More

    ಸಾಗರ: ಸಹಕಾರ ಸಂಘಟನೆಗಳು ಗ್ರಾಮೀಣ ಜನರ ಆರ್ಥಿಕ ಸಬಲೀಕರಣದ ಜೀವನಾಡಿಗಳು. ಸಹಕಾರ ಸಂಘಟನೆಗಳು ನಂಬಿಕೆಯ ಮೇಲೆ ನಿಂತಿದೆ ಎಂದು ಶಾಸಕ ಹರತಾಳು ಹರತಾಳು ಹೇಳಿದರು.
    ನಗರದ ಗಣಪತಿ ಬ್ಯಾಂಕ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ 69ನೇ ಅಖಿಲ ಭಾರತ ಸಹಕಾರ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿ, ಸಹಕಾರ ಸಂಸ್ಥೆಗಳು ಅಸ್ತಿತ್ವಕ್ಕೆ ಬಂದಮೇಲೆ ಬಡ್ಡಿ, ಚಕ್ರಬಡ್ಡಿ, ಮೀಟರ್ ಬಡ್ಡಿ ಮೂಲೆಗುಂಪಾಗಿದೆ. ಸಹಕಾರ ಚಳವಳಿ ರಾಜ್ಯದಲ್ಲಿ ಸದೃಢವಾಗಿದೆ. ಇಂದು ಗ್ರಾಮೀಣ ಭಾಗದಲ್ಲಿ ಸಣ್ಣ, ಅತಿ ಸಣ್ಣ ವ್ಯಾಪಾರ ವಹಿವಾಟು ನಡೆಸುವವರು ಸಹಕಾರ ಸಂಸ್ಥೆಗಳನ್ನು ನಂಬಿಕೊಂಡು ಮುನ್ನಡೆಯುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೂ ಸಹಕಾರ ಸಂಘಟನೆಗಳು ಬೆನ್ನೆಲುಬಾಗಿ ನಿಂತಿದೆ ಎಂದರು.
    ಡಿಸಿಸಿ ಅಧ್ಯಕ್ಷ ಎಂ.ಬಿ.ಚನ್ನವೀರಪ್ಪ ಮಾತನಾಡಿ, ಸಹಕಾರ ಚಳವಳಿ ಕಟ್ಟುವಲ್ಲಿ ರಾಜ್ಯದ ಪಾತ್ರ ಪ್ರಮುಖವಾಗಿದೆ. ಸಹಕಾರ ಸಪ್ತಾಹದ ಮೂಲಕ ಸಹಕಾರಿಗಳ ಸಮ್ಮಿಲನ ಅಪೂರ್ವ ಕ್ಷಣವಾಗಿದೆ. ಜಿಲ್ಲೆಯಲ್ಲಿ ಸಹಕಾರ ಕ್ಷೇತ್ರ ನಂ.1 ಸ್ಥಾನದಲ್ಲಿದೆ. ಸಾಗರ ತಾಲೂಕು ಸಹಕಾರ ಕ್ಷೇತ್ರಕ್ಕೆ ನೀಡಿದ ಕೊಡುಗೆ ಸ್ಮರಣೀಯವಾದದ್ದು. ಕೆಲವು ವರ್ಷಗಳ ಹಿಂದೆ ನಷ್ಟದಲ್ಲಿದ್ದ ಡಿಸಿಸಿ ಬ್ಯಾಂಕ್ ಪುನಶ್ಚೇತನಗೊಂಡು, ಲಾಭದಾಯಕ ಸ್ಥಿತಿಯತ್ತ ಸಾಗಲು ಸಾಗರ ಸಹಕಾರ ಸಂಸ್ಥೆಗಳ ಕೊಡುಗೆ ಸ್ಮರಣೀಯ. ಜನತೆ ಸಹಕಾರ ಬ್ಯಾಂಕ್‌ಗಳ ಮೇಲೆ ವಿಶ್ವಾಸವಿಟ್ಟು ವಹಿವಾಟು ನಡೆಸುವ ಕಾಲ ಈಗ ಬಂದಿದ್ದು, ಸಹಕಾರ ಸಂಸ್ಥೆಯ ಜನಮುಖಿ ಚಿಂತನೆಗಳನ್ನು ಜನ ಅಭಿಮಾನದಿಂದ ಒಪ್ಪಿಕೊಳ್ಳುತ್ತಿದ್ದಾರೆ ಎಂದರು.
    ತಾಲೂಕಿನಲ್ಲಿ ಅತ್ಯಂತ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಜನಮುಖಿ ಸೇವೆ ನಡೆಸುತ್ತಿರುವ ಸಾಗರದ ಗಣಪತಿ ಬ್ಯಾಂಕ್‌ಗೆ ಉತ್ತಮ ಬ್ಯಾಂಕ್, ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿ ಲಲಿತಾಂಬಿಕಾ ಅವರಿಗೆ ಉತ್ತಮ ಕಾರ್ಯ ನಿರ್ವಾಹಣಾಧಿಕಾರಿ ಪ್ರಶಸ್ತಿ ಸೇರಿದಂತೆ ವಿವಿಧ ಸಹಕಾರ ಸಂಸ್ಥೆಗಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts