More

    ಮೀನು ಕೃಷಿಗೆ ಹೆಚ್ಚಿದ ಪ್ರೋತ್ಸಾಹ

    ಧನಂಜಯ ಎಸ್. ಹಕಾರಿ ದಾವಣಗೆರೆ
    ದಾವಣಗೆರೆ ಜಿಲ್ಲೆಯಲ್ಲಿ ಮತ್ಸೃ ಕೃಷಿಗೆ ಬೇಡಿಕೆ ಹೆಚ್ಚಿದ್ದು ಗ್ರಾಮೀಣ ರೈತರು ಸಮಗ್ರ ಕೃಷಿ ದೃಷ್ಟಿಯಿಂದ ಮೀನು ಸಾಕಣೆಗೆ ಹೆಚ್ಚಿನ ಒಲವು ತೋರುತ್ತಿದ್ದಾರೆ.

    ರಾಜ್ಯದಲ್ಲಿ ಮೀನುಮರಿ ಬಿತ್ತನೆ, ಉತ್ಪಾದನೆ, ಆದಾಯದಲ್ಲಿ 12ನೇ ಸ್ಥಾನದಲ್ಲಿರುವ ದಾವಣಗೆರೆ ಜಿಲ್ಲೆಯನ್ನು ಟಾಪ್ 10 ರೊಳಗೆ ತರುವ ಗುರಿ ಹೊಂದಲಾಗಿದೆ.

    ಕಳೆದ ವರ್ಷ 112 ಲಕ್ಷ ಮೀನು ಮರಿ ಬಿತ್ತನೆ ಮಾಡಿದ್ದ ಇಲಾಖೆ ಈ ವರ್ಷ 125 ಲಕ್ಷ ಮೀನು ಮರಿಗಳ ಬಿತ್ತನೆಗೆ ಗುರಿ ವಿಸ್ತರಿಸಿಕೊಂಡು ಕಾರ್ಯೋನ್ಮುಖವಾಗಿದೆ.

    ಒಂದು ಕಾಲದಲ್ಲಿ ಭತ್ತ ಮಾತ್ರ ಬೆಳೆಯುತ್ತಿದ್ದ ರೈತರ ಹೊಲದಲ್ಲೀಗ ಅಲ್ಲಲ್ಲಿ ಮೀನು ಕೃಷಿ ಹೊಂಡಗಳು ತಲೆ ಎತ್ತುತ್ತಿವೆ.

    ಬರಡು ನೆಲದಲ್ಲಿ ಬೆಳೆ ಬೆಳೆದು ನಷ್ಟ ಅನುಭವಿಸುವ ಬದಲು ಮೀನು ಸಾಕಿ ಲಾಭ ಮಾಡುವುದೇ ಲೇಸು ಎನ್ನುತ್ತಾರೆ ರೈತರು.

    ಜಿಲ್ಲೆಯಲ್ಲಿ 2800ಕ್ಕೂ ಹೆಚ್ಚು ಸಾಂಪ್ರದಾಯಿಕ ಮೀನುಗಾರರಿದ್ದಾರೆ. 110 ಕೃಷಿ ಹೊಂಡಗಳಿವೆ.

    ಇವುಗಳಿಂದ ವರ್ಷಕ್ಕೆ 1 ಸಾವಿರ ಟನ್ ಇಳುವರಿ ಸೇರಿದಂತೆ ಒಟ್ಟು 42,320 ಟನ್ ಮೀನು ಉತ್ಪಾದಿಸಲಾಗುತ್ತಿದೆ.

    ವರ್ಷವಿಡೀ ನೀರಿರುವ ಶಾಂತಿ ಸಾಗರದಲ್ಲಿ 6- 8 ಹಾಗೂ 10 ಕೆಜಿ ತೂಕದ ಮೀನುಗಳು ಸಿಕ್ಕರೆ ಉಳಿದೆಡೆ ದೊರೆಯ ವ ಮೀನುಗಳು ಸಾಮಾನ್ಯವಾಗಿ ಒಂದೂವರೆಯಿಂದ- ಎರಡು ಕೆಜಿ ತೂಗುತ್ತವೆ.

    ಜಿಲ್ಲೆ, ಹೊರ ಜಿಲ್ಲೆಗಳಲ್ಲಿ ಉತ್ತಮ ಬೇಡಿಕೆ ಕೂಡ ಇದೆ. ಜಿಲ್ಲೆಯ 5 ತಾಲೂಕುಗಳಲ್ಲಿ ಮೀನುಗಾರಿಕಾ ಕೇಂದ್ರಗಳಿದ್ದು, ಸ್ಥಳೀಯವಾಗಿ ಮೀನು ಕೃಷಿಗೆ ನೆರವು ನೀಡುತ್ತಿವೆ.

    ತಾಲೂಕು ಮಟ್ಟದ ಅಧಿಕಾರಿಗಳು ಆಯಾ ವ್ಯಾಪ್ತಿಯ ಕೆರೆಗಳನ್ನು ಇಲಾಖೆ ನಿರ್ದೇಶನದ ಅನುಸಾರ ಟೆಂಡರ್ ಕರೆದು ಮೀನು ಸಾಕಣೆದಾರರ ಸಂಘ ಹಾಗೂ ಕೃಷಿಕರಿಗೆ ಗುತ್ತಿಗೆ ಆಧಾರದಲ್ಲಿ ಪರವಾನಗಿ ನೀಡಲಿದ್ದಾರೆ.

    ಮೀನು ಸಾಕಣೆ ಉತ್ತೇಜಿಸಲು ಕೇಂದ್ರ- ರಾಜ್ಯ ಸರ್ಕಾರಗಳು ವಿವಿಧ ಯೋಜನೆ ಜಾರಿಗೆ ತಂದಿವೆ.

    ಮೀನು ಹಿಡಿದು ಜೀವನ ನಿರ್ವಹಿಸುವ ಪ.ಜಾತಿ, ಪಂಗಡಗಳ ಮೀನುಗಾರರಿಗೆ ಜಿಪಂ ವಿಶೇಷ ಯೋಜನೆಯಿಂದ 10 ಸಾವಿರ ರೂ. ಮೌಲ್ಯದ ಬಲೆ, ಗಾಳ, ತೆಪ್ಪ ಸೇರಿ ಇತರ ಪರಿಕರ ಒಳಗೊಂಡ ಕಿಟ್ ಉಚಿತವಾಗಿ ನೀಡಲಾಗುತ್ತಿದೆ.

    ವಸತಿ ರಹಿತರಿಗೆ ಮತ್ಸಾೃಶ್ರಯ ಯೋಜನೆಯಡಿ ಮನೆ ನಿರ್ಮಿಸಿ ಕೊಡಲಾಗುತ್ತಿದೆ.

    ಮಾರಾಟಗಾರರಿಗೂ ನೆರವು: ಮೀನು ಮಾರಾಟ ಮಾಡುವವರಿಗೆ ಇಲಾಖೆ ವತಿಯಿಂದ ಸಹಾಯಧನ ನೀಡಲಾಗುತ್ತಿದೆ. ಮೋಟಾರ್ ಸೈಕಲ್ ಹಾಗೂ ಮೀನು ಶೇಖರಿಸಲು ಬಾಕ್ಸ್ ಕೊಡಲಾಗುತ್ತದೆ.

    ಈ ಯೋಜನೆಯಲ್ಲಿ ಶೇ.75ರಷ್ಟು ಸಬ್ಸಿಡಿ ನೀಡಲಾಗುತ್ತಿದೆ.

    ಮೀನು ಕೊಳಕ್ಕೆ ಸಬ್ಸಿಡಿ: ಪ್ರಧಾನಮಂತ್ರಿ ಮತ್ಸೃ ಸಂಪದ ಯೋಜನೆಯಡಿ ಹೊಸದಾಗಿ ಮೀನು ಕೃಷಿ ಮಾಡಲು ಕೊಳ ನಿರ್ಮಾಣಕ್ಕೆ 1 ಹೆಕ್ಟೇರ್ ಪ್ರದೇಶಕ್ಕೆ 7 ಲಕ್ಷ ರೂ. ನೆರವು ದೊರೆಯಲಿದೆ.

    ಮಾರಾಟ, ಮೀನು ಬೆಳವಣಿಗೆಯ ಆಹಾರ, ಗೊಬ್ಬರಗಳಿಗೆ ಸಾಮಾನ್ಯವಾಗಿ ಶೇ.40 ಸಹಾಯ ಧನ ದೊರೆಯಲಿದೆ. ಅಲ್ಲದೇ ಹೂಡಿಕೆ ವೆಚ್ಚ ಎಂದು ಪ್ರತಿ ಹೆಕ್ಟೇರ್‌ಗೆ 4 ಲಕ್ಷ ರೂ. ನೀಡಲಾಗುತ್ತಿದೆ.

    125 ಲಕ್ಷ ಮೀನು ಮರಿಗಳ ಬಿತ್ತನೆ ಗುರಿ: ಜಿಲ್ಲೆಯಲ್ಲಿ ಈ ವರ್ಷ 125 ಲಕ್ಷ ಮೀನು ಬಿತ್ತನೆ ಗುರಿ ಹೊಂದಿದ್ದು ಈ ಸಂಬಂಧ 223 ಗ್ರಾಪಂ ಕೆರೆ ಹಾಗೂ ಇಲಾಖೆ ವ್ಯಾಪ್ತಿಯ 94 ಕೆರೆಗಳಲ್ಲಿ ಮರಿಗಳನ್ನು ಶೇಖರಿಸಲಾಗುವುದು.

    ಈ ಪ್ರಕ್ರಿಯೆ ಮಳೆ ಬಂದು ಕೆರೆ ತುಂಬಿದ ನಂತರ ಶುರುವಾಗಲಿದೆ. ಕಳೆದ ವರ್ಷ ಇಷ್ಟೇ ಪ್ರಮಾಣದಲ್ಲಿ ದಾಸ್ತಾನಿಗೆ ನಿರ್ಧರಿಸಲಾಗಿತ್ತು. ಆದರೆ, 112 ಲಕ್ಷ ಮಾತ್ರ ದಾಸ್ತಾನು ಮಾಡಲಾಗಿತ್ತು

    ಥಿಲಾಪಿಯಾ ತಳಿಗೆ ಬೇಡಿಕೆ: ಜಿಲ್ಲೆಯಲ್ಲಿ ದೇಶಿಯ ತಳಿಗಳಾದ ಕಾಟ್ಲಾ, ರೋಹು, ಮೃಗಾಲ್, ಸಾಮಾನ್ಯ ೆಂಡೆ ಮೀನುಗಳನ್ನು ಹೆಚ್ಚಾಗಿ ದಾಸ್ತಾನು ಮಾಡಲಾಗುತ್ತದೆ.

    ಇತ್ತೀಚಿನ ಕೆಲ ವರ್ಷಗಳಿಂದ ವಿದೇಶಿ ತಳಿಗಳಾದ ಗಿಫ್ಟ್ ಥಿಲಾಪಿಯಾ ಹಾಗೂ ಪಂಗೇಶಿಯಸ್ ಮೀನುಗಳಿಗೆ ಬೇಡಿಕೆ ಹೆಚ್ಚಿದೆ.ಈ ಮೀನುಗಳು ಕಡಿಮೆ ಅವಧಿಯಲ್ಲಿ ಉತ್ತಮ ಇಳುವರಿ ಮತ್ತು ಸ್ವಾದಿಷ್ಟ ರುಚಿ ಇರುವುದರಿಂದ ಬೇಡಿಕೆ ಹೆಚ್ಚಾಗಿದೆ.


    ಹೊಸದಾಗಿ ಮೀನು ಕೃಷಿ ಮಾಡಲು ಬರುವ ರೈತರಿಗೆ ಇಲಾಖೆ ಅಗತ್ಯ ನೆರವು ಕಲ್ಪಿಸುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಸಬ್ಸಿಡಿ, ಕೊಳ ನಿರ್ಮಾಣಕ್ಕೆ ಆರ್ಥಿಕ ನೆರವು ದೊರೆಯಲಿದೆ.
    ಅಣ್ಣಪ್ಪ ಸ್ವಾಮಿ, ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts