More

    12 ಸಾವಿರ ದಂಡ ವಸೂಲಿ

    ಲಕ್ಷೆ್ಮೕಶ್ವರ: ಸಂಡೇ ಲಾಕ್​ಡೌನ್​ಗೆ ಪಟ್ಟಣ ಸೇರಿ ತಾಲೂಕಿನೆಲ್ಲೆಡೆ ಉತ್ತಮ ಬೆಂಬಲ ವ್ಯಕ್ತವಾಯಿತು. ಇದರ ಮಧ್ಯೆ ನಿಯಮ ಉಲ್ಲಂಘಿಸಿ ರಸ್ತೆಗಳಿದ ಹಾಗೂ ಮಾಸ್ಕ್ ಧರಿಸದೇ ಓಡಾಡುತ್ತಿದ್ದವರಿಂದ ಪೊಲೀಸರು 12,000 ರೂ. ದಂಡ ವಸೂಲಿ ಮಾಡಿದರು.

    ವಾಹನ ಮತ್ತು ಜನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಪಟ್ಟಣದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತ ಕ್ರಮವಾಗಿ ಮುಖ್ಯ ಬಜಾರ್ ರಸ್ತೆಗಳು ಸೇರಿ ಪಟ್ಟಣದ ಅನೇಕ ಕಡೆ ಸೀಲ್​ಡೌನ್ ಮಾಡಿ ಮುಳ್ಳುಕಂಟಿ ಹಚ್ಚಿದ್ದರಿಂದ ಭಾನುವಾರ ನೀರವ ಮೌನ ಆವರಿಸಿತ್ತು.

    ಗ್ರಾಮೀಣ ಪ್ರದೇಶದಲ್ಲಿಯೂ ಸೋಂಕಿನಿಂದ ಜನತೆ ಭಯಭೀತಗೊಂಡಿದ್ದು, ಮಾಡಳ್ಳಿ, ಇತರೆಡೆ ಜನತೆ ಸ್ವಯಂ ಪ್ರೇರಿತ ವ್ಯಾಪಾರ-ವಹಿವಾಟು ಬಂದ್ ಮಾಡಿಕೊಂಡಿದ್ದಾರೆ.

    ಹಾಲು, ಹಣ್ಣು, ತರಕಾರಿ, ಔಷಧ, ಕೃಷಿ ಪರಿಕರ ಸೇರಿ ಅವಶ್ಯ ವಸ್ತುಗಳ ಮಾರಾಟಕ್ಕೆ ಅನುಮತಿಯಿದ್ದರೂ ಪಟ್ಟಣದಲ್ಲಿ ಎಲ್ಲ ರೀತಿಯ ವ್ಯಾಪಾರ-ವಹಿವಾಟು ಸಂಪೂರ್ಣ ಸ್ತಬ್ಧವಾಗಿತ್ತು. ಸಾರಿಗೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

    ಪಟ್ಟಣದ ಶಿಗ್ಲಿ ನಾಕಾ, ಗದಗ ಅಗಸಿ, ಪಂಪ್ ವೃತ್ತ, ಸೋಮೇಶ್ವರ ಪಾದಗಟ್ಟಿ ಹತ್ತಿರ ನಿಂತಿದ್ದ ಪೊಲೀಸರು ಲಾಕ್​ಡೌನ್ ನಿಯಮ ಉಲ್ಲಂಘಿಸಿ ಹೊರಗಡೆ ಸುತ್ತಾಡಲು ಬಂದವರಿಗೆ ದಂಡ ವಿಧಿಸಿ, ಲಾಟಿ ರುಚಿ ತೋರಿಸಿ, ಎಚ್ಚರಿಕೆ ನೀಡಿದರು. ಸಿಪಿಐ ವಿಕಾಸ ಪಿ.ಎಲ್., ಶಿವಯೋಗಿ ಲೋಹಾರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಯಿತು.

    10 ಸಾವಿರ ರೂ. ದಂಡ ವಸೂಲಿ: ಗಜೇಂದ್ರಗಡ ಪಟ್ಟಣದಲ್ಲಿ ಭಾನುವಾರ ಕರ್ಫ್ಯೂ ಉಲ್ಲಂಘಿಸಿ ಬೀದಿಗಿಳಿದ ಜನರಿಗೆ ಪೊಲೀಸರು ಬಿಸಿ ಮುಟ್ಟಿಸಿದರು. ಅನಗತ್ಯವಾಗಿ ರಸ್ತೆಗಿಳಿದ 18 ಬೈಕ್, 2 ಕಾರ್ ವಶಪಡಿಸಿಕೊಂಡು 10 ಸಾವಿರ ರೂ. ದಂಡ ವಸೂಲಿ ಮಾಡಿದ್ದಾರೆ.

    ಹಾಲು, ಔಷಧ ಅಂಗಡಿಗಳನ್ನು ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳು ಬಂದ್ ಆಗಿದ್ದವು. ಬೆಳಗ್ಗೆಯಿಂದಲೇ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು. ಪಟ್ಟಣದ ಬಸ್ ನಿಲ್ದಾಣ, ಜೋಡು ರಸ್ತೆ, ಕುಷ್ಟಗಿ ರಸ್ತೆ, ರೋಣ ರಸ್ತೆ, ಕಾಲಕಾಲೇಶ್ವರ ವೃತ್ತ, ದುರ್ಗಾ ವೃತ್ತ ಸೇರಿ ಪ್ರಮುಖ ರಸ್ತೆಗಳು ಬಿಕೋ ಎನ್ನುತ್ತಿದ್ದವು. ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದವರಿಗೆ ಪೊಲೀಸರು ತಿಳಿವಳಿಕೆ ನೀಡಿದರು.

    ಪಿಎಸ್​ಐ ಗುರುಶಾಂತ ದಾಶ್ಯಾಳ, ಎಎಸ್​ಐ ಎಚ್.ಎಲ್. ಭಜಂತ್ರಿ, ಕೆ.ಎಚ್. ಪಾಟೀಲ, ಸುಭಾಸ ಧಾಡಿಬಾಯಿ, ಪೊಲೀಸ್ ಕಾನ್ಸ್​ಟೇಬಲ್​ಗಳಾದ ಸುರೇಶ ಶಾವಿ, ಸುರೇಶ ಮಂತಾ, ಪ್ರಕಾಶ ಭೂಸನೂರಮಠ, ಜೆ.ಡಿ. ಪೂಜಾರ, ಎನ್.ಡಿ. ಹಲಬಾಗಿಲ, ವೀರೇಶ ಪಾಟೀಲ, ಇತರರು ಭದ್ರತೆಯಲ್ಲಿ ತೊಡಗಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts