More

    ಕಾಂಗ್ರೆಸ್​ಗೆ ಶಾಕ್​ ಮೇಲೆ ಶಾಕ್​: ಮಧ್ಯಪ್ರದೇಶ ಬೆನ್ನಲ್ಲೇ ಗುಜರಾತಿನ ಇಬ್ಬರು ಶಾಸಕರಿಂದ ರಾಜೀನಾಮೆ

    ಗಾಂಧಿನಗರ: ಬಹುದೊಡ್ಡ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್​ಗೆ ಶಾಕ್​ ಮೇಲೆ ಶಾಕ್​ ಎದುರಾಗುತ್ತಿದೆ. ಮಧ್ಯಪ್ರದೇಶದಲ್ಲಿ 22 ಶಾಸಕರು ರಾಜೀನಾಮೆ ನೀಡಿದ ಬೆನ್ನಲ್ಲೇ ಗುಜರಾತಿನಲ್ಲಿ ಇನ್ನಿಬ್ಬರು ಶಾಸಕರು ಕಾಂಗ್ರೆಸ್​ಗೆ ಗುಡ್​ ಬೈ ಹೇಳಿದ್ದಾರೆ.

    ಶಾಸಕರಾದ ಅಲ್ಪೇಶ್​ ಠಾಕೂರ್​ ಮತ್ತು ಧವಲ್ಸಿನ್ಹಾ ಜಲಾ ವಿಧಾನಸಭಾ ಸ್ಥಾನಕ್ಕೆ ಶುಕ್ರವಾರ ರಾಜೀನಾಮೆ ನೀಡಿದ್ದಾರೆ. ಅಲ್ಲದೆ, ರಾಜ್ಯಸಭಾ ಸ್ಥಾನಕ್ಕಾಗಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಯ ವಿರುದ್ಧವೇ ಅಡ್ಡಮತದಾನ ಮಾಡಿದ್ದಾರೆ.

    ನನ್ನ ಮತದ ಮೇಲೆ ಸಾಕಷ್ಟು ಸಮಸ್ಯೆಯನ್ನು ಸೃಷ್ಟಿಸಲು ಕಾಂಗ್ರೆಸ್​ ವೀಕ್ಷಕಗಾರ ಯತ್ನಿಸಿದರು. ಹೀಗಾಗಿ ನಾನು ಯಾರಿಗೆ ಮತ ಚಲಾಯಿಸಬೇಕು ಎಂದು ಅರ್ಥ ಮಾಡಿಕೊಂಡೆ ಎಂದು ಠಾಕೂರ್​ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಉತ್ತರ ಗುಜರಾತಿನ ರಾಧಾಂಪುರ ಕ್ಷೇತ್ರದಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದಿದ್ದಾರೆ.

    ಠಾಕೂರ್​ಗೆ ಆಪ್ತರಾಗಿರುವ ಧವಲ್​ ಜಲಾ ಕೂಡ ಅಡ್ಡ ಮತದಾನ ಮಾಡಿದ್ದು, ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಮೂಲಗಳ ಪ್ರಕಾರ ಶಾಸಕರಿಬ್ಬರು ಶೀಘ್ರದಲ್ಲೇ ಬಿಜೆಪಿ ಸೇರಲಿದ್ದು, ತಂತಮ್ಮ ಕ್ಷೇತ್ರಗಳಿಂದ ಉಪಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ತಿಳಿದುಬಂದಿದೆ.

    ಲೋಕಸಭೆಗೆ ಆಯ್ಕೆಯಾದ ಬಿಜೆಪಿ ನಾಯಕ ಅಮಿತ್​ ಷಾ ಮತ್ತು ನಾಯಕಿ ಸ್ಮೃತಿ ಇರಾನಿ ಅವರಿಂದ ಖಾಲಿಯಾದ ರಾಜ್ಯಸಭಾ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ನಾಯಕರಿಬ್ಬರು ಅಡ್ಡ ಮತದಾನ ಮಾಡಿದ್ದಾರೆ. (ಏಜೆನ್ಸೀಸ್​)

    ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್​ ಅಭ್ಯರ್ಥಿಗಳ ಪಟ್ಟಿ; ವಂಶ ರಾಜಕಾರಣಕ್ಕೆ ಮತ್ತೆ ಮಣೆ

    ವಿಶ್ವಾಸಮತಕ್ಕೆ ಅವಕಾಶ ಕೋರಿದ ಕಮಲ್​ನಾಥ್: 6 ಸಚಿವರನ್ನು ವಜಾ ಮಾಡಿದ ರಾಜ್ಯಪಾಲ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts