More

    ಚುನಾವಣಾ ಅಕ್ರಮ; ನಗದು ಸೇರಿ 403 ಕೋಟಿ ವಸ್ತು ವಶ

    ಬೆಂಗಳೂರು: ಚುನಾವಣಾ ಅಕ್ರಮಗಳ ತಡೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಆಯೋಗ ಈವರೆಗೆ 75.47 ಕೋಟಿ ರೂ. ನಗದು ಸೇರಿದಂತೆ 403.40 ಕೋಟಿ ರೂ. ಮೌಲ್ಯದ ವಸ್ತು ವಶಪಡಿಸಿಕೊಂಡಿದೆ.

    ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡ, ಪೊಲೀಸ್, ಅಬಕಾರಿ, ಆದಾಯ, ವಾಣಿಜ್ಯ ಇಲಾಖೆಗಳು ಕಾರ್ಯಾಚರಣೆ ನಡೆಸಿದ್ದವು. 177.34 ಕೋಟಿ ರೂ. ಬೆಲೆಯ ಮದ್ಯ, 11.23 ಕೋಟಿ ಮೌಲ್ಯದ ಡ್ರಗ್ಸ್, 1.18 ಕೋಟಿ ಬೆಲೆಯ ಬೆಳ್ಳಿ, 57.67 ಕೋಟಿ ಮೌಲ್ಯದ ಚಿನ್ನ, 0.09 ಕೋಟಿ ಬೆಲೆಯ ವಜ್ರ, 8.14 ಕೋಟಿ ಮೌಲ್ಯದ ಉಚಿತ ಉಡುಗೊರೆ, 72.27 ಕೋಟಿ ಬೆಲೆಬಾಳುವ ಇತರೆ ವಸ್ತುಗಳನ್ನು ಮುಟ್ಟುಗೋಲು ಕ್ಷಿಪ್ರ ಪಡೆಗಳು, ಸ್ಥಿರ ಕಣ್ಗಾವಲು ತಂಡ, ಪೊಲೀಸ್ ಅಧಿಕಾರಿಗಳು ನಗದು, ಮದ್ಯ, ಡ್ರಗ್ಸ್, ಬೆಲೆಬಾಳುವ ಲೋಹ, ಉಚಿತ ಉಡುಗೊರೆ ವಶಪಡಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿದಂತೆ ಈವರೆಗ 1975 ಎಫ್ಐಆರ್ ದಾಖಲಿಸಿದ್ದಾರೆ.

    ಬೆಂಗಳೂರು ಬಿನ್ನಿ ಮಿಲ್ ಹತ್ತಿರದ ಎಪಿಎಂಸಿ ಬಳಿ ಇರುವ ಸ್ಥಿರ ಕಣ್ಗಾವಲು ಪಡೆಯ ಚೆಕ್ ಪೋಸ್ಟ್‌ನಲ್ಲಿ ಶನಿವಾಋ ಕಾರಿನಲ್ಲಿ ಸಾಗಿಸುತ್ತಿದ್ದ 2 ಕೋಟಿ ನಗದು ವಶಪಡಿಸಿಕೊಳ್ಳಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts