More

    16ರಿಂದ ನಾಗಪುರ-ಬೆಳಗಾವಿ ವಿಮಾನಸೇವೆ

    ಬೆಳಗಾವಿ: ಇದೇ ಏಪ್ರಿಲ್ 16ರಿಂದ ಬೆಳಗಾವಿ-ನಾಗಪುರ ಮಧ್ಯೆ ವಿಮಾನಸೇವೆ ಆರಂಭವಾಗಲಿದೆ ಎಂದು ವಿಮಾನಯಾನ ಪ್ರಾಧಿಕಾರದ ನಿರ್ದೇಶಕ ರಾಜೇಶಕುಮಾರ ಮೌರ್ಯ ಹೇಳಿದ್ದಾರೆ. ಬೆಳಗಾವಿಯಿಂದ ವಾರದಲ್ಲಿ ಎರಡು ದಿನ(ಮಂಗಳವಾರ ಮತ್ತು ಶನಿವಾರ) ಬೆಳಗ್ಗೆ 8.30ಕ್ಕೆ ಹೊರಟು, 10.30ಕ್ಕೆ ತಲುಪಲಿದೆ. ನಾಗಪುರದಿಂದ ಬೆ.10.30ಕ್ಕೆ ಹೊರಟು ಮಧ್ಯಾಹ್ನ 12ಗಂಟೆಗೆ ಬೆಳಗಾವಿ ತಲುಪಲಿದೆ.

    ಇದರ ಜತೆಗೆ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ರಾಜ್ಯದಲ್ಲಿ ಪ್ರಪ್ರಥಮ ಬಾರಿಗೆ ಬೆಳಗಾವಿ ವಿಮಾನ ನಿಲ್ದಾಣದಲ್ಲಿ(ಎಎಐ) ಆತ್ಯಾಧುನಿಕ ಸೌಲಭ್ಯ ಒಳಗೊಂಡಿರುವ ‘ಆಂಬುಲಿಫ್ಟ್’ ವಾಹನ ಸೇವೆ ಬುಧವಾರ ಅಧಿಕೃತವಾಗಿ ಆರಂಭಗೊಂಡಿದೆ.

    ದೇಶೀಯ ವಿಮಾನ ನಿಲ್ದಾಣವಾಗಿರುವ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ನಿತ್ಯ ಬೆಂಗಳೂರು, ಮುಂಬೈ, ಗೋವಾ, ದೆಹಲಿ, ತಿರುಪತಿ, ಹೈದ್ರಾಬಾದ್ ಸೇರಿ ವಿವಿಧ ನಗರ ಪ್ರದೇಶಗಳಿಗೆ ವಿಮಾನದ ಮೂಲಕ ಸಾವಿರಾರೂ ಪ್ರಯಾಣಿಕರು ಆಗಮಿಸುತ್ತಾರೆ. ಇವರಲ್ಲಿ ವಯೋವೃದ್ಧ, ಅಂಗವಿಕಲರು, ರೋಗಿಗಳು ವಿಮಾನದ ಮೆಟ್ಟಿಲು ಏರಲು ಮತ್ತು ಇಳಿಯಲು ಕಷ್ಟಪಡುತ್ತಿದ್ದಾರೆ. ಈ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಆಂಬುಲಿಫ್ಟ್ ಸೇವೆ ಆರಂಭಿಸಿದೆ.

    ಹೈಟೆಕ್ ಸೌಲಭ್ಯಗಳನ್ನು ಒಳಗೊಂಡಿರುವ ಆಂಬುಲಿಫ್ಟ್ ವಾಹನದಲ್ಲಿ ವೀಲ್ ಚೇರ್‌ಗಳು, ಕೇರ್‌ಟೇಕರ್, ಸ್ಟ್ರೇಚರ್, ಹೈಡ್ರಾಲಿಕ್, ಹವಾನಿಯಂತ್ರಿತ ಕೊಠಡಿ, ಒಳಗೆ, ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ಯಾಮರಾ ಅಳವಡಿಸಲಾಗಿದೆ. 30 ದಿನಗಳ ಶೇಖರಣಾ ಸಾಮರ್ಥ್ಯ, ಅಗ್ನಿಶಾಮಕ ಸೌಲಭ್ಯ ಒಳಗೊಂಡಿದೆ. ವಿಮಾನದ ಬಾಗಿಲು ವಿಮಾನಕ್ಕೆ ಹಾನಿಯಾಗದಂತೆ ಸೆನ್ಸರ್ ಅಳವಡಿಸಲಾಗಿದೆ ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

    ದೆಹಲಿ ವಿಮಾನ ಸೇವೆಗೆೆ ಉತ್ತಮ ಪ್ರತಿಕ್ರಿಯೆ: ಬೆಳಗಾವಿ-ದೆಹಲಿ ಮಧ್ಯೆ ಹೊಸದಾಗಿ ಪ್ರಾರಂಭವಾಗಿರುವ ವಿಮಾನ ಸೇವೆಗೆ ಪ್ರಯಾಣಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಿತ್ಯವೂ ಶೇ.85-95 ಆಸನಗಳು ಭರ್ತಿಯಾಗುತ್ತಿವೆ. ಈ ಮಾರ್ಗಗಳಲ್ಲಿ ವಿಮಾನ ಸೇವೆ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts