More

    ‘100 ರೂ. ನೂರು ದಿನಗಳು’! ಶತದಿನೋತ್ಸವ ಸಂಭ್ರಮದಲ್ಲಿ ’12 ಫೇಲ್’​

    ಬೆಂಗಳೂರು: ಹೆಸರಾಂತ ನಿರ್ದೇಶಕ ವಿಧು ವಿನೋದ್ ಚೋಪ್ರಾ ನಿರ್ದೇಶಿಸಿದ ‘12 ಫೇಲ್’ ಸಿನಿಮಾ ಕಳೆದ ಅ.27ರಂದು ಪ್ಯಾನ್ ಇಂಡಿಯಾ ರಿಲೀಸ್ ಆಗಿತ್ತು. ಮೊದಲ ವಾರಗಳಲ್ಲಿ ಅಷ್ಟು ಸದ್ದು ಮಾಡದ ಚಿತ್ರ, ತದನಂತರದಲ್ಲಿ ಸದ್ದಿಲ್ಲದಂತೆ ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಗಳಿಕೆ ಕಂಡಿತು. ಚಿತ್ರರಸಿಕರಿಂದ ಉತ್ತಮ ವಿಮರ್ಶೆ ಮತ್ತು ಪ್ರಶಂಸೆ ಪಡೆದ ಫಿಲಂ ಇಂದು ಥಿಯೇಟರ್​ಗಳಲ್ಲಿ 100 ದಿನಗಳನ್ನು ಪೂರೈಸಿದೆ. ಈ ಖುಷಿಯನ್ನು ಸಂಭ್ರಮಿಸಿದ ಚಿತ್ರತಂಡ, ಶತದಿನೋತ್ಸವ ದಿನದಂದು ಟಿಕೆಟ್​ ದರವನ್ನು 100 ರೂ. ಮಾಡಿ ವಿಶೇಷವಾಗಿ ಆಚರಿಸಿದೆ.

    ಇದನ್ನೂ ಓದಿ: ಶಾಲಾ ವಠಾರದಲ್ಲೇ ಕಲಿಕೋಪಕರಣ

    ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದ ’12 ಫೇಲ್’​, ಒಟಿಟಿ ಪ್ರವೇಶಿಸಿದ ಬಳಿಕವೂ ಚಿತ್ರಮಂದಿರಗಳಲ್ಲಿ ಹೆಚ್ಚಿನ ಪ್ರದರ್ಶನ ಕಾಣುತ್ತಿದೆ. ಇದು ಅನೇಕ ಸಿನಿಪ್ರೇಕ್ಷಕರಿಗೆ ಅಚ್ಚರಿ ಮೂಡಿಸಿದ್ದು, ಈ ಚಿತ್ರ ಒಟಿಟಿಗೆ ಬಂದರೂ ಕೂಡ ಥಿಯೇಟರ್​​ಗಳಲ್ಲಿ ಒಳ್ಳೆ ಪ್ರದರ್ಶನ ಕಾಣುತ್ತಿರುವುದು ಆಶ್ಚರ್ಯ ಎಂದು ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯಿಸಿದ್ದಾರೆ. ಈಗಾಗಲೇ ವಿಶ್ವ ಮಟ್ಟ ತಲುಪಿರುವ ಈ ಚಿತ್ರವನ್ನು 2024ರ ಆಸ್ಕರ್ ಪ್ರಶಸ್ತಿಗೆ ಸ್ವತಂತ್ರವಾಗಿ ನಾಮನಿರ್ದೇಶನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಈ ವಿಷಯನ್ನು ಚಿತ್ರದ ನಾಯಕ ವಿಕ್ರಾಂತ್ ಮಾಸ್ಸೆ ಸಹ ಇತ್ತೀಚೆಗಷ್ಟೆ ಹಂಚಿಕೊಂಡಿದ್ದರು.

    ಈ ಚಿತ್ರದ ಮೂಲಕ ಯುಪಿಎಸ್​ಸಿ ಪರೀಕ್ಷಾ ಆಕಾಂಕ್ಷಿಗಳ ಮನಗೆದ್ದ ನಟ ವಿಕ್ರಾಂತ್ ಮಾಸ್ಸೆ ಇಂದು ಅಪಾರ ಜನಮನ್ನಣೆ ಸ್ವೀಕರಿಸಿ ತಮ್ಮ ಸ್ಟಾರ್ ಪಟ್ಟವನ್ನು ಮತ್ತಷ್ಟು ಹೆಚ್ಚಿಸಿಕೊಂಡಿದ್ದಾರೆ. ಐಪಿಎಸ್ ಮನೋಜ್ ಕುಮಾರ್ ಶರ್ಮಾ ಅವರ ಪಾತ್ರದಲ್ಲಿ ಕಾಣಿಸಿಕೊಂಡ ಮಾಸ್ಸೆಗೆ ನಾಯಕಿಯಾಗಿ ಮೇಧಾ ಶಂಕರ್​ ಸಾಥ್​ ನೀಡಿದರು. ತೆರೆ ಮೇಲೆ ಅದ್ಭುತವಾಗಿ ಮೂಡಿಬಂದ ’12 ಫೇಲ್​’ ಚಿತ್ರ ಇದೀಗ ಅದ್ದೂರಿ ಯಶಸ್ಸನ್ನು ದಾಖಲಿಸಿದ್ದು, 100 ದಿನಗಳ ಸಂಭ್ರಮವನ್ನು ಚಿತ್ರಮಂದಿರದಲ್ಲೇ ಆಚರಿಸಿದೆ.

    ಇದನ್ನೂ ಓದಿ: ಬರ ಪರಿಹಾರ; ಬಿಜೆಪಿ ನಾಯಕರಿಗೆ ಪ್ರತಿಭಟನೆ ನಡೆಸುವ ನೈತಿಕತೆ ಇಲ್ಲ-ಗೃಹ ಸಚಿವ ಡಾ.ಜಿ. ಪರಮೇಶ್ವರ

    ಧೈರ್ಯ, ಸಾಂತ್ವನ, ಪ್ರೀತಿ, ಉತ್ಸಾಹ ಇನ್ನು ಅನೇಕ ಭಾವನೆಗಳನ್ನು ಚಿತ್ರದ ಮೂಲಕ ಕಟ್ಟಿಕೊಟ್ಟ ಚಿತ್ರತಂಡಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಭಿನಂದನೆಗಳು ವ್ಯಕ್ತವಾಗುತ್ತಿವೆ.

    ಬದುಕಿಗಾಗಿ ಕಡಲೆಕಾಯಿ ಮಾರಾಟ; 33 ವರ್ಷ ವಠಾರದಲ್ಲಿ ವಾಸ, ಇಂದು 212 ಕೋಟಿ ರೂ. ಆಸ್ತಿಯ ಒಡೆಯ ಈ ನಟ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts