ಕಬ್ಬೂರ: ಪಟ್ಟಣದ ಡಾ.ಪ್ರಭಾಕರ ಕೋರೆ ಕೋ-ಆಪ್ ಕ್ರೆಡಿಟ್ ಸೊಸೈಟಿ ಲಿ ಅಂಕಲಿ.(ಬಹುರಾಜ್ಯ) ಕಬ್ಬೂರ ಶಾಖೆಯ 2ನೇ ವಾರ್ಷಿಕೋತ್ಸವ ನಿಮಿತ್ತ ಮಂಗಳವಾರ ಮಹಾಲಕ್ಷ್ಮೀ ಪೂಜೆ ನೆರವೇರಿತು.
ಶಾಖೆ ಅಧ್ಯಕ್ಷ ರಾಘವೇಂದ್ರ ಸಾಹುಕಾರ ಮಾತನಾಡಿ, ಸೊಸೈಟಿ 11.41 ಕೋಟಿ ರೂ. ಠೇವಣಿ ಸಂಗ್ರಹಿಸಿ 2.25 ಕೋಟಿ ರೂ. ಸಾಲ ವಿತರಿಸಿದೆ. 11.77 ಕೋಟಿ ರೂ. ದುಡಿಯುವ ಬಂಡವಾಳ ಹೊಂದಿದೆ. 118 ಕೋಟಿ ರೂ. ವಾರ್ಷಿಕ ವಹಿವಾಟು ನಡೆಸಿ 5.7 ಲಕ್ಷ ರೂ. ಲಾಭ ಗಳಿಸಿದೆ ಎಂದರು.
ವ್ಯವಸ್ಥಾಪಕ ನಿರ್ದೇಶಕ ಡಿ.ಎಸ್. ಕರೋಶಿ, ಹಾಗೂ ಶಾಖೆಯ ಸಲಹಾ ಸಮಿತಿಯ ಉಪಾಧ್ಯಕ್ಷ ಬಸಗೌಡ ಬಸಗೌಡನವರ, ನಿರ್ದೇಶಕರಾದ ಶಿವಾನಂದ ಮಠಪತಿ, ಮಲ್ಲಿಕಾರ್ಜುನ ಬೆಲ್ಲದ, ಚೇತನ ಮುಗಳಖೋಡ, ಮೈಬೂಬ್ ಇಮಾಮಸಾಬ್ ಮುಲ್ತಾನಿ, ಶಂಕರಯ್ಯ ಮಠಪತಿ, ಶ್ರೀಶೈಲ ಮಠದ, ಉಮೇಶ ಕಾಮಗೌಡ, ಜಯಾನಂದ ಹಿತ್ತಲಮನಿ, ಶಿವರಾಯ ಸನದಿ, ಅದೃಶ್ಯಪ್ಪ ವಂಟಮೂರೆ ಇತರಿದ್ದರು. ಶಾಖಾ ವ್ಯವಸ್ಥಾಪಕ ಅಪ್ಪಾಸಾಹೇಬ ಖೋತ ಸ್ವಾಗತಿಸಿ ವಂದಿಸಿದರು.