More

    ಬಾಳೆ ಬೆಳೆದು ಬಂಪರ್ ಲಾಭಗಳಿಸಿದ ರೈತ

    12 ಲಕ್ಷ ರೂ. ವರಮಾನ, ತೋಟಗಾರಿಕೆ ಇಲಾಖೆ, ಸಹಾಯಧನ, 12 lakh Rs. Revenue, Horticulture Department, Subsidy,
    ಅಳವಂಡಿ: ರೈತರು ಇತ್ತೀಚಿನ ವರ್ಷಗಳಲ್ಲಿ ತೋಟಗಾರಿಕೆ ಬೆಳೆಗಳಾದ ಡ್ರ್ಯಾಗನ್ ಫ್ರೂಟ್, ಪಪ್ಪಾಯ, ಬಾಳೆ, ನುಗ್ಗೆ, ದಾಳಿಂಬೆ, ಪೇರಲ, ಸಪೋಟ, ನೇರಳೆ ಬೆಳೆಗಳತ್ತ ಚಿತ್ತ ಹರಿಸಿದ್ದು, ಲಾಭದತ್ತ ಮುಖ ಮಾಡಿದ್ದಾರೆ. ತೋಟಗಾರಿಕೆ ಇಲಾಖೆಯೂ ಸಹ ಬೆಳೆಗಾರರಿಗೆ ಸಹಾಯಧನ ಹಾಗೂ ಮಾರ್ಗದರ್ಶನ ನೀಡುತ್ತಿದೆ.

    ಅಳವಂಡಿ ಸಮೀಪದ ಡಂಬ್ರಳ್ಳಿಯ ಪಾಂಡುರಂಗ ನಂದನಗೌಡ ಎಂಬ ರೈತ, ತಮ್ಮ ನಾಲ್ಕು ಎಕರೆ ಜಮೀನಿನಲ್ಲಿ ಜಿ-9 ತಳಿಯ ಬಾಳೆ ಬೆಳೆದಿದ್ದು, ಪ್ರತಿ ಸಸಿ 12 ರೂ.ನಂತೆ ಖರೀದಿಸಿ 5600 ಬಾಳೆ ಸಸಿ ನಾಟಿ ಮಾಡಿದ್ದಾರೆ.

    ಸಸಿಗೆ 68 ಸಾವಿರ, ಉಳುಮೆ, ಕೊಟ್ಟಿಗೆ ಗೊಬ್ಬರ, ರಾಸಾಯನಿಕ ಗೊಬ್ಬರ, ತುಂತುರು ನೀರಿನ ಘಟಕ ಅಳವಡಿಕೆ, ಕೂಲಿಕಾರರು ಇತರ ಸೇರಿ ಒಟ್ಟು 6 ಲಕ್ಷ ರೂ. ಖರ್ಚು ಮಾಡಿದ್ದಾರೆ. ಸರ್ಕಾರದಿಂದ 90 ಸಾವಿರ ರೂ. ಸಹಾಯಧನ ಸಿಕ್ಕಿದೆ. ನಾಲ್ಕು ಎಕರೆ ಬಾಳೆ ಮಾರಾಟದಿಂದ 18 ಲಕ್ಷ ರೂ. ಆದಾಯ ಗಳಿಸಿದ್ದು, 6 ಲಕ್ಷ ರೂ. ಖರ್ಚು ಕಳೆದು 12 ಲಕ್ಷ ರೂ. ಲಾಭ ಪಡೆದು ಇತರರಿಗೆ ಮಾದರಿಯಾಗಿದ್ದಾರೆ.

    ಬಾಳೆ ಬೆಳೆದು ಬಂಪರ್ ಲಾಭಗಳಿಸಿದ ರೈತ

    ತೋಟಗಾರಿಕೆ ಇಲಾಖೆಯ ಸಹಾಯಧನ ಹಾಗೂ ಸಲಹೆಯಂತೆ ರೈತ ಬಾಳೆಯನ್ನು ಉತ್ತಮವಾಗಿ ಪೋಷಣೆ ಮಾಡಿ ಬೆಳೆಸಿದ್ದು, ಇದಕ್ಕೆ ತಕ್ಕಂತೆ ಅವರಿಗೆ ಲಾಭ ಸಿಕ್ಕಿದೆ. ಇತರ ರೈತರು ಯೋಜನೆಯ ಲಾಭ ಪಡೆದುಕೊಂಡು ಆರ್ಥಿಕವಾಗಿ ಸಬಲರಾಗಬೇಕು.
    ಬಸವರಾಜ ರಾಂಪೂರ
    ಸಹಾಯಕ ತೋಟಗಾರಿಕೆ ಅಧಿಕಾರಿ, ಅಳವಂಡಿ

    ತೋಟಗಾರಿಕೆ ಇಲಾಖೆ ಅಧಿಕಾರಿಗಳ ಮಾರ್ಗದರ್ಶನದಂತೆ ನಾಲ್ಕು ಎಕರೆ ಬಾಳೆ ಬೆಳೆದಿದ್ದು ಉತ್ತಮ ಫಸಲು ಬಂದಿದೆ. ಪ್ರತಿ ಬಾಳೆ ಗೊನೆಗೆ 360 ರೂ.ನಂತೆ ಮಾರಾಟ ಮಾಡಿದ್ದು , ಖರ್ಚು ಕಳೆದು 12 ಲಕ್ಷ ರೂ. ಲಾಭ ಬಂದಿದೆ.
    ಪಾಂಡುರಂಗ ನಂದನಗೌಡ ಡಂಬ್ರಳ್ಳಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts