More

    ಅಲಕಾನಂದಾ ನದಿ ದಡದಲ್ಲಿ ಟ್ರಾನ್ಸ್​ಫಾರ್ಮರ್​ ಸ್ಫೋಟ: 15 ಮಂದಿ ಸಾವು, ಹಲವರ ಸ್ಥಿತಿ ಗಂಭೀರ

    ಡೆಹ್ರಾಡೂನ್​: ಟ್ರಾನ್ಸ್​ಫಾರ್ಮರ್​ ಸ್ಫೋಟಗೊಂಡ ಪರಿಣಾಮ ಹದಿನೈದು ಮಂದಿ ದುರಂತ ಸಾವಿಗೀಡಾಗಿ ಹಲವರು ಗಂಭೀರವಾಗಿ ಗಾಯಗೊಂಡಿರುವ ದುರಂತ ಘಟನೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಅಲಕನಂದಾ ನದಿ ದಡದಲ್ಲಿ ಬುಧವಾರ ನಡೆದಿದೆ.

    ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ಮತ್ತು ರಕ್ಷಣಾ ತಂಡಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

    ಇದನ್ನೂ ಓದಿ: ಹಾಸ್ಟೆಲ್​ ಹುಡುಗರು ಬೇಕಾಗಿದ್ದಾರೆ ಚಿತ್ರತಂಡಕ್ಕೆ ಶಾಕ್​ ಕೊಟ್ಟ ರಮ್ಯಾ: 1 ಕೋಟಿ ರೂ. ಪರಿಹಾರಕ್ಕೆ ಒತ್ತಾಯ

    ಅಲಕನಂದಾ ನದಿ ದಡದಲ್ಲಿ ನಮಾಮಿ ಗಂಗೆ ಯೋಜನೆಯ ಕೆಲಸದಲ್ಲಿ ತೊಡಗಿದ್ದಾಗ ಟ್ರಾನ್ಸ್​ಫಾರ್ಮರ್​ ಸ್ಫೋಟಗೊಂಡು ದುರಂತ ಸಂಭವಿಸಿದೆ. ಓರ್ವ ಪೊಲೀಸ್​, ಮೂವರು ಹೋಮ್​ಗಾರ್ಡ್​ ಸೇರಿ 15 ಮಂದಿ ವಿದ್ಯುತ್​ ಶಾಕ್​ನಿಂದ ಅಸುನೀಗಿದ್ದಾರೆ. ಹಲವರಿಗೆ ಗಾಯಳಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

    ಈ ಘಟನೆಗೆ ಕಾರಣ ಇನ್ನು ತಿಳಿದುಬಂದಿಲ್ಲ. ಈ ಸಂಬಂಧ ತನಿಖೆ ನಡೆಯುತ್ತಿದೆ ಎಂದು ರಾಜ್ಯ ಪೊಲೀಸ್​ ಮಹಾ ನಿರ್ದೇಶಕ ಅಶೋಕ್​ ಕುಮಾರ್​ ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)

    VIDEO| ತಂದೆಯೊಂದಿಗೆ ದ್ವೇಷ: ಮಕ್ಕಳ ಪ್ರಾಣ ತೆಗೆಯಲು ಯತ್ನಿಸಿದ ಕಾರು ಚಾಲಕ

    ಬೆಂಗಳೂರಿನಲ್ಲಿ ನಡೆದಿದ್ದ ವಿಪಕ್ಷ ಸಭೆಯೂ ಟಾರ್ಗೆಟ್ ಆಗಿತ್ತಾ? ಗೃಹ ಸಚಿವರು ಸಿಎಂ ಬಳಿ ಹೇಳಿದ್ದಿಷ್ಟು…

    ಟೊಮ್ಯಾಟೋ ಕಿವಿಯೋಲೆ ತೊಟ್ಟು ಕಾಣಿಸಿಕೊಂಡ ಉರ್ಫಿ ಜಾವೇದ್; ಸಖತ್​​ ಕಾಸ್ಟ್ಲಿನೀವು ಮೇಡಂ ಎಂದ ಫ್ಯಾನ್ಸ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts