More

    ಕರೊನಾಕ್ಕೆ ಕಣ್ಮುಂದೆಯೇ ಬಲಿಯಾದ ಅಪ್ಪ, ಅಮ್ಮ ಕ್ವಾರಂಟೈನ್​ಗೆ- ಒಂಟಿ ಬಾಲಕನ ಮನಕಲಕುವ ಕಥೆ

    ಮುಂಬೈ: ಇದು ಮುಂಬೈನ 11 ವರ್ಷದ ಬಾಲಕನ ಕಥೆ. ಈತನ ಹೆಸರು ಹರ್ಷಿಲ್​ ಸಿಂಗ್​. ಈತನ ತಂದೆ ಸುರೇಂದ್ರ ಸಾಫ್ಟ್​ವೇರ್​ ಇಂಜಿನಿಯರ್​. ತೀವ್ರವಾಗಿ ಜ್ವರದಿಂದ ಬಳಲುತ್ತಿದ್ದ ತಂದೆಗೆ ಕರೊನಾ ಸೋಂಕು ತಗುಲಿಬಿಟ್ಟಿತ್ತು. ಅದು ದೃಢವಾಗುವಷ್ಟರಲ್ಲಿಯೇ ಅನಾರೋಗ್ಯ ತೀವ್ರವಾಗಿ ಹದಗೆಟ್ಟಿತ್ತು.

    ಪರೀಕ್ಷೆ ಮಾಡಿಸಿ ಬಂದ ನಂತರ ತಮಗೆ ಕರೊನಾ ವೈರಸ್​ ತಗುಲಿದೆ ಎಂದು ತಿಳಿಯುತ್ತಿದ್ದಂತೆಯೇ ನೊಂದುಕೊಂಡಿದ್ದ ಸುರೇಂದ್ರ ಅವರು ಎರಡೇ ದಿನದಲ್ಲಿ ಮೃತಪಟ್ಟರು. 11 ವರ್ಷದ ಹರ್ಷಿಲ್​ ಹಾಗೂ ಆತನ ತಾಯಿಗೆ ಇದು ನುಂಗಲಾರದ ತುತ್ತಾಯಿತು.

    ಇದನ್ನೂ ಓದಿ: ಸಾಧುಗಳ ಬರ್ಬರ ಹತ್ಯೆಯ ರಹಸ್ಯ ಬಯಲಾಗುವ ಮೊದಲೇ ಅಪಘಾತದಲ್ಲಿ ವಕೀಲನ ನಿಗೂಢ ಸಾವು!

    ಮನೆಯಲ್ಲಿ ಒಬ್ಬರಿಗೆ ವೈರಸ್​ ತಗುಲಿದೆ ಎಂದರೆ ಎಲ್ಲರನ್ನೂ ಪರೀಕ್ಷೆ ಮಾಡುವಂತೆ ಹರ್ಷಿಲ್​ ಅಮ್ಮನನ್ನೂ ಪರೀಕ್ಷೆಗೆ ಒಳಪಡಿಸಿದರು. ದುರದೃಷ್ಟಕ್ಕೆ ಅವರಿಗೂ ಕರೊನಾ ಪಾಸಿಟಿವ್​ ಬಂದಿತು. ಪತಿಯ ಸಾವನ್ನು ಅರಗಿಸಿಕೊಳ್ಳಲಾಗದ ಸಂದರ್ಭದಲ್ಲಿಯೇ ಅವರಿಗೆ ಬರಸಿಡಿಲು ಬಡಿದಂತಾಗಿತ್ತು. ಹರ್ಷಿಲ್​ನನ್ನು ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ಇಲ್ಲ ಎನ್ನುವುದು ದೃಢವಾಯಿತು.

    ಸೋಂಕು ಪೀಡಿತೆಯಾಗಿದ್ದ ತಾಯಿಯನ್ನು ಕಡ್ಡಾಯವಾಗಿ ಕ್ವಾರಂಟೈನ್​ಗೆ ಒಳಪಡಿಸಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಆರೋಗ್ಯ ಸಿಬ್ಬಂದಿ ಕರೆದುಕೊಂಡು ಹೋದರು. ಇದೀಗ ಮನೆಯಲ್ಲಿ ಒಂಟಿಯಾಗಿ ಇರುವ ಅನಿವಾರ್ಯತೆ ಹರ್ಷಿಲ್​ಗೆ. ಮನೆಯಲ್ಲಿಯೇ ಕ್ವಾರಂಟೈನ್​ಗೆ ಇದ್ದರೆ ಮಗನಿಗೂ ಸೋಂಕು ಹರಡುವ ಸಾಧ್ಯತೆ ಇರುವ ಕಾರಣ, ಅವರನ್ನು ಮನೆಯಲ್ಲಿ ಇರಕೂಡದು ಎಂದು ವೈದ್ಯರು ತಿಳಿಸಿದ್ದರು. ಅಪಾರ್ಟ್​ಮೆಂಟ್​ನಲ್ಲಿ ನೆರೆಹೊರೆಯವರು ಇರುವುದರಿಂದ ಅದೇ ಭರವಸೆ ಮೇರೆಗೆ ತಾಯಿ ಮಗನನ್ನು ಬಿಟ್ಟು ಹೋಗಿದ್ದಾರೆ.

    ಇದನ್ನೂ ಓದಿ: ಮಾತಾಡುವುದರಿಂದಲೂ ಹರಡುತ್ತಂತೆ ಕರೊನಾ: ಮುಚ್ಚಿದ ಪೆಟ್ಟಿಗೆಯಲ್ಲಿ ನಡೆಯಿತು ಸಂಶೋಧನೆ!

    ಕಣ್ಣಮುಂದೆಯೇ ತಂದೆಯ ಸಾವು, ತಾಯಿಯೂ ದೂರ. ಒಂಟಿಯಾಗಿಯೇ ಮನೆಯಲ್ಲಿ ಇರುವ ಪರಿಸ್ಥಿತಿ ಈ 11 ವರ್ಷದ ಬಾಲಕನ ಮೇಲೆ ಬಿದ್ದಿದೆ.

    ಮನೆಯಲ್ಲಿ ದಂಪತಿಗೆ ಸೋಂಕು ತಗುಲಿದ್ದರಿಂದ ನೆರೆಹೊರೆಯವರು ಇವನ ಬಳಿ ಬರಲು ಹಿಂಜರಿಯತೊಡಗಿದರು. ಆದರೆ ಅವರ ಮನೆಯ ಕೆಳಮಹಡಿಯಲ್ಲಿ ಇದ್ದ ಪಂಡಾರಂ ಕುಟುಂಬ ಈ ಹುಡುಗನಿಗೆ ಊಟದ ವ್ಯವಸ್ಥೆ ಮಾಡುತ್ತಿದೆ. ಈತನ ತಾಯಿಯ ಕ್ವಾರಂಟೈನ್​ ಅವಧಿ ಇನ್ನೂ ಮುಗಿದಿಲ್ಲ. ಒಮ್ಮೆ ನಡುವೆ ಮನೆಗೆ ಬಂದು ಹೋದದ್ದು ಬಿಟ್ಟರೆ ಮತ್ತೆ ಬಾಲಕ ಒಂಟಿಯಾಗಿಯೇ ಇದ್ದಾನೆ.

    ಇದನ್ನೂ ಓದಿ: ನಾಳೆಯಿಂದ ಕೆಲಸಕ್ಕೆ ಬರಬೇಡಿ: ಝೂಮ್​ ಆ್ಯಪ್ ನೋಡಿದ 3700 ಉದ್ಯೋಗಿಗಳು ಕಕ್ಕಾಬಿಕ್ಕಿ!

    ತಾನು ಕಳೆಯುತ್ತಿರುವ ಕರಾಳ ರಾತ್ರಿಯ ಬಗ್ಗೆ ನೆನೆದು ಭಯಪಡುತ್ತಾನೆ ಹರ್ಷಿಲ್​. ಬೆಳಗ್ಗೆ ಹೇಗೋ ಸಂಬಂಧಿಕರ ಜತೆ ಮಾತನಾಡಿ ಕಾಲ ಕಳೆಯುತ್ತೇನೆ. ಆದರೆ ರಾತ್ರಿಯ ಹೊತ್ತು ತುಂಬಾ ಭಯವಾಗುತ್ತದೆ. ಅಪ್ಪ- ಅಮ್ಮ ಎಲ್ಲರೂ ಕಣ್ಣ ಮುಂದೆ ಬರುತ್ತಾರೆ. ಅಪ್ಪ ಕೂಡ ಕೊನೆಯ ದಿನಗಳಲ್ಲಿ ಅನುಭವಿಸಿರುವ ನೋವು ಕಣ್ಣಮುಂದೆ ಬರುತ್ತದೆ. ತುಂಬಾ ಭಯವಾಗುತ್ತದೆ ಎನ್ನುವ ಬಾಲಕ ನಾನೀನು ತುಂಬಾ ಬೆಳೆದಿದ್ದೇನೆ. ಎಲ್ಲವನ್ನೂ ನಿಭಾಯಿಸುತ್ತೇನೆ ಎಂದೂ ಹೇಳುತ್ತಿದ್ದಾನೆ.

    ಈತನಿಗೆ ಊಟ ಕೊಡುತ್ತಿರುವ ವಿಮಾನಯಾನ ಸಂಸ್ಥೆಯ ಪಂಡರಾಂ ಕುಟುಂಬ ಹುಡುಗನ ಧೈರ್ಯವನ್ನು ಮೆಚ್ಚಿ ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಈ ಹುಡುಗನ ಧೈರ್ಯದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts