More

    15 ದಿನದಲ್ಲಿ 1435 ವಾಹನ ಜಪ್ತಿ!

    ಹುಬ್ಬಳ್ಳಿ: ಜನತಾ ಕರ್ಫ್ಯೂ ಹಾಗೂ ಲಾಕ್​ಡೌನ್ ಅವಧಿಯ 15 ದಿನಗಳಲ್ಲಿ ಹುಬ್ಬಳ್ಳಿ- ಧಾರವಾಡ ಕಮಿಷನರೇಟ್ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಬರೋಬ್ಬರಿ 1435 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

    ಮಾಸ್ಕ್ ಧರಿಸದ 3049 ಜನರಿಂದ 7,62,250ರೂ. ದಂಡ ವಸೂಲಿ ಮಾಡಿದ್ದಾರೆ. ಪರಸ್ಪರ ಅಂತರ ಕಾಯ್ದುಕೊಳ್ಳದ 7805 ಜನರಿಂದ 15,68,000 ರೂ. ದಂಡ ವಸೂಲಿ ಮಾಡಿದ್ದಾರೆ. ರಾಜ್ಯ ವಿಪತ್ತು ನಿರ್ವಹಣೆ ಕಾಯ್ದೆ ಅಡಿ 143 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎನ್​ಡಿಎಂಎ ಕಾಯ್ದೆಯಡಿ 4 ಪ್ರಕರಣ, 991 ವೈಯಕ್ತಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಒಟ್ಟು 1435 ವಾಹನಗಳನ್ನು ಜಪ್ತಿ ಮಾಡಿದ್ದಾರೆ.

    ಜಪ್ತಿ ಮಾಡಿದ ವಾಹನಗಳನ್ನು ಆಯಾ ಪೊಲೀಸ್ ಠಾಣೆಗಳ ಆವರಣ ದಲ್ಲಿ ಇಡಲಾಗಿದೆ. ಇದರಿಂದಾಗಿ ಆವರಣವೆಲ್ಲ ವಾಹನಗಳಿಂದ ಭರ್ತಿಯಾಗಿವೆ. ಠಾಣೆ ಮುಂದಿನ ರಸ್ತೆಗಳಲ್ಲಿ ಕೂಡ ಬೈಕ್, ಕಾರು, ಆಟೋ ಮತ್ತಿತರ ವಾಹನಗಳನ್ನು ರ್ಪಾಂಗ್ ಮಾಡಲಾಗಿದೆ. ಮಾಲೀಕರು ವಾಹನ ಬಿಡಿಸಿಕೊಳ್ಳಲು ಠಾಣೆಗಳಿಗೆ ಅಲೆಯುತ್ತಿದ್ದಾರೆ.

    ನ್ಯಾಯಾಲಯದಲ್ಲಿ ದಂಡ ಪಾವತಿಸಬೇಕು

    ಜಪ್ತಿ ಮಾಡಿದ ವಾಹನಗಳನ್ನು ಸ್ಥಳೀಯ ಠಾಣೆಗಳ ಆವರಣದಲ್ಲಿ ಇಡಲಾಗಿದೆ. ನ್ಯಾಯಾಲಯದ ಅನುಮತಿ ಬಳಿಕ 100 ರೂ. ಬಾಂಡ್ ಪೇಪರ್ ನೀಡಿ ವಾಹನ ಬಿಡಿಸಿಕೊಳ್ಳಬಹುದು. ಈ ವಾಹನಗಳ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಲಾಗುತ್ತದೆ. ನ್ಯಾಯಾಲಯವು ವಾಹನಗಳ ಮಾಲೀಕರ ವಿಳಾಸಕ್ಕೆ ನೋಟಿಸ್ ನೀಡುತ್ತದೆ. ನಂತರ ವಾಹನಗಳ ಮಾಲೀಕರು ನ್ಯಾಯಾಲಯಕ್ಕೆ ದಂಡ ಪಾವತಿಸಬೇಕಾಗುತ್ತದೆ. ದಂಡದ ಮೊತ್ತವನ್ನು ನ್ಯಾಯಾಲಯವೇ ನಿರ್ಧರಿಸುತ್ತದೆ. ಹಾಗಾಗಿ, ವಾಹನ ಸವಾರರು ಅನಗತ್ಯವಾಗಿ ಹೊರಗೆ ಬಂದು ಕೋರ್ಟ್, ಕಚೇರಿ ಅಲೆಯುವ ಬದಲು ಮನೆಯಲ್ಲೇ ಇರುವುದು ಉತ್ತಮ ಎನ್ನುತ್ತಾರೆ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಆರ್.ಬಿ. ಬಸರಗಿ.

    ಲಾಠಿ ಬೀಸಿಲ್ಲ ಹು-ಧಾ ಪೊಲೀಸರು!

    ಲಾಕ್​ಡೌನ್ ಮೊದಲ ದಿನ ಬೆಂಗಳೂರು ಸೇರಿದಂತೆ ವಿವಿಧೆಡೆ ಸಾರ್ವಜನಿಕರ ಮೇಲೆ ಪೊಲೀಸರು ಲಾಠಿ ಏಟು ನೀಡಿದ್ದರು. ಆದರೆ, ಹು-ಧಾ ಪೊಲೀಸರು ವೀಕೆಂಡ್ ಕರ್ಫ್ಯೂ ಆರಂಭವಾದ ದಿನದಿಂದ ಈವರೆಗೂ ಜನರ ಮೇಲೆ ಲಾಠಿ ಬೀಸಿಲ್ಲ ಎಂಬುದು ವಿಶೇಷ. ಅವಳಿ ನಗರದ ಜನತೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಹಾಗಾಗಿ, ಲಾಠಿ ಬೀಸದೆ ಕರ್ತವ್ಯ ನಿರ್ವಹಿಸಬೇಕು ಎಂದು ಅಧಿಕಾರಿ, ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಡಿಸಿಪಿ ಕೆ. ರಾಮರಾಜನ್ ಆರಂಭದಲ್ಲೇ ಹೇಳಿದ್ದರು. ಅದರಂತೆಯೇ ಎಲ್ಲ ಅಧಿಕಾರಿ, ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿರುವುದಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಗಿದೆ.

    ಸರ್ಕಾರದ ಮಾರ್ಗಸೂಚಿ ಪ್ರಕಾರ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಲಾಗುವುದು. ತುರ್ತು ಸಂದರ್ಭ ಹೊರತುಪಡಿಸಿದರೆ ಯಾರಿಗೂ ರಿಯಾಯಿತಿ ನೀಡುವುದಿಲ್ಲ. ಹಾಗಾಗಿ, ಅನಗತ್ಯವಾಗಿ ಯಾರೂ ಹೊರಗೆ ಬರಬಾರದು.

    | ಕೆ. ರಾಮರಾಜನ್, ಡಿಸಿಪಿ (ಕಾನೂನು ಸುವ್ಯವಸ್ಥೆ)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts