More

    ಮುಂದುವರಿದ ಸಾವಿನ ಸರಣಿ

    ಮಂಗಳೂರು: ದ.ಕ. ಜಿಲ್ಲೆಯಲ್ಲಿ ಗುರುವಾರ 198 ಕರೊನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಕಳೆದ ಎರಡು ದಿನಗಳಲ್ಲಿ ಮೃತಪಟ್ಟ 8 ಮಂದಿಯಲ್ಲೂ ಕರೊನಾ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 150 ತಲುಪಿದೆ.
    ಮೃತರಾದವರು ಹಲವು ರೀತಿಯ ಕಾಯಲೆಗಳಿಂದ ಬಳಲುತ್ತಿದ್ದರು. ಪುತ್ತೂರು ಮೂಲದ 36 ವರ್ಷದ ಮಹಿಳೆ ಜು.26ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ 28ರಂದು ಮೃತಪಟ್ಟರು. ಮಂಗಳೂರು ನಿವಾಸಿ 60ರ ಮಹಿಳೆ 29ರಂದು ಆಸ್ಪತ್ರೆಗೆ ದಾಖಲಾಗಿ ಅದೇ ದಿನ ಮೃತರಾದರು. ದಾವಣಗೆರೆ ಮೂಲದ 60ರ ಮಹಿಳೆ ಜು.23ರಂದು ಆಸ್ಪತ್ರೆಗೆ ದಾಖಲಾಗಿ ಬುಧವಾರ ನಿಧನರಾಗಿದ್ದಾರೆ. ಮಂಗಳೂರಿನ 57 ವರ್ಷದ ಗಂಡಸು ಜು.26ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬುಧವಾರ ಕೊನೆಯುಸಿರೆಳೆದರು.

    ಮೈಸೂರು ನಿವಾಸಿ 75 ವರ್ಷದ ವೃದ್ಧ 26ರಂದು ವೆನ್ಲಾಕ್‌ಗೆ ದಾಖಲಾಗಿ ಗುರುವಾರ ನಿಧನರಾದರು. ಪುತ್ತೂರಿನ 64 ವರ್ಷದ ವೃದ್ಧ ಖಾಸಗಿ ಆಸ್ಪತ್ರೆಗೆ 22ರಂದು ದಾಖಲಾಗಿ ಗುರುವಾರ ಮೃತಪಟ್ಟರು. ಮಂಗಳೂರಿನ ನಿವಾಸಿ 52ರ ಗಂಡಸು ಜು.28ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ನಿಧನರಾದರೆ ಮಂಗಳೂರು ಮೂಲದ 87ರ ವೃದ್ಧೆ ಜು.18ರಂದು ಖಾಸಗಿ ಆಸ್ಪತ್ರೆಗೆ ದಾಖಲಾಗಿ ಗುರುವಾರ ಮೃತಪಟ್ಟಿದ್ದಾರೆ.
    ಪ್ರಾಥಮಿಕ ಸಂಪರ್ಕದಿಂದ 27, ಐಎಲ್‌ಐನಿಂದ 80, ತೀವ್ರ ಉಸಿರಾಟ ತೊಂದರೆಯ 14, ನಾಲ್ವರು ಅಂತಾರಾಷ್ಟ್ರೀಯ ಪ್ರಯಾಣಿಕರು ಕರೊನಾ ಸೋಂಕಿಗೊಳಗಾಗಿದ್ದರೆ 73 ಮಂದಿಯ ಸಂಪರ್ಕ ಶೋಧಿಸಲಾಗುತ್ತಿದೆ. ಒಟ್ಟು ಸೋಂಕಿತರ ಸಂಖ್ಯೆ 5509 ಆಗಿದ್ದು, ಇದರಲ್ಲಿ 2800 ಸಕ್ರಿಯ ಪ್ರಕರಣಗಳಿವೆ.
    ಗುರುವಾರ ಒಂದೇ ದಿನ 105 ಮಂದಿ ಕರೊನಾ ಮುಕ್ತರಾಗಿ ಬಿಡುಗಡೆಯಾಗಿದ್ದಾರೆ.

    ಹಸುಗೂಸು ಸಾವು
    ಬೆಳ್ತಂಗಡಿ: ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿದ್ದು, ವಾರದ ಹಿಂದೆ ಮನೆಗೆ ಮರಳಿದ್ದ ಇಂದಬೆಟ್ಟು ಬಂಗಾಡಿಯ 45 ದಿನಗಳ ಮಗು ಬುಧವಾರ ಮೃತಪಟ್ಟಿದೆ. ಮಗುವನ್ನು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ಕರೆ ತಂದು ಕರೊನಾ ಟೆಸ್ಟ್‌ಗೆ ಒಳಪಡಿಸಿದಾಗ ಪ್ರಥಮ ಹಂತದಲ್ಲಿ ನೆಗೆಟಿವ್ ಬಂದಿತ್ತು. ಆದರೆ ಮಗುವಿನ ಅಜ್ಜಿಗೆ ಪಾಸಿಟಿವ್ ದೃಢಪಟ್ಟಿದೆ. ಮೃತ ಮಗುವಿನ ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿದೆ. ಸದ್ಯ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.

    ಕಾಸರಗೋಡು 28 ಮಂದಿಯಲ್ಲಿ ಸೋಂಕು
    ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ 28 ಮಂದಿಯಲ್ಲಿ ಕರೊನಾ ಪತ್ತೆಯಾಗಿದೆ. 21 ಮಂದಿಗೆ ಸಂಪರ್ಕದ ಮೂಲಕ ರೋಗ ಬಾಧಿಸಿದೆ. ಇವರಲ್ಲಿ ಮೂವರ ಸಂಪರ್ಕ ಮೂಲ ಪತ್ತೆಯಾಗಿಲ್ಲ. ತಲಾ ಇಬ್ಬರು ವಿದೇಶದಿಂದ ಹಾಗೂ ಇತರ ರಾಜ್ಯಗಳಿಂದ ಬಂದವರು. ಕೇರಳದಲ್ಲಿ 506 ಮಂದಿಗೆ ಕೋವಿಡ್ ದೃಢಪಟ್ಟಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts