More

    16000% ಲಾಭ ನೀಡಿದ ಅನಿಲ ಷೇರು: 1 ಲಕ್ಷವಾಯ್ತು 1.6 ಕೋಟಿ; ಮತ್ತಷ್ಟು ಏರಲಿದೆ ಎನ್ನುತ್ತಾರೆ ತಜ್ಞರು

    ಮುಂಬೈ: ಈ ಷೇರು ಕಳೆದ 10 ವರ್ಷಗಳಲ್ಲಿ ಹೂಡಿಕೆದಾರರಿಗೆ 16,000% ವರೆಗೆ ಪ್ರಚಂಡ ಲಾಭವನ್ನು ನೀಡಿದೆ. ಈ ಷೇರಿನ ಬೆಲೆ ಕಳೆದ ಒಂದು ತಿಂಗಳಲ್ಲಿ 9% ಮತ್ತು ಕಳೆದ 3 ತಿಂಗಳಲ್ಲಿ 29% ಹೆಚ್ಚಾಗಿದೆ.

    ಕೈಗಾರಿಕಾ ಅನಿಲಕ್ಕೆ ಸಂಬಂಧಿಸಿದ ರಿಫೆಕ್ಸ್ ಇಂಡಸ್ಟ್ರೀಸ್ ಲಿಮಿಟೆಡ್​ (Refex Industries Ltd.) ಕಂಪನಿಯ ಷೇರುಗಳ ಮೇಲೆ ಸೂಕ್ತ ಸಮಯದಲ್ಲಿ ಬೆಟ್ಟಿಂಗ್ ಮಾಡಿದ ಹೂಡಿಕೆದಾರರು ಭಾರಿ ಲಾಭ ಗಳಿಸಿದ್ದಾರೆ.

    ಕಳೆದ 10 ವರ್ಷಗಳ ಅವಧಿಯಲ್ಲಿ ಈ ಸ್ಟಾಕ್ 16,000% ವರೆಗೆ ಅಪಾರ ಆದಾಯವನ್ನು ನೀಡಿದೆ. ಹೂಡಿಕೆದಾರರು 10 ವರ್ಷಗಳ ಹಿಂದೆ 1 ಲಕ್ಷ ರೂಗಳನ್ನು ಈ ಷೇರುಗಳನ್ನು ಹೂಡಿಕೆ ಮಾಡಿ ಹಾಗೆಯೇ ಕಾಯ್ದುಕೊಂಡಿದ್ದರೆ ಅದು 1.6 ಕೋಟಿ ರೂಪಾಯಿಗೆ ಏರಿಕೆಯಾಗುತ್ತಿತ್ತು. ಪ್ರಸ್ತುತ ಈ ಷೇರಿನ ಬೆಲೆ ರೂ 680.70 ಇದೆ. ಕಳೆದ ಒಂದು ವರ್ಷದಲ್ಲಿ ಈ ಷೇರು ಬೆಲೆ 146.23% ಹಾಗೂ 3 ವರ್ಷಗಳಲ್ಲಿ 620.70% ಏರಿಕೆ ಕಂಡಿದೆ.

    ರೆಫೆಕ್ಸ್ ಇಂಡಸ್ಟ್ರೀಸ್ ಭಾರತದಲ್ಲಿ ಶೀತಕ ಅನಿಲಗಳ ವಿಶೇಷ ತಯಾರಕ ಮತ್ತು ಮರು-ತುಂಬಿಸುವ ಸಂಸ್ಥೆಯಾಗಿದೆ. ಸಾರ್ವಜನಿಕರು ಈ ಕಂಪನಿಯಲ್ಲಿ 53.27% ಪಾಲನ್ನು ಹೊಂದಿದ್ದಾರೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ತೆರಿಗೆಯ ನಂತರದ ಲಾಭವು ಸ್ವಲ್ಪಮಟ್ಟಿಗೆ ಹೆಚ್ಚಾಗಿ 21.43 ಕೋಟಿ ರೂ.ಗೆ ತಲುಪಿದೆ.

    ತಜ್ಞರು ಏನು ಹೇಳುತ್ತಾರೆ?:

    ಅರಿಹಂತ್ ಕ್ಯಾಪಿಟಲ್ ಎಕ್ಸಿಕ್ಯೂಟಿವ್ ಮಿಲಿನ್ ವಾಸುದೇವ್ ಅವರು ಷೇರುಗಳು ಬೆಂಚ್‌ಮಾರ್ಕ್ ಸೂಚ್ಯಂಕಗಳನ್ನು ಮೀರಿಸುತ್ತಿವೆ. ಈ ಷೇರು 760 ಮತ್ತು 800 ರೂ.ವರೆಗೆ ಹೋಗಬಹುದು ಎನ್ನುತ್ತಾರೆ. ಇದಕ್ಕೆ ಸ್ಟಾಪ್ ಲಾಸ್ 644 ರೂ. ನಿಗದಿಪಡಿಸಿದ್ದಾರೆ. ಜಿಸಿಎಲ್ ಬ್ರೋಕಿಂಗ್‌ನ ಸಂಶೋಧನಾ ವಿಶ್ಲೇಷಕ ವೈಭವ್ ಕೌಶಿಕ್ ಅವರು ಈ ಷೇರುಗಳ ಬೆಲೆ 750 ರೂ.ಗಳ ಗುರಿ ತಲುಪುವ ಸಾಧ್ಯತೆ ಇದೆ ಎನ್ನುತ್ತಾರೆ.

    ಬಜೆಟ್​ ಘೋಷಣೆ, ಬಿಪಿಸಿಎಲ್​ ಆರ್ಡರ್: EV ಚಾರ್ಜರ್​ ತಯಾರಿಕೆ ಕಂಪನಿ ಷೇರಿಗೆ ಗರಿಷ್ಠ ಬೆಲೆ; ಫೆ. 6ರಂದು ಮಹತ್ವದ ದಿನ

    300% ರಿಟರ್ನ್ ನೀಡಿದ ಎಕ್ಸ್​ಪೋರ್ಟ್​ ಕಂಪನಿ: ಒಂದು ಷೇರಿಗೆ ಒಂದು ಬೋನಸ್​ ಷೇರು ಕೊಡುಗೆ

    4000% ಲಾಭ ನೀಡಿದ ಸ್ಟಾಕ್​: ಬೋನಸ್​ ನೀಡಲು ಕಂಪನಿ ಸಜ್ಜಾಗುತ್ತಿದ್ದಂತೆ ಅಪ್ಪರ್ ಸರ್ಕ್ಯೂಟ್ ಹಿಟ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts