More

    ಮಾವಿನ ಮರದಡಿ ಮಲಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪ; ರಕ್ಷಣೆ ಮಾಡಿದ ಉರಗ ತಜ್ಞ ಹರೇಂದ್ರ

    ಚಿಕ್ಕಮಗಳೂರು: ಚಿಕ್ಕಮಗಳೂರಿನ ಎನ್.ಆರ್. ಪುರ ತಾಲೂಕಿನ ಸುಂಟಿಕೊಪ್ಪ ಕೆರೆ ಬಳಿಯ ಮಾವಿನ ಮರದ ಕೆಳಗೆ ಮಲಗಿದ್ದ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಉರಗ ತಜ್ಞ ಹರೇಂದ್ರ ಅವರು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಮಸೀದಿಯಲ್ಲಿ ಬಾಂಬ್: ಹುಸಿ ಕರೆ ಮಾಡಿದ್ದ ಆರೋಪಿ ಪೊಲೀಸರ ವಶಕ್ಕೆ, ಈತನಿಗಾಗಿ ಮೂರು ರಾಜ್ಯ ಸುತ್ತಿದ ಅಧಿಕಾರಿಗಳು​​

    ರಸ್ತೆಯಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಕಂಡ ದಾರಿಹೋಕರು ಗಾಬರಿಗೊಂಡಿದ್ದಾರೆ. ಕೂಡಲೇ ಉರಗ ರಕ್ಷಕರನ್ನು ಸ್ಥಳಕ್ಕೆ ಭೇಟಿ ನೀಡಿ, ಹಾವನ್ನು ಸುರಕ್ಷಿತ ಪ್ರದೇಶಕ್ಕೆ ಬಿಡುವಂತೆ ಕರೆ ಮಾಡಿ ತಿಳಿಸಿದ್ದಾರೆ. ಉರಗ ತಜ್ಞ ಹರೇಂದ್ರ ಅವರು ಆಗಮಿಸಿ ಕಿಂಗ್​ ಕೋಬ್ರಾವನ್ನು ಮಾವಿನ ಮರದ ಕೊಂಬೆಯನ್ನು ಉರುಳಿಸಿ ನಂತರ ರಕ್ಷಿಸಿದ್ದಾರೆ.

    ಇದನ್ನೂ ಓದಿ: ದೇವಸ್ಥಾನದ ಹೊರಗೆ ಬಿಟ್ಟ ನನ್ನ ಚಪ್ಪಲಿ ಕಳ್ಳತನವಾಗಿದೆಯೆಂದು ಎಫ್​ಐಆರ್​ ದಾಖಲಿಸಿದ ವ್ಯಕ್ತಿ!

    12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಹಿಡಿದು ಹತ್ತಿರದ ಅರಣ್ಯ ಪ್ರದೇಶಕ್ಕೆ ಬಿಡಲಾಗಿದೆ. ಇದು ಉರಗ ತಜ್ಞ ಹರೇಂದ್ರ ಅವರು ರಕ್ಷಣೆ ಮಾಡಿದ 303ನೇ ಕಿಂಗ್ ಕೋಬ್ರಾ ಎಂಬುದು ಗಮನಾರ್ಹ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡಿದೆ,(ಏಜೆನ್ಸೀಸ್).

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts