More

    ಸೈನಿಕರಿಗೆ ಕಾಡುತ್ತಿದೆ ಕರೊನಾ ಗುಮ್ಮ; ಬಿಎಸ್​ಎಫ್​ನ ಇಬ್ಬರು ಯೋಧರು ಕೊವಿಡ್​ನಿಂದ ಸಾವು

    ನವದೆಹಲಿ: ದೇಶ ಕಾಯುವ ಯೋಧರಿಗೂ ಮಹಾಮಾರಿಯಂತೆ ಕಾಡುತ್ತಿದೆ ಈ ಕೊವಿಡ್​-19.
    ಗಡಿ ಭದ್ರತಾ ಪಡೆ (ಬಿಎಸ್​ಎಫ್​)ಯ ಇಬ್ಬರು ಯೋಧರು ಕರೊನಾದಿಂದ ಸಾವನ್ನಪ್ಪಿದ್ದಾರೆ. ನಿನ್ನೆ ಓರ್ವ ಯೋಧ ದೆಹಲಿಯ ಸಫ್ದರ್​ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಇಂದು ಇನ್ನೋರ್ವ ಬಿಎಸ್​ಎಫ್​ ಯೋಧನ ಸಾವಾಗಿದೆ.

    ಕಳೆದ ತಿಂಗಳು ಸಿಆರ್​ಪಿಎಫ್​ನ 55 ವರ್ಷದ ಸಬ್​ ಇನ್ಸ್​ಪೆಕ್ಟರ್​ ಕೊವಿಡ್​ನಿಂದ ಸಾವನ್ನಪ್ಪಿದ್ದರು. ಈಗ ಇವರಿಬ್ಬರು ಮೃತಪಟ್ಟಿದ್ದು, ಸೇನಾ ವಲಯದಲ್ಲಿ ಆತಂಕ ಸೃಷ್ಟಿಸಿದೆ.

    ಸುಮಾರು 2.5 ಲಕ್ಷ ಸಿಬ್ಬಂದಿಯಿರುವ ಗಡಿ ಭದ್ರತಾ ಪಡೆಯಲ್ಲಿ 193 ಕರೊನಾ ಸೋಂಕಿತರು ಇದ್ದಾರೆ. ಇಂದು 41 ಹೊಸ ಕೇಸ್​ಗಳು ಪತ್ತೆಯಾಗಿವೆ. ಆರೋಗ್ಯ ಇಲಾಖೆಯಿಂದ ವಿಧಿಸಲಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲನೆ ಮಾಡಲಾಗುತ್ತಿದೆ. ವ್ಯವಸ್ಥಿತವಾದ ಐಸೋಲೇಶನ್​ ವಾರ್ಡ್​ಗಳು, ಕ್ವಾರಂಟೈನ್​ ಸೆಂಟರ್​ಗಳನ್ನೂ ನಿರ್ಮಿಸಲಾಗಿದೆ ಎಂದು ಬಿಎಸ್​ಎಫ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಸೇನಾನಿಗಳ ತ್ಯಾಗ ಶ್ಲಾಘನೀಯ

    ಬುಧವಾರ ಒಂದೇ ದಿನ 85 ಬಿಎಸ್​ಎಫ್​ ಯೋಧರಲ್ಲಿ ಕರೊನಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅದರಲ್ಲಿ ಹೆಚ್ಚಿನ ಪ್ರಕರಣ ಕಂಡುಬಂದಿದ್ದು, ದೆಹಲಿ, ಕೋಲ್ಕತ್ತಾ, ತ್ರಿಪುರದಿಂದ ಎಂದು ಬಿಎಸ್​ಎಫ್​ ವಕ್ತಾರ ಶುಭೇಂದು ಭಾರದ್ವಾಜ್​ ತಿಳಿಸಿದ್ದಾರೆ.

    ಕೇಂದ್ರ ಪ್ಯಾರಾಮಿಲಿಟರಿ ಪಡೆಗಳ ಒಟ್ಟು 400 ಸೈನಿಕರು ಕರೊನಾ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು ರಾಷ್ಟ್ರಾದ್ಯಂತ ಹಲವು ಯೋಧರು ಲಾಕ್​ಡೌನ್​ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ. ಅವರ ಆರೋಗ್ಯವೂ ಅಪಾಯದಲ್ಲೇ ಇದೆ. (ಏಜೆನ್ಸೀಸ್​)

    ಇದನ್ನೂ ಓದಿ: ಓಖಾದ ಕಡಲ ಗಡಿರೇಖೆ ಬಳಿ ಭಾರತದ ಎರಡು ಬೋಟ್​ಗಳ ಮೇಲೆ ಗುಂಡಿನ ದಾಳಿ ನಡೆಸಿದ ಪಾಕ್​ ನೌಕಾಪಡೆ ಸೈನಿಕರು

    ಉಗ್ರ ರಿಯಾಜ್​ ನಾಯ್ಕೂ ಎನ್​ಕೌಂಟರ್​ಗೆ ರಕ್ಷಣಾ ಪಡೆಗಳ ಸಹಾಯಕ್ಕೆ ನಿಂತಿದ್ದು ಇನ್ನೊಂದು ಉಗ್ರಸಂಘಟನೆ…!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts