More

    ಇಟಗಿ, ಬೆಳಗಾವಿ: ಭಾರತೀಯ ಸಂಸ್ಕೃತಿಯಲ್ಲಿ ಗುರುವಿಗೆ ಉನ್ನತ ಸ್ಥಾನವಿದೆ. ಅಧುನಿಕತೆಯ ಭರಾಟೆಯಲ್ಲಿಯೂ ಗುರು ಪರಂಪರೆ ಗೌರವಿಸುವ ಮೂಲಕ ಮುಂದಿನ ಪೀಳಿಗೆಗೆ ಪರಿಚಯಿಸಬೇಕಿದೆ ಎಂದು ಇಟಗಿ ಜನತಾ ಶಿಕ್ಷಣ ಪ್ರಸಾರ ಸಮಿತಿ ಚೇರ್ಮನ್ ವಿಜಯಕುಮಾರ ಸಾಣಿಕೊಪ್ಪ ಹೇಳಿದರು.

    ಇಲ್ಲಿನ ಚನ್ನಮ್ಮ ರಾಣಿ ಸ್ಮಾರಕ ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ 2003-4ನೇ ಸಾಲಿನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಂದ ಸೋಮವಾರ ಏರ್ಪಡಿಸಿದ್ದ ಗುರುವಂದನೆ ಹಾಗೂ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಇಟಗಿಯ ಜನತಾ ಶಿಕ್ಷಣ ಪ್ರಸಾರ ಸಮಿತಿ ಗ್ರಾಮೀಣ ಭಾಗದಲ್ಲಿ ವಿದ್ಯಾದಾನ ನೀಡುವ ಮೂಲಕ ಮಹೋನ್ನತ ಕಾರ್ಯ ಮಾಡುತ್ತಿದೆ ಎಂದರು. ಕಸಾಪ ತಾಲೂಕು
    ಘಟಕದ ಮಾಜಿ ಅಧ್ಯಕ್ಷ ಪಿ.ವಿ.ಬಡಿಗೇರ ಮಾತನಾಡಿ, ಆಧುನಿಕ ಯುಗದಲ್ಲಿಯೂ ಗುರು ಪರಂಪರೆಯನ್ನು ವಿದ್ಯಾರ್ಥಿಗಳು ಮುಂದುವರಿಸಿಕೊಂಡು ಬಂದಿರುವುದು ಹೆಮ್ಮೆಯ ಸಂಗತಿ ಎಂದರು. ಎಲ್ಲ ಶಿಕ್ಷಕರು, ಅಂಗ ಸಂಸ್ಥೆಗಳ ಮುಖ್ಯಸ್ಥರು ಮತ್ತು ಬೋಧಕ, ಬೋಧಕೇತರ ಸಿಬ್ಬಂದಿಯನ್ನು ಸತ್ಕರಿಸಲಾಯಿತು. ಶ್ರೀಧರ ಗೂರನವರ, ಶೀಲಾ ಗಳಗಿ, ಸೋಮಶೇಖರ ಶೀಲಿ, ಸಂಜೀವ ಹುಣಶಿಕಟ್ಟಿ, ಸಚ್ಚಿನ ಪಾಟೀಲ, ಮಂಜು ಗುಡದನ್ನವರ, ಪ್ರೇಮಾ ಮುದನಗೌಡರ ಮಾತನಾಡಿದರು. ಉದಯ ರೆಳೇಕರ, ಪವಿತ್ರಾ ಕೊಟಬಾಗಿ, ನಾಗರತ್ನಾ ಮುತ್ನಾಳ, ಸಂತೋಷ ಬಳಗಪ್ಪನವರ, ರವಿ ಪಟ್ಟಣಶೆಟ್ಟಿ, ಈರಣ್ಣ ತಟ್ಟಿಮನಿ, ನಿವೃತ್ತ ಪ್ರಾಚಾರ್ಯ ಸಿ.ಬಿ.ಲಂಗೋಟಿ, ಎಸ್.ಎಸ್.ಶಾಸ್ತ್ರಿ, ಆರ್.ಬಿ.ಹುಣಶಿಕಟ್ಟಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts