More

    ಶಿರಸಿಯ ಸೋದೆಯಲ್ಲಿ ಪತ್ತೆಯಾದ ಪುರಾತನ ಶಿಲಾ ದೇಗುಲ

    ಶಿರಸಿ: ಸೋದೆ ಅರಸರ ಕಾಲಾವಧಿಯಲ್ಲಿ ನಿರ್ಮಾಣಗೊಂಡ ಕಲ್ಯಾಣ ಚಾಲುಕ್ಯ ಮತ್ತು ವಿಜಯನಗರ ಶೈಲಿಯ ಶಿವನ ಗುಡಿಯೊಂದು ಸೋದೆಯಲ್ಲಿ ಶನಿವಾರ ಪತ್ತೆಯಾಗಿದೆ. ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮತ್ತು ಅಧ್ಯಯನಕ್ಕಾಗಿ ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿಗಳಿಂದ ಸ್ಥಾಪಿಸಲ್ಪಟ್ಟ ಜಾಗೃತ ವೇದಿಕೆಯು ಅಜ್ಞಾತದಲ್ಲಿದ್ದ ಶಿವನ ಗುಡಿಯನ್ನು ಬೆಳಕಿಗೆ ತಂದಿದೆ.

    17ನೇ ಶತಮಾನದ ಮಧ್ಯಭಾಗದಲ್ಲಿ ನಿರ್ಮಾಣಗೊಂಡ ದೇವಾಲಯದ ಗರ್ಭಗುಡಿಯಲ್ಲಿ ಪಾಣಿಪೀಠ ಮತ್ತು ನಂದಿಯ ವಿಗ್ರಹ ಕಂಡು ಬಂದಿದೆ. ಇದರ ಕುರಿತು ಹೆಚ್ಚಿನ ಅಧ್ಯಯನವನ್ನು ಮುಂದುವರೆಸಲಾಗಿದೆ. ಈ ಸಂದರ್ಭದಲ್ಲಿ ಜಾಗೃತ ವೇದಿಕೆಯ ಎಲ್‌ಲ್ ನಿರ್ದೇಶಕರು ಉಪಸ್ಥಿತರಿದ್ದರು ಎಂದು ಜಾಗೃತ ವೇದಿಕೆಯ ನಿರ್ದೇಶಕ ಮತ್ತು ಇತಿಹಾಸಕಾರ ಲಕ್ಷ್ಮೀಶ್ ಸೋಂದಾ ತಿಳಿಸಿದ್ದಾರೆ.

    ಇದು ಸೋದೆಪೇಟೆ ಎಂದು ಪ್ರಸ್ತುತ ಕರೆಯಲ್ಪಡುವ ಸ್ಥಳದಲ್ಲಿ ಇದುವರೆಗೂ ಬೆಳಕಿಗೆ ಬಾರದೆ ಮುಸುಕಿನಲ್ಲಿತ್ತು. ಅದನ್ನು ಜಾಗೃತ ವೇದಿಕೆಯು ಸ್ಥಳೀಯರಾದ ಅಬ್ದುಲ್ ಸಲಾಂ ರಜಾಕ್ ಶೇಖ್, ಅಬ್ದುಲ್ ಮುತಲಿಬ್ ಅಬ್ದುಲ್ ಶೇಖ್, ಹುಸೇನ್ ಸಾಬ್ ಖಾಸೀಂ ಸಾಬ್, ಅಬ್ದುಲ್ ಗಫೂರ್, ಮೊಯ್ದಿನ್ ಸಾಬ್, ಮುನ್ನಾ ಸಾಬ್, ಅಬ್ದುಲ್ ಖುದ್ದುಸ್, ಅಬ್ದುಲ್ ಸಲಾಂ ಶೇಖ್, ಅಬ್ದುಲ್ ಗಫಾರ್, ಅಬ್ದುಲ್ ರಜಾಕ್ ಶೇಖ್, ಯುಸ್ೂ ಖಾನ್, ಅಹ್ಮದ್ ಖಾನ್ ಇವರ ನೆರವಿನೊಂದಿಗೆ ಬೆಳಕಿಗೆ ತಂದಿದೆ.

    ಇನ್ನು ಪ್ರತಿ ಸಂಡೇ ಲಾಕ್‌ಡೌನ್, ಪ್ರತಿದಿನ ರಾತ್ರಿ ಕರ್ಫ್ಯೂ, ಸರ್ಕಾರಿ ನೌಕರರಿಗೆ ಶನಿವಾರ ರಜೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts