More

    15 ಎಕರೆ ಪಪ್ಪಾಯ ಬೆಳೆ ನೆಲಸಮ

    ಬೇತಮಂಗಲ: ಕರೊನಾ ಸಂಕಷ್ಟದಲ್ಲಿ ವಾರುಕಟ್ಟೆ ಇಲ್ಲದೆ ಹತಾಶರಾದ ರೈತ ಸಹೋದರರು 15 ಎಕರೆಯಲ್ಲಿ ಬೆಳೆದಿದ್ದ ಪಪ್ಪಾಯ ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ಉಳುಮೆ ವಾಡಿಸಿದ್ದಾರೆ.

    ಹೋಬಳಿಯ ವಾರಸಂದ್ರ ಗ್ರಾಮದ ರಾಮಕೃಷ್ಣಪ್ಪ, ನಾರಾಯಣಪ್ಪ ಹಲವು ಬಾರಿ ಪಪ್ಪಾಯ ಬೆಳೆದು ಕೈ ತುಂಬಾ ಹಣ ಗಳಿಸಿದ್ದರು. ಇವರ 5 ಎಕರೆ ಭೂಮಿಯ ಜತೆಗೆ ಪಕ್ಕದ 10 ಎಕರೆಯನ್ನು ಗುತ್ತಿಗೆಗೆ ಪಡೆದು ಒಟ್ಟು 15 ಎಕರೆಯಲ್ಲಿ ರೆಡ್ ಲೇಡಿ ಎಂಬ ತಳಿಯ 12 ಸಾವಿರ ಪಪ್ಪಾಯ ಸಸಿ ನಾಟಿ ವಾಡಿದ್ದರು. ಗಿಡಗಳು ಸಮೃದ್ಧಿಯಾಗಿ ಬೆಳೆದು ಉತ್ತಮ ಇಳುವರಿ ಪ್ರಾರಂಭವಾಗಿತ್ತು.

    ಫಸಲು ಬಂತು, ವಾರುಕಟ್ಟೆ ಹೋಯ್ತು: ಪಪ್ಪಾಯ ಫಸಲು ಸಾವಾನ್ಯವಾಗಿ 7ರಿಂದ 8 ತಿಂಗಳಿಗೆ ಪ್ರಾರಂಭವಾಗುತ್ತದೆ. ಕಳೆದ ವರ್ಷ ಆಗಸ್ಟ್‌ನಲ್ಲಿ ನಾಟಿ ವಾಡಿದ್ದರಿಂದ ಈ ವರ್ಷ ವಾರ್ಚ್‌ನಲ್ಲಿ ಕಟಾವು ಪ್ರಾರಂಭವಾಗಿತ್ತು. 15 ದಿನಗಳಲ್ಲಿ ಕರೊನಾ ಕಾಟ ಪ್ರಾರಂಭವಾಗಿ ಲಾಕ್‌ಡೌನ್ ೋಷಣೆಯಾಗಿತ್ತು. ಲಾಕ್‌ಡೌನ್ 6 ತಿಂಗಳಾದರೂ ಮುಗಿಯದ ಹಿನ್ನೆಲೆಯಲ್ಲಿ ಪಪ್ಪಾಯಿ ಕೇಳುವವರೇ ಇಲ್ಲದಂತಾಗಿತ್ತು. ಸ್ಥಳೀಯ ವ್ಯಾಪಾರಿಗಳೂ ಖರೀದಿ ವಾಡಲು ಹಿಂದೇಟು ಹಾಕಿದ್ದರು. ಹಾಗಾಗಿ ಅತ್ಯಂತ ಕಡಿಮೆ ಬೆಲೆಯಲ್ಲಿ ಜ್ಯೂಸ್ ಕಾರ್ಖಾನೆಗೆ ವಾರಾಟ ವಾಡಲು ಮುಂದಾದರೂ ಹಾಕಿದ್ದ ಬಂಡವಾಳವೂ ಬಂದಿಲ್ಲ ಎನ್ನಲಾಗಿದೆ.

    2 ಕೋಟಿ ರೂ. ನಿರೀಕ್ಷೆ: ಈ ಹಿಂದಿನ ವರ್ಷಗಳಲ್ಲಿ ವ್ಯಾಪಾರಿಗಳು ಕನಿಷ್ಠ 20ರಿಂದ 25ರವರೆಗೆ ಖರೀದಿ ವಾಡುತ್ತಿದ್ದರು. ಒಂದು ಗಿಡದಲ್ಲಿ 100 ಕೆಜಿ ಫಸಲು ಬಂದರೂ, 12 ಸಾವಿರ ಗಿಡಗಳಿಂದ 1200 ಟನ್ ಬಂದರೆ, ಕೆಜಿ 10 ರೂಪಾಯಿ ಎಂದರೂ ಅಂದಾಜು 1 ಕೋಟಿ ಹಣ ಬರುತ್ತಿತ್ತು. ಆದರೆ ಆದಾಯ ಲೆಕ್ಕಾಚಾರಗಳೆಲ್ಲಾ ಕರೊನಾ ಬುಡಮೇಲು ವಾಡಿದೆ.

    ನಾವು ನಾಲ್ಕೈದು ಬಾರಿ ಪಪ್ಪಾಯ ಬೆಳೆದಿದ್ದೇವೆ. ಸಾಕಷ್ಟು ಲಾಭ ಗಳಿಸಿದ್ದೇವೆ. ಅದೇ ಆಸೆಯಿಂದ ಈ ಬಾರಿಯೂ ಬೆಳೆದಿದ್ದೆವು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಉತ್ತಮ ಲಾಭ ಸಿಗುವ ನಿರೀಕ್ಷೆ ಇತ್ತು. ಆದರೆ ಕರೊನಾ ಎಲ್ಲವನ್ನೂ ನುಂಗಿ ಹಾಕಿದೆ.
    ರಾಮಕೃಷ್ಣಪ್ಪ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts