More

    ಕೆರೆಗಳ ಪುನಃಶ್ಚೇತನಕ್ಕೆ 2.85 ಕೋಟಿ ರೂ.

    ಹಾನಗಲ್ಲ: ರಾಜ್ಯ ಸರ್ಕಾರದ ಜಲಾಮೃತ ಯೋಜನೆಯಡಿ ತಾಲೂಕಿನ 8 ಗ್ರಾಮಗಳಲ್ಲಿ 2.85 ಕೋಟಿ ರೂ. ವೆಚ್ಚದಲ್ಲಿ ಕೆರೆಗಳ ಪುನಃಶ್ಚೇತನ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಗ್ರಾಮಸ್ಥರು ಕೆರೆಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಶಾಸಕ ಸಿ.ಎಂ. ಉದಾಸಿ ಮನವಿ ಮಾಡಿದರು.

    ಪಟ್ಟಣದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ಪಂಚಾಯಿತಿ ಉಪವಿಭಾಗದಿಂದ ಕಾಮಗಾರಿ ಅನುಷ್ಠಾನಗೊಳಿಸಲಾಗುತ್ತಿದ್ದು, ಜಲಾಮೃತ ಯೋಜನೆಯಡಿ ಕೆರೆಗಳ ಹೂಳು ತೆಗೆಯುವುದು, ಪುನಃಶ್ಚೇತನಗೊಳಿಸುವುದು, ಕೆರೆಯ ನೀರಿನ ಮೂಲ ಬಲಪಡಿಸಲಾಗುತ್ತಿದೆ. ತಾಲೂಕಿನ ಹಂದಿಹಾಳ ಗ್ರಾಮದ ಗೊಟಗೋಡಿ ಕೆರೆಗೆ 30 ಲಕ್ಷ ರೂ, ಬಾಳೂರಿನ ಯರಗಟ್ಟಿ ಕೆರೆಗೆ 40 ಲಕ್ಷ ರೂ, ಅಕ್ಕಿಆಲೂರಿನ ಮುಗಳಿಕಟ್ಟಿ ಕೆರೆಗೆ 40 ಲಕ್ಷ ರೂ, ಬೊಮ್ಮನಹಳ್ಳಿಯ ವಡ್ಡನಕಟ್ಟಿ ಕೆರೆಗೆ 35 ಲಕ್ಷ ರೂ, ಶೇಷಗಿರಿಯ ಗೌಡನಕಟ್ಟಿ ಕೆರೆಗೆ 40 ಲಕ್ಷ ರೂ, ಮೂಡೂರಿನ ಕತ್ತಲಗೆರೆ ಕೆರೆಗೆ 30 ಲಕ್ಷ ರೂ, ಹರಳಕೊಪ್ಪದ ಹೊಸಕಟ್ಟಿ ಕೆರೆಗೆ 40 ಲಕ್ಷ ರೂ, ಮಾರನಬೀಡದ ದೊಡ್ಡಕೆರೆ ಅಭಿವೃದ್ಧಿಗೆ 30 ಲಕ್ಷ ರೂ ಸೇರಿ ಒಟ್ಟು 2.85 ಕೋಟಿ ರೂ. ಬಿಡುಗಡೆಯಾಗಿದೆ ಎಂದರು.

    ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡು ಗುತ್ತಿಗೆದಾರರು ಹೂಳೆತ್ತುವ ಕಾರ್ಯ ಪ್ರಾರಂಭಿಸಲಿದ್ದಾರೆ. ರೈತ ಸಮುದಾಯ ಈ ಫಲವತ್ತಾದ ಮಣ್ಣನ್ನು ತಮ್ಮ ಹೊಲ-ಗದ್ದೆ, ತೋಟಗಳಿಗೆ ಸ್ವಂತ ವಾಹನಗಳ ಮೂಲಕ ಸಾಗಿಸಿ ಸಹಕರಿಸಬೇಕು. ಪ್ರತಿ ವಾಹನಕ್ಕೆ 20 ರೂ. ನಂತೆ ತಮ್ಮ ವಂತಿಗೆಯನ್ನು ಜಲಾಮೃತ ಸಮಿತಿಗೆ ಜಮಾ ಮಾಡಬೇಕು ಎಂದು ತಿಳಿಸಿದರು.

    ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಕೆರೆ-ಕಟ್ಟೆಗಳ ಅಭಿವೃದ್ಧಿ ಕಾಮಗಾರಿ ಸೇರಿ ರಸ್ತೆ, ಕಾಲುವೆ ನಿರ್ಮಾಣ ಕಾಮಗಾರಿಗಳಲ್ಲಿ ಜಾಬ್​ಕಾರ್ಡ್ ಹೊಂದಿರುವ ರೈತ ಕಾರ್ವಿುಕರು ಪಾಲ್ಗೊಳ್ಳಬೇಕು. ಕೆಲಸಕ್ಕಾಗಿ ಬೇರೆಡೆಗೆ ವಲಸೆ ಹೋಗದಂತೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಲು ಕಾಮಗಾರಿಗಳನ್ನು ಆಯಾ ಗ್ರಾಪಂ ವ್ಯಾಪ್ತಿಯಲ್ಲಿ ಕ್ರಮ ಜರುಗಿಸಲಾಗಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts