More

    ಈ ದೇಶದಲ್ಲಿ 12 ವರ್ಷಕ್ಕೇ ಸೆಕ್ಸ್​ಗೆ ಅನುಮತಿ! ಡಿವೋರ್ಸ್​ ಕೊಡೋದು ಕಾನೂನು ಬಾಹಿರವಂತೆ

    ಮನಿಲಾ: 18 ವರ್ಷಕ್ಕಿಂತ ಮೊದಲು ಸೆಕ್ಸ್​ ಹೊಂದುವುದು ಕಾನೂನು ಬಾಹಿರ ಎಂದು ಭಾರತೀಯ ಸರ್ಕಾರ ಹೇಳುತ್ತದೆ. 18 ವರ್ಷಕ್ಕಿಂತ ಕೆಳಗಿನವರನ್ನು ಅಪ್ರಾಪ್ತರು ಎಂದು ಗುರುತಿಸಲಾಗುತ್ತಿದ್ದು, ಅವರಲ್ಲಿ ಈ ರೀತಿಯ ಲೈಂಗಿಕ ಚಟುವಟಿಕೆ ಸೂಕ್ತವಲ್ಲ ಎಂದು ಬಹುತೇಕ ರಾಷ್ಟ್ರಗಳು ಹೇಳುತ್ತವೆ. ಆದರೆ ಈ ಒಂದು ರಾಷ್ಟ್ರದಲ್ಲಿ 12 ವರ್ಷ ಮೇಲ್ಪಟ್ಟ ಮಕ್ಕಳು ಸೆಕ್ಸ್​ ಮಾಡಿದರೆ ಅದು ಕಾನೂನು ಬಾಹಿರ ಅಲ್ಲವಂತೆ. ಹಾಗೆಯೇ ಮದುವೆಯಾದ ಮೇಲೆ ವಿಚ್ಛೇದನ ಪಡೆಯುವುದು ಕಾನೂನು ಬಾಹಿರವಂತೆ.

    ಇದನ್ನೂ ಓದಿ: ಹಿಂದಿನ ರಾತ್ರಿ ಚಾಕು ಖರೀದಿಸಿದ್ದವ ಬೆಳಗ್ಗೆ ತಾಯಿ-ನಾದಿನಿಯ ಕುತ್ತಿಗೆಯನ್ನೇ ಸೀಳಿದ, 3 ವರ್ಷದ ಮಗುವನ್ನೂ ಬಿಡಲಿಲ್ಲ ಪಾಪಿ!

    ಈ ರೀತಿಯ ವಿಚಿತ್ರ ಕಾನೂನೊಂದು ಫಿಲಿಪ್ಪೀನ್ಸ್ ರಾಷ್ಟ್ರದಲ್ಲಿದೆ. ಅಲ್ಲಿ ಸೆಕ್ಸ್​ಗೆ 12 ವರ್ಷವಿದ್ದಾಗಲೇ ಅನುಮತಿ ನೀಡಲಾಗುತ್ತದೆ. ಹಾಗಿದ್ದರೂ ಅತಿ ಹೆಚ್ಚು ಮಕ್ಕಳ ಮೇಲೆ ಅತ್ಯಾಚಾರವಾಗುವ ರಾಷ್ಟ್ರಗಳಲ್ಲಿ ಈ ರಾಷ್ಟ್ರದ ಹೆಸರೂ ಕೇಳಿಬಂದಿದೆ. ಇಲ್ಲಿನ ಪ್ರತಿ 5 ಮಕ್ಕಳಲ್ಲಿ ಒಬ್ಬರಾದರೂ ಲೈಂಗಿಕ ಕಿರುಕುಳ ಅನುಭವಿಸುತ್ತಾರೆ. ಕರೊನಾ ಆರಂಭವಾದ ಮೇಲಂತೂ ಆನ್​ಲೈನ್​ ಮೂಲಕ ಲೈಂಗಿಕ ಕಿರುಕುಳ ನೀಡುವವರ ಸಂಖ್ಯೆಯೂ ಹೆಚ್ಚಾಗಿದಿಯಂತೆ.

    ಇದನ್ನೂ ಓದಿ: ಪೊಲೀಸ್ ಕೊಲೆ ಯತ್ನ ಮತ್ತೆ ಆರು ಮಂದಿ ಬಂಧನ ಮಾಯಾ ಗ್ಯಾಂಗ್ ಕೃತ್ಯ

    ಸೆಕ್ಸ್​ ಅನುಮತಿ ವಯಸ್ಸನ್ನು ಹೆಚ್ಚಿಸಬೇಕು ಎಂದು ಈ ಹಿಂದಿನಿಂದಲೂ ಅನೇಕ ಹೋರಾಟಗಾರರು ಕೇಳುತ್ತಲೇ ಬಂದಿದ್ದಾರೆ. ಸೆಕ್ಸ್​ ಅನುಮತಿ ವಯಸ್ಸನ್ನು 16 ವರ್ಷಕ್ಕೆ ಏರಿಸಬೇಕೆಂದು ಕೂಗು ಕೇಳಿಬರುತ್ತಿದೆ. ಈ ಕುರಿತಾಗಿ ಕರಡನ್ನು ಮಂಡಿಸಲಾಗಿದ್ದು ಅದನ್ನು ಅಲ್ಲಿನ ಕೆಳಮನೆ ಅನುಮೋದಿಸಿದೆ. ಆದರೆ ಇನ್ನೂ ಮೇಲ್ಮನೆಯಲ್ಲಿ ಕರಡು ಅನುಮೋದನೆಯಾಗುವುದು ಬಾಕಿಯಿದೆ. (ಏಜೆನ್ಸೀಸ್​)

    ಮದ್ವೆಗೆ ಬರ್ದಿದ್ರೂ ಉಡುಗೊರೆ ಹಾಕಿ! ಲಗ್ನಪತ್ರಿಕೆಯಲ್ಲೇ ಗೂಗಲ್​ ಪೇ, ಫೋನ್​ ಪೇ ಕ್ಯೂಆರ್​ ಕೋಡ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts