More

    ವಿಮಾನದ ಕಾಕ್​ಪಿಟ್​ನಲ್ಲಿ ವಿಷ ಸರ್ಪ!

    ಜೊಹಾನೆಸ್​ರ್ಬಗ್​: ಚಿಕ್ಕ ವಿಮಾನವೊಂದು ಹಾರಾಟದಲ್ಲಿರುವಾಗ ಮಾರ್ಗ ಮಧ್ಯೆ ಕಾಕ್​ಪಿಟ್​ನಲ್ಲಿ ವಿಷ ಸರ್ಪವೊಂದು ಕಾಣಿಸಿಕೊಂಡರೂ ಧೃತಿಗೆಡದ ಪೈಲಟ್​ ಸಮಯಪ್ರಜ್ಞೆ ಮೆರೆದು ವಿಮಾನವನ್ನು ಸುರತವಾಗಿ ಇಳಿಸಿದ ಘಟನೆಯೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆದಿದೆ. ವಿಮಾನದ ಪೈಲಟ್​ ರುಡಾಲ್ಫ್​ ಎರಸ್ಮಸ್​ ತನ್ನ ಸಾಹಸಿ ಕೃತ್ಯದಿಂದಾಗಿ ಎಲ್ಲರ ಮನಗೆದ್ದು ಹೀರೋ ಆಗಿದ್ದಾರೆ.

    ಎರಸ್ಮಸ್​ ಕಳೆದ ಐದು ವರ್ಷಗಳಿಂದ ಪೈಲಟ್​ ವೃತ್ತಿಯಲ್ಲಿದ್ದಾರೆ. ಸೋಮವಾರ ಬೆಳಿಗ್ಗೆ ನಾಲ್ಕು ಪ್ರಯಾಣಿಕರ ವಿಮಾನವನ್ನು ಚಲಾಯಿಸುತ್ತಿದ್ದಾಗ ಸರ್ಪ ಕಾಣಿಸಿಕೊಂಡಿದೆ. ಆದರೆ ಅದರಿಂದ ವಿಚಲಿತರಾಗಿಲ್ಲ. ವಿಷಸರ್ಪ​ ನೋಡ ನೋಡುತ್ತಲೇ ಅದು ಸೀಟಿನ ಕೆಳಗೆ ಸರಿದು ಅವಿತುಕೊಂಡಿತು. ನಂತರ ತಾನು ವಿಮಾನವನ್ನು ಯಾವುದೇ ತೊಂದರೆಯಿಲ್ಲದೆ ಲ್ಯಾಂಡ್​ ಮಾಡಿದ್ದನ್ನು ಎರಸ್ಮಸ್​ ವಿವರಿಸಿದ್ದಾರೆ.

    ವಿಮಾನ ವೋರ್ಸಸ್ಟರ್​ನಿಂದ ನೆಲ್ಸ್​ಪ್ರೂಟ್​ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ನಡೆದಿದೆ. ಸೋಮವಾರದ ಹಾರಾಟಕ್ಕೂ ಮುನ್ನ ಪರಿಶೀಲನೆ ನಡೆಸುವ ವೇಳೆ, ಭಾನುವಾರ ಮಧ್ಯಾಹ್ನ ವಿಮಾನದ ಕೆಳಗೆ ಕೇಪ್​ ಕೋಬ್ರಾವೊಂದನ್ನು ಗಮನಿಸಿದ್ದಾಗಿ ವೋರ್ಸಸ್ಟರ್​ ಏರ್​ಫೀಲ್ಡ್​ನ ಸಿಬ್ಬಂದಿ ಹೇಳಿದ್ದರು. ಹಿಡಿಯ ಬೇಕೆನ್ನುವಷ್ಟರಲ್ಲಿ ಅದು ಎಂಜಿನ್​ ಕೌಲಿಂಗ್​ ಪ್ರದೇಶವನ್ನು ಹೊಕ್ಕಿತ್ತು. ಕೌಲಿಂಗ್​ ತೆರೆದು ಎಷ್ಟೇ ಹುಡುಕಿದರೂ ಅದು ಪತ್ತೆಯಾಗಿರಲಿಲ್ಲ. ಅದು ಹೊರಟುಹೋಗಿರಬಹುದೆಂದು ಎಲ್ಲರೂ ಭಾವಿಸಿದ್ದು ಹೀಗಾಗಿ ವಿಮಾನ ಸಂಚಾರ ಬೆಳೆಸಿತ್ತು ಎನ್ನಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts