More

    18ರಂದು ಕಪಿಲೇಶ್ವರ ದೇವಸ್ಥಾನದ ಸಭಾಗೃಹ ಉದ್ಘಾಟನೆ ಕಾರ್ಯಕ್ರಮ

    ಬೆಳಗಾವಿ: ನಗರದ ಕಪಿಲೇಶ್ವರ ದೇವಸ್ಥಾನದ ಸಭಾಗೃಹ ಉದ್ಘಾಟನೆ ಕಾರ್ಯಕ್ರಮ ಫೆ. 18ರಂದು ಸಂಜೆ 6ಗಂಟೆಗೆ ನಡೆಯಲಿದೆ ಎಂದು ಕಪಿಲೇಶ್ವರ ಮಹದಾವೇ ವಿಶ್ವಸ್ಥ ಮಂಡಳಿ ಅಧ್ಯಕ್ಷ ಸುನೀಲ ಬಾಳೇಕುಂದ್ರಿ ತಿಳಿಸಿದರು.

    ನಗರದ ದೇವಸ್ಥಾನದ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣಕಾಶಿ ಎಂದು ಪ್ರಸಿದ್ಧಿಯಾದ ಕಪಿಲೇಶ್ವರ ದೇವಸ್ಥಾನವನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದೀಗ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಶಿವ ಪುರಾಣ ಬಿಂಬಿಸುವ ಚಿತ್ರಗಳನ್ನು ಒಳಗೊಂಡ ಸಭಾಗೃಹ ಉದ್ಘಾಟನೆಯಾಗುತ್ತಿದೆ ಎಂದರು.

    ಮುಂಬರುವ ದಿನಗಳಲ್ಲಿ ಭಕ್ತರ ದೇಣಿಗೆ, ದೇವಸ್ಥಾನ ಆದಾಯಗಳನ್ನು ಬಳಸಿಕೊಂಡು ವೈದ್ಯಕೀಯ ಪಾಠ ಶಾಲೆ, ಋಷಿ ಮನಿಗಳ ಇತಿಹಾಸ ತಿಳಿಸುವ ಮತ್ತು ಮಾಹಿತಿಗಳನ್ನು ಒಳಗೊಂಡಿರುವ ಕೊಠಡಿ ನಿರ್ಮಣ ಮಾಡಲಾಗುವುದು. ಅಲ್ಲಿಯೂ ಚಿತ್ರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕಾಗಿ ವಿಶೇಷ ಯೋಜನೆ ಹಾಕಿಕೊಳ್ಳಲಾಗುತ್ತಿದೆ. ದೇವಸ್ಥಾನಕ್ಕೆ ಭಕ್ತರಿಗೆ ಶಿವನ ದರ್ಶನದ ಜತೆಗೆ ಪಾರಂಪರಿಕ ಇತಿಹಾಸಿ ತಿಳಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ಈಗಾಗಲೇ ದೇವಸ್ಥಾನದಲ್ಲಿ ಭಕ್ತರಿಗೆ ಮಹಾ ಪ್ರಸಾದ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ ಶಿಬಿರ ಹಾಗೂ ಸಾಮಾಜಿಕ ಚಟುವಟಿಕೆಗಳನ್ನು ನಿರಂತರವಾಗಿ ಹಮ್ಮಿಕೊಂಡು ಬರಲಾಗುತ್ತಿದೆ. ತಳಮಹಡಿಯಲ್ಲಿ ಸಭಾಗೃಹ, ಮೊದಲನೇ ಮಹಡಿಯಲ್ಲಿ ಸಾಂಸ್ಕೃತಿಕ ಭವನ, 2ನೇ ಮಹಡಿಯಲ್ಲಿ ತ್ಯಾಜ್ಯದಿಂದ ಸೆಂದ್ರಿಯ ಗೊಬ್ಬರ ತಯಾರಿಕಾ ಘಟಕ ನಿರ್ಮಿಸಲಾಗುವುದು. ಅಷ್ಟೇ ಅಲ್ಲದೆ ಭಾರತೀಯ ಸೇನೆ ಭರ್ತಿ ರ‌್ಯಾಲಿಗೆ ವಿವಿಧ ಭಾಗಗಳಿಂದ ಆಗಮಿಸುವ ಅಭ್ಯರ್ಥಿಗಗಳಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ತಿಳಿಸಿದರು.

    ರಾಜು ಭಾತಖಂಡೆ, ರಾಹುಲ ಕುರಣೇ, ರಾಕೇಶ ಕಲಘಟಗಿ , ಅಭಿಜಿತ ಚೌಹಾಣ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts