More

    ಇರಾಕ್​ ರಾಜಧಾನಿಯಲ್ಲಿರೋ ಅಮೆರಿಕ ವಾಯುನೆಲೆಗಳ ಮೇಲೆ ಅಪ್ಪಳಿಸಿದ ಮತ್ತೆರಡು ರಾಕೆಟ್​

    ಬಾಗ್ದಾದ್​: ಇರಾಕ್​ನಲ್ಲಿರುವ ಅಮೆರಿಕ ವಾಯುನೆಲೆಗಳ ಮೇಲೆ ಇರಾನ್ ಕ್ಷಿಪಣಿ​ ದಾಳಿ ನಡೆಸಿದ ದಿನದ ಬೆನ್ನಲ್ಲೇ ಮತ್ತೆರಡು ರಾಕೆಟ್​ ಇರಾಕ್​ ರಾಜಧಾನಿ ಬಾಗ್ದಾದ್​ನಲ್ಲಿನ ಗ್ರೀನ್​ಝೋನ್ ಮೇಲೆ ಅಪ್ಪಳಿಸಿದೆ.​

    ಬುಧವಾರ ತಡರಾತ್ರಿ ಈ ಘಟನೆ ನಡೆದಿದೆ. ಯುಎಸ್​ ವಾಯುನೆಲೆ ಸೇರಿದಂತೆ ವಿದೇಶಿ ರಾಯಭಾರ ಕಚೇರಿಗಳು ಇರುವ ಬಾಗ್ದಾದ್​ ಗ್ರೀನ್​ಝೋನ್​ ಮೇಲೆ ರಾಕೆಟ್​ ಅಪ್ಪಳಿಸಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

    ಮಂಗಳವಾರ ತಡರಾತ್ರಿ ಇರಾಕ್​ನಲ್ಲಿರುವ ಅಮೆರಿಕ ಸೇನಾ ಪಡೆ ಮತ್ತು ಇತರೆ ಸಮ್ಮಿಶ್ರ ಪಡೆಗಳನ್ನು ಗುರಿಯಾಗಿರಿಸಿಕೊಂಡು ಇರಾನ್​ ಡಜನ್​ಗಿಂತಲೂ ಹೆಚ್ಚಿನ ಕ್ಷಿಪಣಿ ದಾಳಿ ನಡೆಸಿದ ದಿನದ ಬೆನ್ನಲ್ಲೇ ಮತ್ತೆರಡು ರಾಕೆಟ್​ ದಾಳಿ ನಡೆದಿದೆ. ರಾಕೆಟ್​ ದಾಳಿಯಿಂದ ಉಂಟಾಗಿರುವ ಹಾನಿಯ ಬಗ್ಗೆ ಯಾವುದೇ ವರದಿಯಾಗಿಲ್ಲ.

    ಕಳೆದ ಶುಕ್ರವಾರ ಬಾಗ್ದಾದ್​ ಏರ್​ಪೋರ್ಟ್​ನಲ್ಲಿ ಇರಾನ್​ ಸೇನಾ ನಾಯಕ ಜನರಲ್​ ಕಾಸಿಂ ಸುಲೆಮಾನಿ ಮತ್ತು ಇರಾಕಿ ಕಮಾಂಡರ್​ ಅಬು ಮಹದಿ ಅಲ್​ ಮುಹಂದಿಸ್​ ಅಮೆರಿಕ ನಡೆಸಿದ ಡ್ರೋನ್​ ದಾಳಿಯಲ್ಲಿ ಮೃತರಾಗಿದ್ದರು. ಇದರ ಪ್ರತೀಕಾರವಾಗಿ ಇರಾನ್​ ಅಮೆರಿಕ ವಾಯುನೆಲೆಗಳನ್ನು ಗುರಿಯಾಗಿರಿಸಿಕೊಂಡು ನಿರಂತರ ದಾಳಿ ನಡೆಸುತ್ತಿದ್ದು, ಮಧ್ಯಪ್ರಾಚ್ಯ ರಾಷ್ಟ್ರದಲ್ಲಿ ಯುದ್ಧ ಭೀತಿ ಆವರಿಸಿಕೊಂಡಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts