More

    ಚೀನಾ ಅಧ್ಯಕ್ಷರನ್ನು ವಿದೂಷಕ ಎಂದು ಟೀಕಿಸಿದವನಿಗೆ 18 ವರ್ಷ ಜೈಲುಶಿಕ್ಷೆ!

    ಬೀಜಿಂಗ್: ಕರೊನಾ ವಿಚಾರದಲ್ಲಿ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಅವರನ್ನು ‘ವಿದೂಷಕ’ ಎಂದು ಟೀಕಿಸಿದ್ದ ಉದ್ಯಮಿಗೆ ಭ್ರಷ್ಟಾಚಾರ ಆರೋಪದಡಿ 18 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಉದ್ಯಮಿ ಸ್ವಯಂಪ್ರೇರಿತವಾಗಿ ಭ್ರಷ್ಟಾಚಾರದ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ಕೋರ್ಟ್ ಹೇಳಿದೆ.

    ರೆನ್ ಝಿಕ್ಸಿಯಾಂಗ್ (69) ಸರ್ಕಾರಿ ಸೌಮ್ಯದ ಸಂಸ್ಥೆಯೊಂದರ ಮಾಜಿ ಮುಖ್ಯಸ್ಥರಾಗಿದ್ದು, ಕಮ್ಯುನಿಸ್ಟ್ ಪಾರ್ಟಿಯ ಆಂತರಿಕ ವಲಯದಲ್ಲಿ ಗುರುತಿಸಿಕೊಂಡವರಾಗಿದ್ದಾರೆ. ಅವರು ಕಳೆದ ಮಾರ್ಚ್‌ನಲ್ಲಿ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ರನ್ನು ವಿರೋಧಿಸಿ ಲೇಖನವೊಂದನ್ನು ಬರೆದಿದ್ದರು.

    ಕರೊನಾ ಸಮಯದಲ್ಲಿ ರಾಜಕಾರಣಿಗಳು ತಮ್ಮ ಹಿತಾಸಕ್ತಿಯನ್ನು ನೋಡಿಕೊಳ್ಳುತ್ತಿದ್ದು, ‘ವಿದೂಷಕ’ರಂತಾಗಿದ್ದಾರೆ ಎಂದು ಟೀಕಿಸಿದ್ದರು. ಲೇಖನ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ಅವರು ನಿಗೂಢವಾಗಿ ನಾಪತ್ತೆಯಾಗಿದ್ದರು. ಅವರ ವಿರುದ್ಧ ಭ್ರಷ್ಟಾಚಾರ, ಕಳ್ಳಸಾಗಣೆ ಆರೋಪ ಮಾಡಲಾಗಿತ್ತು. ಅದೇ ಆರೋಪದಲ್ಲಿ ಅವರಿಗೀಗ ಶಿಕ್ಷೆ ಪ್ರಕಟವಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts