More

    ಒಂದೇ ದಿನ 195 ಮಂದಿ ಡಿಸ್ಚಾರ್ಜ್

    ಮಂಗಳೂರು: ದ.ಕ.ಜಿಲ್ಲೆಯಲ್ಲಿ ಭಾನುವಾರ 132 ಕೋವಿಡ್ ಪಾಸಿಟಿವ್ ಪ್ರಕರಣ ಹಾಗೂ 6 ಸಾವು ವರದಿಯಾಗಿವೆ. ಒಂದೇ ದಿನ 195 ಮಂದಿ ಸೋಂಕುಮುಕ್ತರಾಗಿ ಮನೆಗೆ ಮರಳಿರುವುದು ಪಾಸಿಟಿವ್ ಸುದ್ದಿ.
    132ರಲ್ಲಿ 81 ಮಂಗಳೂರಿನ ಪ್ರಕರಣ. ಉಳಿದಂತೆ ಬಂಟ್ವಾಳದಿಂದ 22, ಸುಳ್ಯದಿಂದ 3, ಪುತ್ತೂರಿನಿಂದ 6, ಬೆಳ್ತಂಗಡಿಯಿಂದ 4 ಹಾಗೂ ಇತರ ಜಿಲ್ಲೆಗಳಿಂದ 16 ಪಾಸಿಟಿವ್ ಪ್ರಕರಣ ಬಂದಿವೆ. ಮೃತಪಟ್ಟ ಎಲ್ಲ 6 ಮಂದಿಯಲ್ಲಿಯೂ ಇತರ ಆರೋಗ್ಯ ಸಮಸ್ಯೆಗಳಿದ್ದವು. ಬಂಟ್ವಾಳ, ಮಂಗಳೂರಿನ ತಲಾ ಇಬ್ಬರು, ಸುಳ್ಯದ ಒಬ್ಬರು ಹಾಗೂ ಹೊರ ಜಿಲ್ಲೆಯ ಒಬ್ಬರು ಮೃತಪಟ್ಟವರು.
    ಜಿಲ್ಲೆಯಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 7207 ತಲುಪಿದೆ. ಪ್ರಸ್ತುತ 3305 ಸಕ್ರಿಯ ಪ್ರಕರಣಗಳಿವೆ. ಒಟ್ಟು 3682 ಮಂದಿ ಬಿಡುಗಡೆಯಾಗಿದ್ದು, ಶೇ.50ರಷ್ಟು ಮಂದಿ ಗುಣವಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು ಸಾವಿನ ಸಂಖ್ಯೆ 220 ತಲಪಿದೆ.

    ಕಾಸರಗೋಡು ಸಂಸದ ಹೋಂ ಕ್ವಾರಂಟೈನ್
    ಕುಂಬಳೆ: ಸರ್ಕಾರಿ ವಾಹನದ ಚಾಲಕನಿಗೆ ಕೋವಿಡ್ ದೃಢವಾದ ಹಿನ್ನೆಲೆಯಲ್ಲಿ ಕಾಸರಗೋಡು ಸಂಸದ ರಾಜಮೋಹನ್ ಉಣ್ಣಿತ್ತಾನ್ ಕಾಞಂಗಾಡಿನ ನಿವಾಸದಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಶನಿವಾರ ಸಂಸದರು ಮತ್ತು ಚಾಲಕನ ಗಂಟಲ ದ್ರವ ಪರೀಕ್ಷೆ ಮಾಡಲಾಗಿದ್ದು, ಚಾಲಕನಲ್ಲಿ ಸೋಂಕು ಕಂಡುಬಂದಿತ್ತು. ಸಂಸದರ ಕಚೇರಿಗೆ 10 ದಿನಗಳ ಮಟ್ಟಿಗೆ ಬೀಗ ಹಾಕಲಾಗಿದ್ದು, ಅವರ ಎಲ್ಲ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ರದ್ದುಪಡಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
    *56 ಕೇಸ್: ಜಿಲ್ಲೆಯ 56 ಮಂದಿಯಲ್ಲಿ ಕರೊನಾ ಸೋಂಕು ರೋಗ ಕಾಣಿಸಿಕೊಂಡಿದೆ. ಚಿಕಿತ್ಸೆ ಪಡೆಯುತ್ತಿದ್ದವರ ಪೈಕಿ ಜಿಲ್ಲೆಯ 116 ಮಂದಿ ಸಹಿತ ರಾಜ್ಯದಲ್ಲಿ 970 ಮಂದಿ ಗುಣವಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts