More

    114 ಮಿ.ಮೀ ಮಳೆ ಸೃಷ್ಟಿಸಿದೆ ಹಲವು ಅವಾಂತರ: ಮನೆಗೆ ನುಗ್ಗಿದ ನೀರು, ತಹಸೀಲ್ದಾರ್‌ಗೆ ದೂರು

    ಮುಳಬಾಗಿಲು: ನಗರದಲ್ಲಿ ಬುಧವಾರ ಸಂಜೆ ಸುರಿದ ಧಾರಾಕಾರ ಮಳೆಗೆ (114.2 ಮಿ.ಮೀ) ನಗರದ ಹಲವು ಕಡೆ ಮನೆಗಳಿಗೆ ನೀರು ನುಗ್ಗಿದೆ.

    ಸಂತೇ ಮೈದಾನದಲ್ಲಿರುವ ಸಾಯಿಬಾಬಾ, ಓಂಶಕ್ತಿ ದೇವಸ್ಥಾನದ ಆವರಣಗಳಿಗೆ ಚರಂಡಿ ನೀರು ನುಗ್ಗಿತ್ತು. ತೋಟಲಪಾಳ್ಯ, ಸಂತೇಮೈದಾನ, ಸೋಮೇಶ್ವರಪಾಳ್ಯ ವಾರ್ಡ್‌ನ ಮನೆಗಳಿಗೂ ಮಳೆ ನೀರು ನುಗ್ಗಿದ್ದು ಜನರು ರಾತ್ರಿಯೆಲ್ಲ್ಲ ಜಾಗರಣೆ ಮಾಡಬೇಕಾಯಿತು.
    ರಾ.ಹೆ 75ರಲ್ಲಿ ನಿರ್ಮಿಸಿರುವ ಅವೈಜ್ಞಾನಿಕ ಕಾಲುವೆ ಬ್ಲಾಕ್ ಆಗುವುದು ಒಂದೆಡೆಯಾದರೆ ರಾಜಕಾಲುವೆಯಿಂದ ಬರುವ ನೀರು ಚಿಕ್ಕ ಕಾಲುವೆಯಲ್ಲಿ ಹೋಗಲು ಸಾಧ್ಯವಾಗದೆ ರಸ್ತೆ ಮೇಲ್ಭಾಗದಲ್ಲೂ ಎರಡು ಅಡಿ ನೀರು ನಿಂತು ವಾಹನ ಸಂಚಾರಕ್ಕೂ ಸಂಚಕಾರ ತಂದಿತ್ತು. ಈ ಬಗ್ಗೆ ಹಲವು ಬಾರಿ ಪತ್ರಿಕೆಯಲ್ಲಿ ವರದಿ ಪ್ರಕಟಿಸಿದರೂ ಗಮನಹರಿಸದ ತಾಲೂಕು ಮತ್ತು ಜಿಲ್ಲಾಡಳಿತ ಇನ್ನಾದರೂ ಗಮನಹರಿಸಬೇಕೆಂಬ ಆಗ್ರಹ ಸಾರ್ವಜನಿಕರದ್ದಾಗಿದೆ.

    ಯುವ ವಕೀಲರಿಂದ ದೂರು: ಜೈ ಯುವಸೇನೆ ಅಧ್ಯಕ್ಷ ವಕೀಲ ರಂಜಿತ್ ಕುಮಾರ್ ಅವರು ಗುರುವಾರ ತಹಸೀಲ್ದಾರ್ ಆರ್.ಶೋಭಿತಾ ಅವರಿಗೆ ದೂರು ಸಲ್ಲಿಸಿ, ಅವೈಜ್ಞಾನಿಕ ಚರಂಡಿಗಳ ನಿರ್ಮಾಣದಿಂದಾಗಿ ಹಾಗೂ ರಾಜಕಾಲುವೆ ಒತ್ತುವರಿಯಿಂದ ಮಳೆಯಾದರೆ ಚರಂಡಿ ತ್ಯಾಜ್ಯ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆಗಳಿಗೆ, ಮನೆಗಳಿಗೆ ನುಗ್ಗುತ್ತಿದೆ, ಇದರಿಂದ ರೋಗ-ರುಜಿನೆಗಳು ಬರುತ್ತಿದ್ದು, ಈ ಬಗ್ಗೆ ತಾಲೂಕು ಆಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

    ನಗರಸಭೆಯಿಂದ ಗುರುವಾರ ಬೆಳಗ್ಗೆ ರಸ್ತೆ ವಿಭಜಕ ತೆರವು: ಬುಧವಾರ ರಾತ್ರಿ ಸುರಿದ ಮಳೆಯಿಂದ ರಸ್ತೆಯಲ್ಲಿ 2 ಅಡಿ ನೀರು ನಿಂತು ರಸ್ತೆ ವಿಭಜಕದ ಮೇಲೆ ಹರಿದು ಒಂದಷ್ಟು ನೀರು ಹೊರಹೋಗಿದ್ದರಿಂದ ಹೆಚ್ಚಿನ ಅನಾಹುತ ತಪ್ಪಿತು. ಬೆಳಗ್ಗೆ ನಗರಸಭೆ ಅಧ್ಯಕ್ಷ ರಿಯಾಜ್ ಅಹ್ಮದ್ ಅವರು ಪೌರಕಾರ್ಮಿಕರು ಸಿಬ್ಬಂದಿ ಜತೆ ಜೆಸಿಬಿಯೊಂದಿಗೆ ಆಗಮಿಸಿ ರಾಜಕಾಲುವೆ ಮುಂಭಾಗದಲ್ಲಿರುವ ರಾ.ಹೆ 75ರ ರಸ್ತೆ ವಿಭಜಕ ತೆರವುಗೊಳಿಸಿ ಮಳೆಯಾದರೆ ನೀರು ರಸ್ತೆ ಮೇಲೆ ಹರಿದು ಹೋಗುವಂತೆ ಮಾಡಿ ಕೈತೊಳೆದುಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts