More

    ಸ್ಪೀಕರ್​ ಜೊತೆ ದುರ್ವರ್ತನೆಗಾಗಿ ಬಿಜೆಪಿಯ 12 ಶಾಸಕರು ಸಸ್ಪೆಂಡ್!

    ಮುಂಬೈ : ಮಹಾರಾಷ್ಟ್ರ ಸ್ಪೀಕರ್ ಇನ್-ಚೇರ್ ಭಾಸ್ಕರ್ ಜಾಧವ್ ಅವರು ಸೋಮವಾರ 12 ಬಿಜೆಪಿ ಶಾಸಕರನ್ನು ಸದನದಲ್ಲಿ ಅಶಿಸ್ತಿನಿಂದ ವರ್ತಿಸಿದ ಕಾರಣಕ್ಕಾಗಿ ಅಮಾನತುಗೊಳಿಸಿದ್ದಾರೆ. ಆದರೆ ಪ್ರತಿಪಕ್ಷಗಳು ವಿಧಾನಸಭಾ ಅಧಿವೇಶನದಲ್ಲಿ ಸ್ಪೀಕರ್ ಅವರೇ ಕೆಲವು ನಾಯಕರನ್ನು ನಿಂದಿಸಿದ್ದಾರೆ ಎಂದು ಆರೋಪಿಸಿವೆ.

    ಸ್ಪೀಕರ್ ಅವರನ್ನು ನಿಂದಿಸಿದ ಮತ್ತು ತಳ್ಳಾಡಿದ ಆರೋಪದ ಮೇಲೆ 12 ಶಾಸಕರನ್ನು ಒಂದು ವರ್ಷ ಅಮಾನತುಗೊಳಿಸುವ ನಿರ್ಣಯವನ್ನು ಅಧಿವೇಶನದಲ್ಲಿ ಅಂಗೀಕರಿಸಲಾಯಿತು. ಅಮಾನತುಗೊಳಿಸಲ್ಪಟ್ಟ ಶಾಸಕರೆಂದರೆ – ಸಂಜಯ್ ಕುಟೆ, ಆಶಿಶ್ ಶೆಲಾರ್, ಅಭಿಮನ್ಯು ಪವಾರ್, ಗಿರೀಶ್ ಮಹಾಜನ್, ಅತುಲ್ ಭಟ್ಕಲ್ಕರ್, ಪರಾಗ್ ಅಲವ್ನಿ, ಹರೀಶ್ ಪಿಂಪಾಲೆ, ರಾಮ್ ಸತ್ಪುಟೆ, ವಿಜಯ್ ಕುಮಾರ್ ರಾವಲ್, ಯೋಗೇಶ್ ಸಾಗರ್, ನಾರಾಯಣ್ ಕುಚೆ ಮತ್ತು ಕೀರ್ತಿಕುಮಾರ್ ಬಾಂಗ್ಡಿಯ.

    ಇದನ್ನೂ ಓದಿ: ಮಾಜಿ ಸಚಿವರ ಅಶ್ಲೀಲ ಸಿಡಿ ಪ್ರಕರಣ; ತನಿಖೆ ಮುಕ್ತಾಯ, ಅಂತಿಮ ವರದಿ ಸಿದ್ಧ, ಮುಂದೆ?

    “ಹೌಸ್​ ಅಜರ್ನ್​ ಆದಾಗ, ವಿಪಕ್ಷದ ನಾಯಕರು ನನ್ನ ಕೇಬಿನ್​ಗೆ ಬಂದು ನನ್ನನ್ನು ನಿಂದಿಸಿದರು” ಎಂದು ಹೇಳಿರುವ ಸ್ಪೀಕರ್​ ಜಾಧವ್​, ಈ ಘಟನೆಯ ಬಗ್ಗೆ ತನಿಖೆ ಆದೇಶಿಸಬೇಕೆಂದು ಸಂಸದೀಯ ವ್ಯವಹಾರಗಳ ಸಚಿವರಿಗೆ ಮನವಿ ಮಾಡಿದ್ದಾರೆ.

    ಆದರೆ ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನವಿಸ್ ಅವರು, “ಸರ್ಕಾರವು ಘಟನೆಯ ಬಗ್ಗೆ ಕಥೆಯೊಂದನ್ನು ಸೃಷ್ಟಿಸಿದ್ದು, 12 ಶಾಸಕರನ್ನು ಅಮಾನತುಗೊಳಿಸಿದೆ. ನಮ್ಮ ಶಾಸಕರು ಸ್ಪೀಕರನ್ನು ನಿಂದಿಸಲಿಲ್ಲ. ಬಿರುಸಿನ ಚರ್ಚೆ ನಡೆಯಿತು. ಆದರೆ ನಮ್ಮ ಹಿರಿಯ ಸದಸ್ಯ ಆಶೀಶ್ ಶೆಲಾರ್ ಅವರು ಎಲ್ಲಾ ಶಾಸಕರ ಪರವಾಗಿ ಸ್ಪೀಕರ್​ ಭಾಸ್ಕರ್ ಜಾಧವ್​ ಅವರಿಗೆ ಕ್ಷಮೆ ಕೇಳಿದರು. ನಂತರ, ಸರ್ಕಾರ ಶಾಸಕರನ್ನು ಸಸ್ಪೆಂಡ್ ಮಾಡುವ ಯೋಜನೆ ರೂಪಿಸಿತು” ಎಂದಿದ್ದಾರೆ. (ಏಜೆನ್ಸೀಸ್)

    “ನಾವು ಆಮೀರ್​ ಖಾನ್​-ಕಿರಣ್​ ರಾವ್​ರಂತೆ, ಭಾರತ-ಪಾಕ್​ನಂತಲ್ಲ”!

    VIDEO | ಆಕಾಶದಲ್ಲಿ ಹಾರುವ ಕಾರು​! ಕಲ್ಪನೆಯಲ್ಲ.. ನೀವೇ ನೋಡಿ

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts