More

    ಆಸ್ಕರ್ ರೇಸ್‌ಗೆ 12 ಫೇಲ್; ವಿಧು ವಿನೋದ್ ಚೋಪ್ರ ನಿರ್ದೇಶನದ ಚಿತ್ರ

    ವಿಧು ವಿನೋದ್ ಚೋಪ್ರಾ ಆ್ಯಕ್ಷನ್-ಕಟ್ ಹೇಳಿರುವ ‘12 ಫೇಲ್’ ಸಿನಿಮಾ ಕಳೆದ ಅ.27ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲೇ ಪ್ಯಾನ್ ಇಂಡಿಯಾ ಹೊರಟಿದ್ದು ವಿಶೇಷ ಆಗಿತ್ತು. ಈಗ ವಿಶ್ವ ಮಟ್ಟ ತಲುಪುವ ಸಿದ್ಧತೆ ಕಾಣುತ್ತಿದೆ. ಹೌದು, 2024ರ ಆಸ್ಕರ್ ಪ್ರಶಸ್ತಿಗೆ ಸ್ವತಂತ್ರವಾಗಿ ನಾಮನಿರ್ದೇಶನಕ್ಕೆ ಅರ್ಜಿ ಸಲ್ಲಿಸಲಾಗಿದೆ ಎನ್ನಲಾಗಿದೆ. ಈ ವಿಷಯನ್ನು ಚಿತ್ರದ ನಾಯಕ ವಿಕ್ರಾಂತ್ ಮಾಸ್ಸೆ ಇತ್ತೀಚೆಗಷ್ಟೆ ಹಂಚಿಕೊಂಡಿದ್ದಾರೆ.

    ಇನ್ನು ಈ ಸಿನಿಮಾ, ಮಧ್ಯಪ್ರದೇಶ ಮೂಲದ ಐಪಿಎಸ್ ಅಧಿಕಾರಿ ಮನೋಜ್ ಕುಮಾರ್ ಶರ್ಮಾ ಜೀವನಾಧಾರಿತ ಕಥೆ. ಬಡ ಕುಟುಂಬದಲ್ಲಿ ಜನಿಸಿದ ಮನೋಜ್ 12ನೇ ತರಗತಿಯಲ್ಲಿ ೇಲ್ ಆಗುತ್ತಾನೆ. ಶಾಲೆಯಲ್ಲಿ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದ ಆತ, ಆಕೆಯ ಬಳಿ ಪ್ರೇಮನಿವೇದನೆ ಮಾಡಿಕೊಳ್ಳುತ್ತಾನೆ. ಆಕೆ ಒಪ್ಪಿಕೊಂಡು ಕೆಲ ಕಂಡೀಷನ್‌ಗಳನ್ನು ಹಾಕುತ್ತಾಳೆ. ಅದರಂತೆ ಓದಿನತ್ತ ಗಮನ ಹರಿಸುವ ಮನೋಜ್, ಬಡತನದ ನಡುವೆ ಟೆಂಪೋ ಡ್ರೈವರ್ ಆಗಿ ಕೆಲಸ ಮಾಡುತ್ತಾ, ರಸ್ತೆಬದಿಯಲ್ಲೇ ಮಲಗಿ, ಕಷ್ಟಪಟ್ಟು ಓದುತ್ತಾರೆ. ಮೂರು ಬಾರಿ ಐಎಎಸ್ ಪರೀಕ್ಷೆಯಲ್ಲಿ ನಪಾಸಾದರೂ, ನಾಲ್ಕನೇ ಬಾರಿ 121ನೇ ರ‌್ಯಾಂಕ್ ಪಡೆದು ಐಪಿಎಸ್ ಅಧಿಕಾರಿಯಾಗುತ್ತಾರೆ.

    ಇಂತಹದೊಂದು ಸ್ಫೂರ್ತಿದಾಯಕ ಕಥೆಯ ಸಿನಿಮಾ ಈಗಾಗಲೇ ಬಾಕ್ಸಾಫೀಸಿನಲ್ಲಿ ಸುಮಾರು 45 ಕೊಟಿ ರೂ.ಗಳಷ್ಟು ಗಳಿಕೆ ಮಾಡಿಕೊಂಡಿದೆ. – ಏಜೆನ್ಸೀಸ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts