More

    ಕರೊನಾ ವೈರಸ್​ ಪತ್ತೆ ಮಾಡುವ ಡೋರ್​ಬೆಲ್​ ಸಂವೇದಕ ಯಂತ್ರ ಶೋಧಿಸಿದ 16ರ ಬಾಲಕ

    ನವದೆಹಲಿ: ರಾಷ್ಟ್ರದಲ್ಲಿ ಕರೊನಾ ವೈರಸ್​ ಹರಡುವಿಕೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ಅದರ ನಿಯಂತ್ರಣಕ್ಕೆ ಹಲವು ಸಂಶೋಧನೆಗಳು ನಡೆಯುತ್ತಿವೆ.

    16 ವರ್ಷದ ಬಾಲಕನೊಬ್ಬ ಕರೊನಾ ವೈರಸ್​ ಪತ್ತೆ ಮಾಡುವ ಡೋರ್​​ ಬೆಲ್ ಸಂವೇದಕ ಯಂತ್ರವನ್ನು ​ ಸಂಶೋಧನೆ ಮಾಡಿದ್ದಾನೆ.

    ನವದೆಹಲಿಯ ಶಾಲಿಮಾರ್​ ಬಾಗ್​ ಸಾರ್ವಜನಿಕ ಶಾಲೆಯಲ್ಲಿ ಕಲಿಯುತ್ತಿರುವ ಸಾರ್ಥಕ್​ ಎಂಬ ವಿದ್ಯಾರ್ಥಿ ಈ ಯಂತ್ರ ಕಂಡು ಹಿಡಿದಿದ್ದಾನೆ.

    ಹೊರಗಡೆಯಿಂದ ಮನೆಗೆ ಆಗಮಿಸುವವರು ಮೊದಲು ಡೋರ್​​ ಬೆಲ್​ ಒತ್ತುತ್ತಾರೆ. ಬೆಲ್​ನ ಸ್ವಿಚ್​ನಲ್ಲಿ ವೈರಸ್​ಗಳು ಉಳಿಯುವ ಅಪಾಯ ಇದೆ. ಹೀಗಾಗಿ ನಮ್ಮ ಮನೆಗೆ ಬಂದವರಲ್ಲಿ ವೈರಸ್ ಇದೆಯೇ ಎಂಬುದನ್ನು ಪತ್ತೆ ಮಾಡಲು ಈ ಯಂತ್ರ ಸಹಾಯ ಮಾಡುತ್ತದೆ.

    ಸಂಶೋಧನೆ ಮಾಡಿರುವ ಯಂತ್ರದಲ್ಲಿ ಕ್ಯಾಮರ ಸೇರಿದಂತೆ ಹಲವು ಉಪಕರಣಗಳನ್ನು ಅಳವಡಿಸಲಾಗಿದೆ. ವ್ಯಕ್ತಿ ಯಂತ್ರದ ಬಳಿ ಬರುತ್ತಲೇ ಆತನಲ್ಲಿ ವೈರಸ್​ ಇದೆಯೇ ಎಂಬುದನ್ನು ಪತ್ತೆ ಮಾಡುತ್ತದೆ. ಮಾಹಿತಿ ಕಂಪ್ಯೂಟರ್​ ಪರದೆ ಮೇಲೆ ತೆರೆದುಕೊಳ್ಳುತ್ತದೆ ಎಂದು ಸಾರ್ಥಕ್​ ತಿಳಿಸಿದ್ದಾನೆ. (ಏಜೆನ್ಸೀಸ್​)

    ವಿಜಯಪುರದಲ್ಲಿ 11, ಕಲಬುರಗಿಯಲ್ಲಿ 5 ಹೊಸ ಪ್ರಕರಣ: 400ರ ಗಡಿ ದಾಟಿದ ಸೋಂಕಿತರ ಸಂಖ್ಯೆ- ನಿಮ್ಮ ಜಿಲ್ಲೆಯಲ್ಲಿ ಎಷ್ಟು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts