More

    ಸರ್ಕಾರಿ ಶಾಲೆ, ಅಂಗನವಾಡಿಯ 14 ಮಕ್ಕಳು ಅಸ್ವಸ್ಥ

    ಚಿಂಚೋಳಿ: ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 9 ಹಾಗೂ ಅಂಗನವಾಡಿ ಕೇಂದ್ರದ 5 ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳವಾರ ಸಂಜೆ ಜರುಗಿದ್ದು, ಇದೀಗ ಎಲ್ಲ ಮಕ್ಕಳು ಆರೋಗ್ಯವಾಗಿದ್ದಾರೆ.

    ಕುಂಚಾವರA ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಮಗದಂಪುರ ಹಳ್ಳಿಯಿದ್ದು, ಬಹುತೇಕ ಅರಣ್ಯ ಪ್ರದೇಶವಾಗಿದೆ. ನಿತ್ಯ ಅಪಾರ ಮಕ್ಕಳು ಶಾಲೆ ಹಾಗೂ ಅಂಗನವಾಡಿಗೆ ಬರುತ್ತಾರೆ. ಮಧ್ಯಾಹ್ನದ ಸಮಯದಲ್ಲಿ ಮಕ್ಕಳಲ್ಲಿ ಆರೋಗ್ಯದಲ್ಲಿ ಏರುಪೇರಾಗಿದ್ದು, ಕೂಡಲೇ ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎಲ್ಲ ಮಕ್ಕಳು ಆರೋಗ್ಯವಾಗಿದ್ದು, ಮಂಗಳವಾರವೇ ಡಿಸ್ಚಾರ್ಜ್ ಮಾಡಲಾಗಿತ್ತು.

    ಬುಧವಾರ ಬೆಳಗ್ಗೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ರಾಜಶೇಖರ ಮಾಲಿ, ಶಿಶು ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ನವೀನಕುಮಾರ್, ತಾಲೂಕು ಆರೋಗ್ಯ ಅಧಿಕಾರಿ ಡಾ.ಮಹ್ಮದ್ ಗಫಾರ್ ಮಗದಂಪುರಕ್ಕೆ ಭೇಟಿ ನೀಡಿ, ಅಸ್ವಸ್ಥಗೊಂಡಿದ್ದ ಮಕ್ಕಳ ಆರೋಗ್ಯ ವಿಚಾರಿಸಿದರು.
    ಶಿಕ್ಷಕರು ಹಾಗೂ ಸಿಬ್ಬಂದಿ ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬೆಳಗ್ಗೆ ಶಾಲೆಗೆ ಬಂದಾಗಿನಿAದ ಹಿಡಿದು, ಸಂಜೆ ಮನೆಗೆ ಹೋಗುವವರೆಗೂ ವಿದ್ಯಾರ್ಥಿಗಳ ಜವಾಬ್ದಾರಿ ನಿಮ್ಮದಾಗಿದೆ. ಎಲ್ಲರೂ ಎಚ್ಚರದಿಂದ ಕೆಲಸ ಮಾಡಬೇಕು. ಗುಣಮಟ್ಟದ ಶಿಕ್ಷಣ, ಸಾಮಾನ್ಯ ಜ್ಞಾನ ಬೋಧನೆಗೆ ಆದ್ಯತೆ ಕೊಡಬೇಕು ಎಂದು ತಾಕೀತು ಮಾಡಿದರು.

    ರಸ್ತೆಯ ಮೇಲೆ ಬಿದ್ದ, ಅರಣ್ಯದಲ್ಲಿರುವ ಯಾವುದೇ ವಸ್ತುಗಳು ಮುಟ್ಟಬಾರದು. ಗಿಡದಲ್ಲಿನ ಹಣ್ಣು ಸೇರಿ ಇನ್ನಿತರ ವಸ್ತುಗಳನ್ನು ಸೇವಿಸಬೇಕಾದರೆ ಪೋಷಕರು, ಶಿಕ್ಷಕರ ಬಳಿ ಕೇಳಬೇಕು ಎಂದು ಮಕ್ಕಳಿಗೆ ಸಲಹೆ ನೀಡಿದರು.
    ಅಧಿಕಾರಿಗಳಾದ ಡಾ.ಬಾಲಾಜಿ, ಡಾ.ಈಶ್ವರರಾಜ, ಅಭಿವೃದ್ಧಿ ಅಧಿಕಾರಿ ರಾಮಕೃಷ್ಣ, ವಿಜಯ, ರಾಜಶೇಖರ, ಪರಿಮಳಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts