More

    ತಿರುಪತಿ ದೇವಸ್ಥಾನದ 15 ಅರ್ಚಕರಿಗೆ ಕರೊನಾ ಸೋಂಕು

    ತಿರುಮಲ: ವಿಶ್ವಪ್ರಸಿದ್ಧ ತಿರುಪತಿಯ ತಿರುಮಲ ದೇವಸ್ಥಾನದಲ್ಲಿ ಕಾರ್ಯನಿರ್ವಹಿಸುವ 50 ಅರ್ಚಕರ ಪೈಕಿ 15 ಜನರಲ್ಲಿ ಕರೊನಾ ಸೋಂಕು ಪತ್ತೆಯಾಗಿದೆ. ಅಲ್ಲದೆ, ಇನ್ನೂ 25 ಅರ್ಚಕರ ಕೋವಿಡ್​-19 ಪರೀಕ್ಷಾ ಫಲಿತಾಂಶವನ್ನು ನಿರೀಕ್ಷಿಸಲಾಗುತ್ತಿದೆ.

    ಈ ಹಿನ್ನೆಲೆಯಲ್ಲಿ ದೇವರ ದರ್ಶನವನ್ನು ತಾತ್ಕಾಲಿಕವಾಗಿ ರದ್ದುಗೊಳಿಸುವಂತೆ ಕೋರಿ ಟಿಟಿಡಿ ಸಿಬ್ಬಂದಿ ಮತ್ತು ಕೆಲಸಗಾರರ ಏಕೀಕೃತ ಒಕ್ಕೂಟ ಟಿಟಿಡಿಯ ಕಾರ್ಯನಿರ್ವಾಹಕ ಅಧಿಕಾರಿಗೆ ಲಿಖಿತ ಮನವಿ ಸಲ್ಲಿಸಿದೆ. ಈ ಬಗ್ಗೆ ಚರ್ಚಿಸಲು ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್​ (ಟಿಟಿಡಿ) ತುರ್ತು ಸಭೆ ನಡೆಸಲು ನಿರ್ಧರಿಸಿದೆ.

    ಇದನ್ನೂ ಓದಿ: ಕರೊನಾ ಚಿಕಿತ್ಸೆನೂ ಕೊಟ್ಟರು, ಕೋಟಿ ಶುಲ್ಕನೂ ಬಿಟ್ಟರು, ವಿಮಾನಕ್ಕೂ ಕಳುಹಿಸಿದರು!

    ಇದುವರೆಗೆ ಟಿಟಿಡಿಯ 91 ಸಿಬ್ಬಂದಿಯನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿದೆ. ಜು.10ರವರೆಗೆ ತಿರುಮಲದಲ್ಲಿ ಕಾರ್ಯನಿರ್ವಹಿಸುವ ಟಿಟಿಡಿಯ 1,865 ಸಿಬ್ಬಂದಿ, ಅಲ್ಲಿರಿಯಲ್ಲಿನ ಟಿಟಿಡಿಯ 1,704 ಹಾಗೂ 631 ಭಕ್ತರನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇವರೆಲ್ಲರ ಪೈಕಿ 91 ಜನರಿಗೆ ಕರೊನಾ ಸೋಂಕು ತಗುಲಿರುವುದು ಪತ್ತೆಯಾಗಿರುವುದಾಗಿ ಟಿಟಿಡಿ ಹೇಳಿತ್ತು.

    ಭಕ್ತರಲ್ಲಿ ಯಾರಿಗೂ ಆರೋಗ್ಯ ಸಮಸ್ಯೆ ಇರಲಿಲ್ಲ. ಅವರು ಮನೆಗೆ ಮರಳಿದ ನಂತರದಲ್ಲೂ ನಾವು ಅವರಿಗೆ ಕರೆ ಮಾಡಿ, ಅವರ ಆರೋಗ್ಯ ವಿಚಾರಿಸುತ್ತಿದ್ದೇವೆ. ಈ ರೀರಿಯಾಗಿ ಜೂ.18ರಿಂದ 24ರವರೆಗೆ 700 ಹಾಗೂ ಜು.1ರಿಂದ 7ರವರೆಗೆ 1,943 ಭಕ್ತರಿಗೆ ಕರೆ ಮಾಡಿ ಅವರ ಆರೋಗ್ಯ ವಿಚಾರಿಸಿದ್ದೇವೆ ಎಂದು ಟಿಟಿಡಿ ಹೇಳಿತ್ತು.

    ಕರೊನಾದಿಂದ ನಮ್ಮನ್ನು ದೇವರೇ ಕಾಪಾಡಬೇಕು ಎಂದು ಶ್ರೀರಾಮುಲು ಹೇಳಿದ್ದೇಕೆ ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts