More

    20 ಮಂಗಗಳು ಕಾಡಿಗೆ

    ಬ್ಯಾಡಗಿ: ಪಟ್ಟಣದ ಗಾಂಧಿನಗರದಲ್ಲಿ ಮೂರು ತಿಂಗಳಿಂದ ಬೀಡುಬಿಟ್ಟಿದ್ದ ಮಂಗಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು, ಅರಣ್ಯ ಪ್ರದೇಶಕ್ಕೆ ಬಿಟ್ಟಿದೆ.

    ಏ. 16ರಂದು ವಿಜಯವಾಣಿಯಲ್ಲಿ ‘ಮಂಗಗಳ ಹಾವಳಿಯಿಂದ ಬೆಚ್ಚಿದ ಜನತೆ’ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತ್ತು. ಹಲವು ದಿನಗಳಿಂದ ಮಂಗಗಳ ಉಪಟಳಕ್ಕೆ ಸುಸ್ತಾಗಿದ್ದ ಸಾರ್ವಜನಿಕರು ಹಲವು ಬಾರಿ ಮನವಿ ಕೂಡ ಮಾಡಿದ್ದರು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಸಿಬ್ಬಂದಿ ಗುರುವಾರ ಗಾಂಧಿನಗರದಲ್ಲಿ ಬಲೆ ಹಾಕಿ, ಅದರಲ್ಲಿ ಆಹಾರ ಪದಾರ್ಥ ಇಟ್ಟು ಕಾದು ಕುಳಿತಿದ್ದರು. ಸುಮಾರು 20 ಮಂಗಗಳು ಬಲೆಯಲ್ಲಿ ಸಿಲುಕಿಕೊಂಡವು. ಅವುಗಳನ್ನು ಶುಕ್ರವಾರ ವಾಹನದಲ್ಲಿ ತೆಗೆದುಕೊಂಡು ಹೋಗಿ ಅರಣ್ಯ ಪ್ರದೇಶದಲ್ಲಿ ಬಿಡಲಾಯಿತು.

    ಈ ವೇಳೆ ಮಾತನಾಡಿದ ವಲಯ ಅರಣ್ಯಾಧಿಕಾರಿ ಮಹೇಶ ಮರಿಯಮ್ಮನವರ, ಕಾಡಿನಲ್ಲಿ ಆಹಾರ, ನೀರು ಲಭ್ಯವಾಗದ ಕಾರಣ ಮಂಗಗಳು ಊರು ಸೇರಿಕೊಂಡಿವೆ. ಬಹುತೇಕ ಮಂಗಗಳು ಜನರಿಗೆ ತೊಂದರೆ ನೀಡುತ್ತಿಲ್ಲ. ಕೆಲವೆಡೆ ಇವುಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಜನರಿಗೆ ತೊಂದರೆ ನೀಡುತ್ತಿವೆ. 20 ಮಂಗಗಳನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts