More

    4 ದಿನಗಳಲ್ಲಿ 12 ಬಲಿ: ಕಾನೂನು ಹಕ್ಕು ಇಲ್ಲದಿದ್ರೆ ಸುಮ್ಮನೆ ಮನೆಗೆ ನಡೆಯಿರಿ ಎಂದ ತಾಲಿಬಾನ್..!​

    ಕಾಬುಲ್​: ಅಮೆರಿಕ ತನ್ನ ಸೇನೆಯನ್ನು ಹಿಂತೆಗೆದುಕೊಂಡ ಬಳಿಕ ಆಫ್ಘಾನಿಸ್ತಾನ​​ ಮೇಲಿನ ಆಕ್ರಮಣವನ್ನು ಆರಂಭಿಸಿದ ತಾಲಿಬಾನ್​ ಬಂಡುಕೋರರು ಇಡೀ ಆಫ್ಘಾನ್​ ರಾಷ್ಟ್ರವನ್ನೇ ತನ್ನ ತೆಕ್ಕೆಗೆ ಹಾಕಿಕೊಂಡಿದ್ದು, ತನ್ನ ಕಠೋರ ನಿಲುವುಗಳಿಂದ ರಕ್ತದೊಕುಳಿ ಆರಂಭಿಸಿದೆ. ಇಡೀ ಆಫ್ಘಾನ್​ನಲ್ಲಿ ಸದ್ಯ ಮಾನವೀಯತೆ ಮರೆಯಾಗಿದೆ.

    ತಾಲಿಬಾನಿಗಳು ಕಳೆದ ಭಾನುವಾರ ಕಾಬುಲ್​ ವಶಪಡಿಸಿಕೊಳ್ಳುತ್ತಿದಂತೆ ಅವರ ಅಟ್ಟಹಾಸಕ್ಕೆ ಬೆದರಿ ಆಫ್ಘಾನ್​ ಪ್ರಜೆಗಳು ಏರ್​ಪೋರ್ಟ್​ನ ಧಾವಿಸಿ ಬಂದರು. ದೇಶ ತೊರೆಯುವ ಯತ್ನದಲ್ಲಿ ಕೆಲವರು ಸಫಲವಾದರೆ, ಇನ್ನು ಕೆಲವರು ತಾಲಿಬಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

    ಭಾನುವಾರದಿಂದ ಇಲ್ಲಿಯವರೆಗೂ ಕಾಬುಲ್​ ಏರ್​ಪೋರ್ಟ್ ಸುತ್ತ ಸುಮಾರು 12 ಮಂದಿಯನ್ನು ಗುಂಡಿಟ್ಟು ಹತ್ಯೆ ಮಾಡಲಾಗಿದೆ. ನ್ಯಾಟೋ ಮತ್ತು ತಾಲಿಬಾನ್​ ಅಧಿಕಾರಿಗಳು 12 ಸಾವು ಸಂಭವಿಸಿರುವ ಬಗ್ಗೆ ಖಚಿತಪಡಿಸಿದೆ.

    ವಿಮಾನ ನಿಲ್ದಾಣದ ಗೇಟ್‌ಗಳಲ್ಲಿ ಜನಸಂದಣಿಯನ್ನು ತಡೆಯಲು ತಾಲಿಬಾನ್​ ಪ್ರಯತ್ನಿಸುತ್ತಿದ್ದು, ಯಾರಿಗೆ ಪಾಸ್​​ಪೋರ್ಟ್​, ವೀಸಾ ಮುಂತಾದ ಕಾನೂನು ಹಕ್ಕಿದೆ ಅವರು ದೇಶದಿಂದ ಹೊರಗೆ ಹೋಗಿ, ಕಾನೂನು ಹಕ್ಕು ಇಲ್ಲದಿದರೆ, ಸುಮ್ಮನೆ ಮನೆಗೆ ನಡೆಯಿರಿ ಎಂದು ತಾಲಿಬಾನ್​ ಬಂಡುಕೋರನೊಬ್ಬ ಸ್ಥಳೀಯರಿಗೆ ಎಚ್ಚರಿಕೆಯನ್ನು ನೀಡಿದ್ದಾನೆ.

    ಏರ್​ಪೋರ್ಟ್​ನಲ್ಲಿ ಯಾರಿಗೂ ತೊಂದರೆ ನೀಡಲು ನಾವು ಬಯಸುವುದಿಲ್ಲ ಎಂದು ಹೆಸರೇಳಿಕೊಳ್ಳಲು ಇಚ್ಛಿಸದ ತಾಲಿಬಾನ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. (ಏಜೆನ್ಸೀಸ್​)

    ‘ರಕ್ಷಾ ಬಂಧನ’: ಯುಪಿ ಮಹಿಳೆಯರಿಗೆ ಬಂಪರ್ ಗಿಫ್ಟ್ ನೀಡಿದ ಸಿಎಂ ಯೋಗಿ

    ಮತ್ತೆ ಕರಾಳತೆಯ ಭೀತಿ: ತಾಲಿಬಾನ್​ ಆಳ್ವಿಕೆಯಲ್ಲಿ ಹೆಣ್ಣುಮಕ್ಕಳಿಗೆ ಶಾಲೆ, ಉದ್ಯೋಗ ಅಪರಾಧವಾಗಿತ್ತು!

    ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ “ಮಹಾನಾಯಕ ಅಂಬೇಡ್ಕರ್” ಧಾರಾವಾಹಿಯ ಪ್ರೊಮೊ ಬಿಡುಗಡೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts