More

    ಜಿಲ್ಲಾ ಎಂಸಿಎಂಸಿ ಅನುಮತಿ ಕಡ್ಡಾಯ,ಡಿಸಿ


    ಚಿತ್ರದುರ್ಗ: ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ಆಯೋಗದ ನಿಯಮ ಹಾಗೂ ಮಾನದಂಡಗಳನ್ನು ಪಾಲಯೊಂದಿಗೆ, ಜಾಹೀರಾತುಗಳನ್ನು ಪ್ರಚುರಪಡಿಸಲು ಜಿಲ್ಲಾ ಎಂಸಿಎಂಸಿ (ಮಾಧ್ಯಮ ಪ್ರಮಾಣೀಕರಣ ಹಾಗೂ ನಿಗಾ ಸಮಿತಿ) ಪ್ರಮಾಣೀಕರಣ ಪಡೆದುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು, ರಾಜಕೀಯ ಪ್ರತಿನಿಧಿಗಳು, ಅಭ್ಯರ್ಥಿಗಳಿಗೆ ಸೂಚಿಸಿದರು.

    ಡಿಸಿ ಕಚೇರಿಯಲ್ಲಿ ಶನಿವಾರ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ವಿದ್ಯುನ್ಮಾನ ಮಾಧ್ಯಮ ಹಾಗೂ ಮುದ್ರಣ ಮಾಧ್ಯಮಗಳಲ್ಲಿ ಪ್ರಚಾರಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲು ಹಮ್ಮಿಕೊಂಡಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಮಾತನಾಡಿದರು.

    ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಪ್ರಸಾರ ಮಾಡುವ ರಾಜಕೀಯ ಜಾಹೀರಾತುಗಳಿಗೆ ಮಾಧ್ಯಮ ಪ್ರಮಾಣೀಕರಣ ಕಡ್ಡಾಯ, ಮುದ್ರಣ ಮಾಧ್ಯಮದ ಮೂಲಕ ಪ್ರಸಾರ ಮಾಡುವ ಜಾಹೀರಾತುಗಳಿಗೆ ಅವಶ್ಯಕತೆ ಇಲ್ಲ ಎಂದರು.

    ಮುದ್ರಣ ಮಾಧ್ಯಮಗಳಲ್ಲಿ ಪ್ರಕಟವಾದ ಜಾಹೀರಾತು ಆ ಪತ್ರಿಕೆಯ ಆನ್‌ಲೈನ್‌ನಲ್ಲೂ ಪ್ರಕಟವಾಗುವಂತಿದ್ದರೆ ಅಂತಹ ಜಾಹೀರಾತುಗಳಿಗೂ ಪ್ರಮಾಣೀಕರಣ ಕಡ್ಡಾಯ. ಮತದಾನದ ಪೂರ್ವದ 48 ಗಂಟೆಗಳ ಅವಧಿಯಲ್ಲಿ ಚುನಾವಣೆ ವಿಷಯಗಳನ್ನು ಬಿತ್ತರಿಸುವುದನ್ನು ನಿಷೇಧಿಸಲಾಗಿದೆ. ಜಾಹೀರಾತಿನಲ್ಲಿ ಧಾರ್ಮಿಕ ಸ್ಥಳಗಳು, ಸರ್ಕಾರಿ ಕಟ್ಟಡ, ಚಿಕ್ಕ ಮಕ್ಕಳು ಇರಬಾರದು. ತಮ್ಮ ಸಾಧನೆಗಳನ್ನು ಹೇಳಿಕೊಳ್ಳಬಹುದು ಎಂದು ಹೇಳಿದರು.

    ಏಪ್ರಿಲ್ 10ರವರೆಗೂ ಮತದಾರ ಪಟ್ಟಿ ಸೇರ್ಪಡೆಗೆ ಅವಕಾಶವಿತ್ತು. 20 ನಂತರ ಪ್ರಕಟಿಸುವ ಅಂತಿಮ ಮತದಾರ ಪಟ್ಟಿಯನ್ನು ಪಕ್ಷಗಳು, ಅಭ್ಯರ್ಥಿಗಳಿಗೆ ನೀಡಲಾಗುವುದು. ಗುರುತಿನ ಚೀಟಿ ವಿತರಣೆ ಮುಂದುವರಿದಿದೆ. ಆಯೋಗ ಗೊತ್ತುಪಡಿಸಿದ ಇತರೆ ಗುರುತಿನ ಚೀಟಿಯನ್ನೂ ಬಳಸಿ ಮತಚಲಾಯಿಸಬಹುದು. ಜಿಲ್ಲೆಯಲ್ಲಿ 1648 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದರು.

    ಹೆಸರು ಬದಲಾಯಿಸಿರುವ 11 ಮತಗಟ್ಟೆಗಳ ವಿವರಗಳನ್ನು ಆಯೋಗಕ್ಕೆ ಸಲ್ಲಿಸಲಾಗಿದೆ. ಮತದಾನ ಕೇಂದ್ರ ಹಾಗೂ ಮತ ಎಣಿಕೆ ಕೇಂದ್ರದಲ್ಲಿ ಏಜೆಂಟ್‌ರನ್ನು ಚುನಾವಣೆ ಅಧಿಕಾರಿಗಳು ನೇಮಿಸಲಾಗಿದೆ. ಅಂಗವಿಕಲರು, 80 ವರ್ಷ ವಯಸ್ಸು ದಾಟಿದವರಿಗೆ ಪೋಸ್ಟಲ್ ಬ್ಯಾಲೆಟ್ ನೀಡಲು ಫಾರಂಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
    ಜಿಪಂ ಸಿಇಒ ಎಂ.ಎಸ್.ದಿವಾಕರ, ಎಸ್‌ಪಿ ಕೆ.ಪರಶುರಾಮ್ ಮಾತನಾಡಿದರು.

    *ಕೋಟ್
    ಕಾಸಿಗಾಗಿ ಸುದ್ದಿ ಎಂದು ದೃಢಪಟ್ಟ ಪ್ರಕರಣಗಳಲ್ಲಿ ಅಭ್ಯರ್ಥಿಗಳ ಚುನಾವಣಾ ವೆಚ್ಚಕ್ಕೆ ಪರಿಗಣಿಸಲಾಗುವುದು.
    ಸಿ.ಎಸ್.ಗಾಯತ್ರಿ ಜಿಪಂ ಸಿಪಿಒ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts