More

    13 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ

    ಆಯನೂರು: ಸಮೀಪದ ಆಡಿನಕೊಟ್ಟಿಗೆ ಗ್ರಾಮದಲ್ಲಿ ಭಾನುವಾರ ರಾತ್ರಿ 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ರಕ್ಷಿಸಿ, ಅರಣ್ಯಕ್ಕೆ ಬಿಡಲಾಯಿತು.

    ಗ್ರಾಮದ ನಿವಾಸಿಯೊಬ್ಬರ ಮನೆಯ ಹಿಂಭಾಗದಲ್ಲಿ ಸೇರಿಕೊಂಡಿದ್ದ ಕಾಳಿಂಗ ಸರ್ಪ ಕಂಡು ಸ್ಥಳೀಯರು ಹೌಹಾರಿದ್ದಾರೆ. ತಕ್ಷಣ ಉರಗ ಪ್ರೇಮಿ ಬೆಳ್ಳೂರು ನಾಗರಾಜಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಕೂಡಲೆ ಸ್ಥಳಕ್ಕಾಗಮಿಸಿದ ನಾಗರಾಜ ಅವರು ಕೆಲ ಸಮಯ ಕಾಳಿಂಗ ಸರ್ಪದ ಚಲನವಲನ ಪರಿಶೀಲಿಸಿ ಬಳಿಕ ಸೆರೆ ಹಿಡಿದಿದ್ದಾರೆ. ತದನಂತರ ಸಿರಿಗೆರೆ ಅರಣ್ಯ ಅಧಿಕಾರಿ ಮಂಜುನಾಥ್ ಸಮ್ಮುಖದಲ್ಲಿ ಸುರಕ್ಷಿತವಾಗಿ ಸಮೀಪದ ದಟ್ಟ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts