More

    ಬಸಾಪುರದಿಂದ 11 ಜನ ಅವಿರೋಧ ಆಯ್ಕೆ

    ಗುತ್ತಲ: ನಿರೀಕ್ಷೆಯಂತೆ ಬಸಾಪುರ ಗ್ರಾಮದ 11 ಗ್ರಾಪಂ ಸದಸ್ಯ ಸ್ಥಾನಗಳಿಗೆ ಗ್ರಾಮಸ್ಥರ ನಿರ್ಣಯದಂತೆ ಅವಿರೋಧವಾಗಿ ಆಯ್ಕೆ ಆಗಿದೆ.

    ಗ್ರಾಮದ ಅಧಿದೇವತೆ ಆಲದಮ್ಮ ದೇವಿ ದೇವಸ್ಥಾನ ನಿರ್ವಣಕ್ಕಾಗಿ ಗ್ರಾಮಸ್ಥರಲ್ಲಿ ವೈಮನಸ್ಸು ಉಂಟಾಗಬಾರದೆಂಬ ಗ್ರಾಮದ ಹಿರಿಯರು ಸೇರಿ ಗ್ರಾಪಂ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಧರಿಸಿದ್ದರು.

    ಒಟ್ಟು 15 ಸ್ಥಾನ ಬಲದ ಬಸಾಪುರ ಗ್ರಾ.ಪಂ. ಗೆ ಬಮ್ಮನಕಟ್ಟಿ ಗ್ರಾಮವೂ ಒಳಪಟ್ಟಿದ್ದು, ಇಲ್ಲಿನ 4 ಸ್ಥಾನಗಳಿಗೆ 13 ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ.

    ಬಸಾಪುರ ಗ್ರಾಮದ 11 ಸ್ಥಾನಗಳಿಗೆ ಆರಂಭದಲ್ಲಿಯೇ ಗ್ರಾಮದ ಮುಖಂಡರು, ಆಲದಮ್ಮ ದೇವಿ ದೇವಸ್ಥಾನ ಕಮಿಟಿಯವರು ಪರಸ್ಪರ ಸಮಾಲೋಚಿಸಿ ಎಲ್ಲ ರಾಜಕೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮದಲ್ಲಿ ಮೀಸಲಾತಿ ಅನ್ವಯ 11 ಜನರನ್ನು ಗುರುತಿಸಿ ಒಂದೇ ದಿನ ಎಲ್ಲರೂ ನಾಮಪತ್ರ ಸಲ್ಲಿಸಿದ್ದರು. ಇದಾದ ಬಳಿಕ ಅಸಮಾಧಾನಗೊಂಡ 12 ಆಕಾಂಕ್ಷಿಗಳು ನಾಮಪತ್ರ ಸಲ್ಲಿಸಿ, ಗ್ರಾಮಸ್ಥರ ತೀರ್ವನಕ್ಕೆ ಆಘಾತವನ್ನುಂಟು ಮಾಡಿದ್ದರು. ನಂತರ ಗ್ರಾಮಸ್ಥರು ಹಾಗೂ ರಾಜಕೀಯ ಪಕ್ಷಗಳ ಮುಖಂಡರು ರ್ಚಚಿಸಿ, ಆರಂಭದಲ್ಲಿ ನಾಮಪತ್ರ ಕೊಟ್ಟವರು ಹಾಗೂ ಬಂಡಾಯವಾಗಿ ಸ್ಪರ್ಧಿಸಿದ್ದವರ ಮಧ್ಯೆ ಅಂತಿಮವಾಗಿ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಉಳಿದ 12 ಜನರ ನಾಮಪತ್ರ ವಾಪಸ್ ತೆಗೆಸಿದರು. ಹೀಗಾಗಿ ಅವಿರೋಧ ಆಯ್ಕೆ ಸರಳವಾಯಿತು.

    ಅವಿರೋಧವಾಗಿ ಆಯ್ಕೆಯಾದವರು

    ಬಸಾಪುರ ವಾರ್ಡ್ 1: ಮಹದೇವಪ್ಪ ನಿಂಗಪ್ಪ ತಳವಾರ, ಕೆಂಚವ್ವ ಪರಮಪ್ಪ ಕಂಬಳಿ, ಜಯವ್ವ ಕರಿಯಪ್ಪ ಚಾವಡಿ, ಮರಿಯಪ್ಪ ಹನುಮಂತಪ್ಪ ಬಂಢಾರಿ.

    ಬಸಾಪುರ ವಾರ್ಡ್ 2: ಲಕ್ಷ್ಮೀ ಮಲ್ಲಪ್ಪ ಇಪ್ಪಿಕೊಪ್ಪ, ಹಂಪವ್ವ ಸಣ್ಣಹನುಮಂತಪ್ಪ ಬಳ್ಳಾರಿ, ರೇಣುಕಾ ದ್ಯಾಮಪ್ಪ ಹರಿಜನ, ತಿಪ್ಪಣ್ಣ ತಿರಕಪ್ಪ ದೊಡ್ಡಮನಿ.

    ಬಸಾಪುರ ವಾರ್ಡ್ 3: ನೀಲಪ್ಪ ನಿಂಗಪ್ಪ ಕಂಬಳಿ, ರಾಜೇಶ್ವರಿ ನಾಗಪ್ಪ ಭಜಂತ್ರಿ, ಪ್ರೇಮಕ್ಕ ನೀಲಪ್ಪ ಚಾವಡಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts