More

    ಪರಿಹಾರದ ನಿರೀಕ್ಷೆಯಲ್ಲಿ ರೈತ ಸಮೂಹ; ಜಿಲ್ಲೆಯಲ್ಲಿ 1,59,970 ಹೆಕ್ಟೇರ್ ಬೆಳೆ ಹಾನಿ

    ಮಂಜುನಾಥ ಎಸ್. ಅಂಗಡಿ ಧಾರವಾಡ
    ಜಿಲ್ಲೆಯಲ್ಲಿ ಮಳೆಯ ಅಭಾವದಿಂದ ಪ್ರಸಕ್ತ ಮುಂಗಾರು ಕೈ ಕೊಟ್ಟಿದೆ. ರಾಜ್ಯ ಸರ್ಕಾರ ಇತ್ತೀಚೆಗೆ ಬರಪೀಡಿತ ತಾಲೂಕುಗಳನ್ನು ಘೋಷಿಸಿದ್ದು, ಜಿಲ್ಲೆಯ 7ರಲ್ಲಿ 5 ತಾಲೂಕುಗಳನ್ನು ಬರ ಪಟ್ಟಿಗೆ ಸೇರಿಸಲಾಗಿದೆ. ಜಿಲ್ಲೆಯಾದ್ಯಂತ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ 1,59,970 ಹೆಕ್ಟೇರ್ ಹಾನಿಯಾಗಿರುವ ವರದಿಯಾಗಿದೆ.
    2019ರಿಂದ 2022ರವರೆಗೆ ಜಿಲ್ಲೆಯಲ್ಲಿ ಅತಿಯಾದ ಮಳೆಯಾದ ಮಳೆಯಾಗಿತ್ತು. ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದ ರೈತರು ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. 2023ರ ಮುಂಗಾರಿನಲ್ಲಿ ಅನಾವೃಷ್ಟಿ ಕಾಡಿದೆ. ಜಿಲ್ಲೆಯಲ್ಲಿ 2,57,000 ಹೆಕ್ಟೇರ್ ಪ್ರದೇಶ ಬಿತ್ತನೆ ನಿರೀಕ್ಷಿಸಲಾಗಿತ್ತು. ಆದರೆ, ಮಳೆ ಅಭಾವದ ಕಾರಣ ೨,೧೮,೦೦೦ ಹೆಕ್ಟೇರ್ ಪ್ರದೇಶ ಬಿತ್ತನೆಯಾಗಿತ್ತು. ರಾಜ್ಯಕ್ಕೆ ಮುಂಗಾರು ತಡವಾಗಿ ಪ್ರವೇಶಿಸಿದ್ದಲ್ಲದೆ, ಮಳೆ ಸಮರ್ಪಕವಾಗಿ ಸುರಿಯಲಿಲ್ಲ. ಆದಾಗ್ಯೂ ರೈತರು ಬಂದಷ್ಟು ಫಸಲು ಬರಲಿ ಎಂಬ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದರು. ಆಗಸ್ಟ್ನಲ್ಲಿ ಹಿಂದೆ೦ದಿಗಿ೦ತಲೂ ಕನಿಷ್ಠ ಮಳೆಯಾದ ಪರಿಣಾಮ ಬೆಳೆಗಳು ಒಣಗಿವೆ. ಫಸಲು ರೈತರ ಕೈಗೆಟುಕುವ ಸಾಧ್ಯತೆ ಕಡಿಮೆ.
    ಧಾರವಾಡ ತಾಲೂಕಿನಲ್ಲಿ ಕೃಷಿ ಹಾಗೂ ತೋಟಗಾರಿಕೆ ಬೆಳೆ ಸೇರಿ 44,531 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಹುಬ್ಬಳ್ಳಿ ತಾಲೂಕಿನಲ್ಲಿ 31,439 ಹೆಕ್ಟೇರ್, ಹುಬ್ಬಳ್ಳಿ ನಗರ ತಾಲೂಕು 6314 ಹೆಕ್ಟೇರ್, ಕುಂದಗೋಳ 37900 ಹೆಕ್ಟೇರ್, ನವಲಗುಂದ 39786 ಹೆಕ್ಟೇರ್ ಸೇರಿ ಒಟ್ಟು 1,59,970 ಹೆಕ್ಟೇರ್ ಬೆಳೆ ಹಾನಿಯಾಗಿದೆ.
    ಧಾರವಾಡ, ಹುಬ್ಬಳ್ಳಿ, ಹುಬ್ಬಳ್ಳಿ ನಗರ, ಕುಂಗೋಳ, ನವಲಗುಂದ ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆಯಾಗಿವೆ. ಕಲಘಟಗಿ, ಅಳ್ನಾವರ ಹಾಗೂ ಅಣ್ಣಿಗೇರಿ ತಾಲೂಕುಗಳು ಎನ್‌ಡಿಆರ್‌ಎಫ್- ಎಸ್‌ಡಿಆರ್‌ಎಫ್ ಮಾನದಂಡಗಳ ಅನ್ವಯ ಬರ ಪಟ್ಟಿಗೆ ಸೇರಿಲ್ಲ. ಇನ್ನಷ್ಟು ತಾಲೂಕುಗಳು ಬರ ಪಟ್ಟಿಗೆ ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.

    ಈಗಾಗಲೇ ಜಿಲ್ಲೆಯ ೫ ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಕೇಂದ್ರ ಬರ ಅಧ್ಯಯನ ತಂಡ ಅ. ೭ರಂದು ಜಿಲ್ಲೆಗೆ ಬರುತ್ತಿದೆ. ಆಯ್ದ ತಾಲೂಕುಗಳಲ್ಲಿ ಬರ ಪರಿಸ್ಥಿತಿ, ಬೆಳೆಗಳ ಹಾನಿಯನ್ನು ವೀಕ್ಷಣೆ ಮಾಡಲಿದೆ. ಕೇಂದ್ರ ತಂಡ ವರದಿ ಸಲ್ಲಿಸಿದ ನಂತರ ಬರ ಪರಿಹಾರ ಸಿಗುವ ನಿರೀಕ್ಷೆ ಇದೆ.- ಡಾ. ಕಿರಣಕುಮಾರ ಎಂ, ಕೃಷಿ ಇಲಾಖೆ ಜಂಟಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts