More

    ಬಡಗಿ ಪುತ್ರಿಗೆ 12 ಸ್ವರ್ಣ ಪದಕ

    ಶಿವಮೊಗ್ಗ: ಬಡಗಿ ಪುತ್ರಿ 12 ಸ್ವರ್ಣ ಪದಕ ಮತ್ತು 2 ನಗದು ಬಹುಮಾನ ಗಿಟ್ಟಿಸುವ ಮೂಲಕ ಕುವೆಂಪು ವಿವಿಯ 33ನೇ ಘಟಿಕೋತ್ಸವ ಘಟಿಕೋತ್ಸವದ ಕೇಂದ್ರಬಿಂದುವಾಗಿದ್ದರು. ಜ್ಞಾನ ಸಹ್ಯಾದ್ರಿ ಕನ್ನಡ ಭಾರತಿ ಎಂಎ ವಿದ್ಯಾರ್ಥಿನಿ ವಿ.ವಿಸ್ಮಿತಾ 12 ಚಿನ್ನದ ಪದಕ ಮತ್ತು 2 ನಗದು ಬಹುಮಾನಕ್ಕೆ ಪಾತ್ರರಾದರು.

    ಶಿಕಾರಿಪುರ ತಾಲೂಕು ಕುಸಗೂರು ಗ್ರಾಮದ ವಿರೇಶ್-ವಿಶಾಲಮ್ಮ ದಂಪತಿ ಪುತ್ರಿ ವಿಸಿತಾ, ಬಡತನ ತನ್ನ ಓದಿಗೆ ಎಂದೂ ಅಡ್ಡಿಯಾಗಲಿಲ್ಲ. ಈ ಸಾಧನೆ ಕೇವಲ ಒಂದು ಹಂತ, ಸಾಧಿಸುವುದು ಇನ್ನೂ ಸಾಕಷ್ಟಿದೆ. ಇಷ್ಟೊಂದು ಚಿನ್ನದ ಪದಕ ಪಡೆಯುತ್ತೇನೆಂಬ ನಿರೀಕ್ಷೆ ಇರಲಿಲ್ಲ. ಇದು ನನ್ನ ಸೌಭಾಗ್ಯ ಎಂದರು.
    ತಂದೆ-ತಾಯಿ, ಸಹೋದರ ಮಂಜುನಾಥ, ಗುರುಗಳ ಪ್ರೋತ್ಸಾಹದಿಂದ ಈ ಸಾಧನೆ ಮಾಡಲು ಸಾಧ್ಯವಾಗಿದೆ. ನಮ್ಮ ಕುಟುಂಬದಲ್ಲಿ ಸ್ನಾತಕೋತ್ತರ ಪದವಿ ಪಡೆದ ಮೊದಲಿಗಳು ನಾನೇ. ಮುಂದೆ ಪಿಎಚ್.ಡಿ ಮಾಡಬೇಕು. ಕನ್ನಡ ಕಲಿಯುವುದು ಮತ್ತು ಕಲಿಸುವುದು ನನ್ನ ಬಯಕೆ. ಕನ್ನಡ ನನಗೆ ಅನ್ನ ಕೊಟ್ಟಿದೆ. ಖಾಸಗಿ ಕಂಪನಿಗಳು ಕನ್ನಡ ತಂತ್ರಜ್ಞಾನವನ್ನು ಅಳವಡಿಸಿಕೊಂಡಿದ್ದೇ ಆದಲ್ಲಿ ವಿಶ್ವಮಟ್ಟದಲ್ಲಿ ಕನ್ನಡಕ್ಕೆ ಮಾನ್ಯತೆ ದೊರೆಯುವುದರಲ್ಲಿ ಸಂಶಯವಿಲ್ಲ. ಆ ನಿಟ್ಟಿನಲ್ಲಿ ನನ್ನ ಗುರಿ ಇರಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts