More

    150 ವರ್ಷದ ಅರಳೆ ಮರ ಧರೆಗೆ

    ನರಗುಂದ: ಪಟ್ಟಣದ ದಂಡಾಪೂರ ಬಡಾವಣೆಯ ಶ್ರೀ ಉಡಚಾ ಪರಮೇಶ್ವರಿ ದೇವಸ್ಥಾನದ ಆವರಣದಲ್ಲಿದ್ದ ಭಾರಿ ಗಾತ್ರದ ಅರಳೆ ಮರವೊಂದು ಶನಿವಾರ ನೆಲಕ್ಕುರುಳಿ ಬಿದ್ದಿದ್ದು ಭಾರಿ ಅನಾಹುತ ತಪ್ಪಿದೆ.

    150 ವರ್ಷಕ್ಕೂ ಅಧಿಕ ಹಳೆಯ ಮರ ಎನ್ನಲಾಗುತ್ತಿದೆ. ಬೃಹತ್ ಗಾತ್ರದ ಮರ ಶನಿವಾರ ನಸುಕಿನ ಜಾವ 4.30ರ ಸುಮಾರಿಗೆ ಬುಡಸಮೇತ ನೆಲಕ್ಕುರುಳಿ ಬಿದ್ದಿದೆ.

    ದೇವಸ್ಥಾನದ ಬಳಿ ನಿಲ್ಲಿಸಿದ್ದ ಚಿದಂಬರ ಪಾಟೀಲ ಎಂಬುವರ ಕಾರಿನ ಡೋರ್‌ಗಳು ನಜ್ಜುಗುಜ್ಜಾಗಿವೆ. ಎಸ್.ವಿ. ಅಂಬೇಕರ ಎಂಬುವರ ಆಕ್ಟೀವಾ ಹೋಂಡಾ (ಸ್ಕೂಟಿ) ಮರದಡಿ ಸಿಲುಕಿ ಹಾನಿಗೊಂಡಿವೆ. ಬೃಹತ್ ಗಾತ್ರದ ಮರದ ಕೊಂಬೆಗಳಿಗೆ ಉರುಳಿ ಬಿದ್ದಿದ್ದರಿಂದ ರೋಖಡೆಯವರ ಮನೆ ಬಳಿಯ 6 ವಿದ್ಯುತ್ ಕಂಬ, ತಂತಿ ಹರಿದು ಬಿದ್ದಿವೆ. ಮಂಜುನಾಥ ಎಂಬುವರ ಚಹಾ ಅಂಗಡಿಗೂ ಹಾನಿಯಾಗಿದೆ.

    ದೇವಸ್ಥಾನದ ಆವರಣದಲ್ಲಿರುವ ನಾಗಪ್ಪನ ಕಟ್ಟೆಯ ಅರಳೆ ಮರದ ಕೆಳಗೆ ಪ್ರತಿನಿತ್ಯ ನೂರಾರು ಜನ ಭಕ್ತರು ಕುಳಿತುಕೊಳ್ಳುತ್ತಿದ್ದರು. ಈ ಮಾರ್ಗವಾಗಿ ಸಾರ್ವಜನಿಕರು, ವಾಯುವಿಹಾರಿಗಳು ಸೇರಿದಂತೆ ಸಾವಿರಾರು ಜನ ಸಂಚರಿಸುತ್ತಾರೆ. ಆದರೆ, ಈ ಮರ ನಸುಕಿನ ಜಾವ ನೆಲಕ್ಕುರುಳಿದ್ದರಿಂದ ಅದೃಷ್ಟವಶಾತ್ ಭಾರಿ ಅನಾಹುತವೇ ತಪ್ಪಿದಂತಾಗಿದೆ.

    ಸ್ಥಳಕ್ಕೆ ಪುರಸಭೆ, ಹೆಸ್ಕಾಂ, ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿದರು. ಪುರಸಭೆ, ಅರಣ್ಯ ಇಲಾಖೆ ಹಾಗೂ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು ಮರದ ತೆರವು ಕಾರ್ಯಾಚರಣೆ, ಹೆಸ್ಕಾಂ ಇಲಾಖೆ ಅಧಿಕಾರಿ ಸಿಬ್ಬಂದಿ ವಿದ್ಯುತ್ ಕಂಬಗಳ ಅಳವಡಿಕೆ ಕಾರ್ಯ ಕೈಗೊಂಡರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts