More

    ಅಯೋಧ್ಯೆಯ ಶ್ರೀರಾಮನಿಗೆ 155 ದೇಶದ ನದಿಗಳ ಪವಿತ್ರ
    ಜಲದಿಂದ ಅಭಿಷೇಕ!

    ಅಯೋಧ್ಯೆ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಏಪ್ರಿಲ್ 23 ರಂದು 155 ದೇಶಗಳ ನದಿಗಳ ನೀರಿನಿಂದ ಅಯೋಧ್ಯೆಯಲ್ಲಿ ಶ್ರೀರಾಮನಿಗೆ ಅಭಿಷೇಕ ನಡೆಸಲಿದ್ದಾರೆ. ಈ ಬಗ್ಗೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಮಾಹಿತಿ ನೀಡಿದ್ದಾರೆ.

    155 ದೇಶಗಳ ನದಿಗಳ ನೀರನ್ನು ತರುವ ಕಾರ್ಯವನ್ನು ದೆಹಲಿ ಮೂಲದ ರಾಮನ ಭಕ್ತ ವಿಜಯ್ ಜಾಲಿ ನೇತೃತ್ವದ ತಂಡವು ಮಾಡಿದ್ದು ಇದೇ ತಂಡ ಆದಿತ್ಯನಾಥ್‌ಗೆ ಹಸ್ತಾಂತರಿಸಲಿದೆ ಎಂದು ಚಂಪತ್​ ರೈ ಹೇಳಿದರು.

    ಇದನ್ನೂ ಓದಿಳ: ಅಯೋಧ್ಯೆಗೆ ಬಂತು ರಾಮಶಿಲೆ; ಶ್ರೀರಾಮನ ಮೂರ್ತಿಗೂ ಸಾಲಿಗ್ರಾಮ ಶಿಲೆಗೂ ಸಂಬಂಧವೇನು?

    ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, 2024ರ ಜನವರಿಯಲ್ಲಿ ಮಂದಿರದ ಗರ್ಭಗುಡಿ ಲೋಕಾರ್ಪಣೆಗೆ ನಿರ್ಧರಿಸಲಾಗಿದೆ ಎನ್ನಲಾಗುತ್ತಿದೆ. ಏಪ್ರಿಲ್ 23 ರಂದು ಮಣಿರಾಮ್ ದಾಸ್ ಚಾನ್ನಿ ಸಭಾಂಗಣದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಜಲ ಕಲಶದ ಪೂಜೆಯನ್ನು ನೆರವೇರಿಸಲಿದ್ದಾರೆ.

    ರಾವಿ ನದಿಯ ನೀರನ್ನು ಮೊದಲು ಹಿಂದೂಗಳು ಪಾಕಿಸ್ತಾನದಿಂದ ದುಬೈಗೆ ಕಳುಹಿಸಿದರು. ಅಲ್ಲಿಂದ ದೆಹಲಿಗೆ ತರಲಾಯಿತು ಎಂದು ಚಂಪತ್​ ರೈ ಹೇಳಿದ್ದಾರೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts