾಗಿದೆ. ಗಾಯಕ ಅರ್ಜಿತ್​​ ಸಿಂಗ್​​ ಈ ಹಾಡನ್ನ ಹಾಡಿದ್ದು, ಸಾಂಗ್​​​ ಅನೌನ್ಸ್​​ ಆದಾಗಿನಿಂದಲೂ ಪ್ರೇಕ್ಷಕರ ಗಮನ ಈ ಹಾಡಿನ ಮೇಲಿತ್ತು. ಇವರಿಬ್ಬರ ಪೆಪ್ಪಿ ಡ್ಯಾನ್ಸ್​​ಗೆ ಜನರ ಮೆಚ್ಚುಗೆ ವ್ಯಕ್ತವಾಗಿದ್ದು, ಇವರಿಬ್ಬರ ಕೆಮಿಸ್ಟ್ರಿ ತೆರೆ ಮೇಲೆ ಸಕತ್​​​ ಆಗಿ ಕಾಣಿಸಿಕೊಂಡಿದ್ದಾರೆ.

    ಟೈಗರ್​​-3 ಸಿನಿಮಾದ "ಲೇಕೆ ಪ್ರಭು ಕಾ ನಾಮ್​" ಸಾಂಗ್​​​ ​​​ ಔಟ್​- ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ..!


    ಕತ್ರಿನಾ ಕೈಫ್ ಉಡುಗೆ ತೊಡುಗೆ ನೋಡುಗರ ಹುಬ್ಬೇರಿಸಿದ್ದು, ಸಾಕಷ್ಟು ಮಂದಿ ಕತ್ರಿನಾ ಈ ಹಾಡಿನಲ್ಲಿ ಹದ್ದಿನಂತೆ ಕಾಣುತ್ತಿದ್ದಾರೆಂದು ಕಾಮೆಂಟ್​​​ ಮಾಡಿದ್ದಾರೆ. ಈ ಹಿಂದೆ ಟೈಗರ್​​-2 ಚಿತ್ರದಲ್ಲಿದ್ದ ‘ಸ್ವಾಗ್​​ ಸೆ ಸ್ವಾಗತ್​​’ ಹಾಡಿನಂತೆ ಟೈಗರ್​-3 ಚಿತ್ರದ ಲೇಕೆ ಪ್ರಭು ಕಾ ನಾಮ್​ ಹಾಡೂ ಕೂಡಾ ಪೆಪ್ಪಿ ಡ್ಯಾನ್ಸ್​​​ ಹಾಡೇ ಆಗಿದೆ.

    ಟೈಗರ್​​-3 ಸಿನಿಮಾದ "ಲೇಕೆ ಪ್ರಭು ಕಾ ನಾಮ್​" ಸಾಂಗ್​​​ ​​​ ಔಟ್​- ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ..!


    9 ವರ್ಷಗಳ ಬಳಿಕ ಇದೀಗ ಅರ್ಜಿತ್​​​ ಸಿಂಗ್​​ ಸಲ್ಮಾನ್​​ ಸಿನಿಮಾಗೆ ಹಾಡಿದ್ದು, ಇವರಿಬ್ಬರ ನಡುವಿನ ವೈಮನಸ್ಸು ಇದೀಗ ಅಂತ್ಯ ಕಂಡಿದೆ. ಜತೆಗೆ ಈ ಹಾಡನ್ನು ಚಿತ್ರೀಕರಿಸಿರುವ ಸ್ಥಳವೂ ತುಂಬಾನೇ ಸುಂದರವಾಗಿದ್ದು, ಕತ್ರಿನಾ ಪ್ರತಿಯೊಂದು ಉಡುಗೆಯಲ್ಲಿಯೂ ವಿಭಿನ್ನವಾಗಿ ಮತ್ತು ಹಾಟಾಗಿ ಕಾಣಿಸಿಕೊಂಡಿದ್ದಾರೆ.

    ಟೈಗರ್​​-3 ಸಿನಿಮಾದ "ಲೇಕೆ ಪ್ರಭು ಕಾ ನಾಮ್​" ಸಾಂಗ್​​​ ​​​ ಔಟ್​- ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ..!


    ಸಲ್ಮಾನ್ ಖಾನ್ ”ಲೇಕೆ ಪ್ರಭು ಕಾ ನಾಮ್​” ಹಾಡಿನ ಕುರಿತಂತೆ ಮಾತನಾಡಿದ್ದು, ಕತ್ರೀನಾ ಮತ್ತು ನಾನು ಒಟ್ಟಿಗೆ ಸಾಕಷ್ಟು ಹಾಡಿನಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದೇವೆ. ಪ್ರತಿ ಬಾರಿ ನಾವಿಬ್ಬರೂ ಒಟ್ಟಿಗೇ ಹಾಡನಲ್ಲಿ ಕಾಣಿಸಿಕೊಳ್ಳಲಿದ್ದೇವೆ ಅನ್ನೋವಾಗ ಜನರ ನಿರೀಕ್ಷೆ ಮತ್ತೊಂದು ಹಂತದ್ದಾಗಿರುತ್ತೆ.

    ಟೈಗರ್​​-3 ಸಿನಿಮಾದ "ಲೇಕೆ ಪ್ರಭು ಕಾ ನಾಮ್​" ಸಾಂಗ್​​​ ​​​ ಔಟ್​- ಒಂದೇ ದಿನದಲ್ಲಿ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆ..!

    ಹಾಗಾಗಿ ಇದೀಗ ನಾವು ಜತೆಯಾಗಿ ಹೆಜ್ಜೆ ಹಾಕಿರುವ ‘ಲೇಕೆ ಪ್ರಭು ಕಾ ನಾಮ್’ ಜನರ ನಿರೀಕ್ಷೆಯಂತೆಯೇ ಇರಲಿದೆ ಎಂಬ ವಿಶ್ವಾಸ ನನಗಿದೆ ಎಂದಿದ್ದಾರೆ.
    ‘ಏಕ್ ಥಾ ಟೈಗರ್’ ಮತ್ತು ‘ಟೈಗರ್ ಜಿಂದಾ ಹೈ’ ಶೀರ್ಷಿಕೆಯ ಮೊದಲ ಎರಡು ಚಿತ್ರಗಳು ಬ್ಲಾಕ್ ಬಸ್ಟರ್ ಆಗಿದ್ದವು. ಇದೀಗ ಚಿತ್ರದ ಮೊದಲ; ಸಾಂಗ್​​​ ರಿಲೀಸ್​​ ಬಳಿಕ ಜನರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts