More

    17 ಪಾಸಿಟಿವ್ ಪ್ರಕರಣ ಪತ್ತೆ

    ಧಾರವಾಡ: ಜಿಲ್ಲೆಯಲ್ಲಿ ಸೋಮವಾರ 17 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಪ್ರಕರಣಗಳ ಸಂಖ್ಯೆ 328ಕ್ಕೆ ಏರಿದೆ. ಇದುವರೆಗೆ 179 ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 143 ಪ್ರಕರಣಗಳು ಸಕ್ರಿಯವಾಗಿವೆ. 6 ಜನ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.

    ಹಳೇ ಹುಬ್ಬಳ್ಳಿ ಬೀರಬಂದ್ ಓಣಿಯ 55 ವರ್ಷದ ಮಹಿಳೆ, ಹುಬ್ಬಳ್ಳಿ ಮಿಷನ್ ಕಾಂಪೌಂಡ್ ನೂರಾನಿ ಮಾರುಕಟ್ಟೆ ಹತ್ತಿರದ 27 ವರ್ಷದ ಪುರುಷ, ಹುಬ್ಬಳ್ಳಿ ಸದಾಶಿವನಗರ ಬಾಣತಿಕಟ್ಟಾದ 42 ವರ್ಷದ ಪುರುಷ, ಬಳ್ಳಾರಿಯ 44 ವರ್ಷದ ಪುರುಷ ಹಾಗೂ 40 ವರ್ಷದ ಮಹಿಳೆ, ಹುಬ್ಬಳ್ಳಿ ಆರ್.ಎನ್. ಶೆಟ್ಟಿ ರಸ್ತೆ ನಾಗಲಿಂಗನಗರದ 43 ವರ್ಷದ ಪುರುಷ, ಹುಬ್ಬಳ್ಳಿ ಮಿಷನ್ ಕಾಂಪೌಂಡ್​ನ 25 ವರ್ಷ ಮಹಿಳೆ, ಹುಬ್ಬಳ್ಳಿ ಮಿಲ್ಲತ್​ನಗರ 3ನೇ ಕ್ರಾಸ್​ನ 25 ವರ್ಷದ ಪುರುಷ, ಹುಬ್ಬಳ್ಳಿ ಆನಂದನಗರ 2ನೇ ಕ್ರಾಸ್​ನ 36 ವರ್ಷದ ಪುರುಷ, ನವಲಗುಂದ ತಾಲೂಕಿನ ಹಾಲಕುಸುಗಲ್​ನ 18 ವರ್ಷದ ಪುರುಷ, ಧಾರವಾಡ ಮದಿಹಾಳ ಆದಿಶಕ್ತಿ ಕಾಲನಿಯ 46 ವರ್ಷದ ಪುರುಷ, ಧಾರವಾಡ ಸಾರಸ್ವತಪುರದ 19 ವರ್ಷದ ಯುವಕ, ಹುಬ್ಬಳ್ಳಿ ಗೋಕುಲ ರಸ್ತೆ ಗಾಂಧಿನಗರದ 66 ವರ್ಷದ ಪುರುಷ, ಹಾವೇರಿ ಜಿಲ್ಲೆಯ 47 ವರ್ಷದ ಪುರುಷ, ಸಾಂಸ್ಥಿಕ ಕ್ವಾರಂಟೈನ್​ನಲ್ಲಿದ್ದ 45 ಹಾಗೂ 35 ವರ್ಷದ ಪುರುಷರು, ಹಾವೇರಿ ಜಿಲ್ಲೆಯ ಶಿಗ್ಗಾಂವಿಯ 55 ವರ್ಷದ ಪುರುಷನಲ್ಲಿ ಕರೊನಾ ಸೋಂಕು ದೃಢಪಟ್ಟಿದೆ.

    13 ಜನ ಚೇತರಿಕೆ, ಬಿಡುಗಡೆ: ಜಿಲ್ಲೆಯಲ್ಲಿ ಕೋವಿಡ್​ನಿಂದ ಚೇತರಿಸಿಕೊಂಡಿರುವ 13 ಜನರನ್ನು ಹುಬ್ಬಳ್ಳಿಯ ಕಿಮ್ಸ್​ನಿಂದ ಬಿಡುಗಡೆ ಮಾಡಲಾಗಿದೆ. 20 ವರ್ಷದ ಪುರುಷ, 31 ವರ್ಷದ ಮಹಿಳೆ, 8 ವರ್ಷದ ಬಾಲಕಿ, 12 ವರ್ಷದ ಬಾಲಕ, 34 ವರ್ಷದ ಮಹಿಳೆ, 34 ವರ್ಷದ ಪುರುಷ, 36 ವರ್ಷದ ಪುರುಷ, 20 ವರ್ಷದ ಮಹಿಳೆ, 37 ವರ್ಷದ ಪುರುಷ, 25 ವರ್ಷದ ಪುರುಷ, 18 ವರ್ಷದ ಪುರುಷ, 15 ವರ್ಷ, ಬಾಲಕ, 52 ವರ್ಷದ ಪುರುಷ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

    657 ವರದಿ ಬಾಕಿ: ಜಿಲ್ಲೆಯಲ್ಲಿ ಸೋಮವಾರ ಸಂಜೆವರೆಗೆ 657 ಜನರ ಕೋವಿಡ್ ವರದಿ ಬಾಕಿ ಇವೆ. ವೈರಸ್ ಲಕ್ಷಣಗಳ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ವಿದೇಶ, ಹೊರಾಜ್ಯಗಳಿಂದ ಆಗಮಿಸಿರುವವರು ಹಾಗೂ ಅವರ ಸಂಪರ್ಕಕ್ಕೆ ಒಳಗಾದ 25,887 ಜನರ ಮೇಲೆ ನಿಗಾ ಇಟ್ಟಿದೆ. ಕೋವಿಡ್ ಲಕ್ಷಣವುಳ್ಳವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts