More

    ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 14 ಲಕ್ಷ ರೂ. ಮೌಲ್ಯದ 18 ಕೆಜಿ ತೂಕದ ಬೆಳ್ಳಿ ಆಭರಣಗಳು ಸೀಜ್!​

    ಬೆಂಗಳೂರು: ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ 14.04 ಲಕ್ಷ ರೂ. ಮೌಲ್ಯದ 18.16 ಕೆ.ಜಿ. ತೂಕದ ಬೆಳ್ಳಿ ಆಭರಣಗಳನ್ನು ಹಲಸೂರು ಠಾಣೆ ಪೊಲೀಸರು ವಶಪಡಿಸಿಕೊಂಡಿದ್ದಾರೆ.

    ಚುನಾವಣಾ ನೀತಿ ಸಂಹಿತೆ ಜಾರಿ ಹಿನ್ನೆಲೆಯಲ್ಲಿ ಗುರುವಾರ ರಾತ್ರಿ ಪೊಲೀಸರು ಗಸ್ತಿನಲ್ಲಿ ಇರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಗೌತಮಪುರ ರಸ್ತೆಯಲ್ಲಿ ಬ್ಯಾಗ್ ಹಿಡಿದು ಬರುವಾಗ ತಡೆದು ಪರಿಶೀಲಿಸಿದಾಗ ಬೆಳ್ಳಿ ಆಭರಣಗಳು ಪತ್ತೆಯಾಗಿವೆ. ವಿಚಾರಣೆ ವೇಳೆ ಸೂಕ್ತ ದಾಖಲೆಗಳು ಇಲ್ಲದಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೆಳ್ಳಿಯ ಸರಗಳು, ಬೆಳ್ಳಿಯ ಕರಿಮಣಿ ಸರಗಳು, ಮಕ್ಕಳ ಕಾಲುಬಳೆ, ಕೈ ಬಳೆ, ತುಳಸಿ, ರುದ್ರಾಕ್ಷಿ ಮಾಲೆ, ಗಡಿಯಾರ, ವಾಲೆ, ಉಂಗುರ, ಬ್ರಾಸಲೈಟ್, ಲೇಡಿಸ್ ಬ್ರಾಸ್‌ಲೈಟ್, ಸಲ್ಮಾನ್ ಖಾನ್ ಬ್ರಾಸ್‌ಲೈಟ್ ಸೇರಿ 16.16 ಕೆ.ಜಿ.ತೂಕದ ವಿವಿಧ ವಿನ್ಯಾಸದ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಲಾಗಿದೆ.

    ಇದನ್ನೂ ಓದಿ: ರಾಜ್ಯದಲ್ಲಿ ಮುಂದಿನ 5 ದಿನ ಗುಡುಗು ಮಿಂಚು ಸಹಿತ ಮಳೆ ಸಾಧ್ಯತೆ

    ದಾಖಲೆ ಇಲ್ಲದೆ ಆಭರಣ ಸಾಗಿಸುತ್ತಿದ್ದ ಗೌತಮಪುರದ ಚುನ್ನಿಲಾಲ್ ಮತ್ತು ಇಂದ್ರಕುಮಾರ್‌ಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗುವುದು. ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಭರಣ ಹಂಚಲು ಕೊಂಡೊಯ್ಯುವ ಸಾಧ್ಯತೆ ಇರುತ್ತದೆ. ವಿಚಾರಣೆ ಬಳಿಕ ಈ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ. ಹಲಸೂರು ಪೊಲೀಸ್ ಠಾಣೆಯಲ್ಲಿ ಎನ್‌ಸಿಎಆರ್ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    UVCE ಖಾಸಗೀಕರಣ; ಬಿಜೆಪಿ ವಿರುದ್ದ ಕಾಂಗ್ರೆಸ್​ ಕಿಡಿ

    ವಾಟ್ಸ್​ಆ್ಯಪ್​ನಲ್ಲಿ ಪಕ್ಷದ ಚಿಹ್ನೆ ಬಳಸಿ ರಾಮನವಮಿ ಶುಭಾಶಯ: ಕಾಂಗ್ರೆಸ್​ ನಾಯಕರಿಗೆ ನೋಟಿಸ್​ ಜಾರಿ

    ಇಡ್ಲಿಗಾಗಿ ಒಂದೇ ವರ್ಷದಲ್ಲಿ 6 ಲಕ್ಷ ರೂ. ಖರ್ಚು ಮಾಡಿದ ಭೂಪ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts